बेळगाव-गोवा महामार्गावर भीषण अपघात : दोन ठार, तीन गंभीर जखमी.
जोयडा (प्रतिनिधी) ; बेळगाव-गोवा राष्ट्रीय महामार्गावरील रामनगर-अनमोड घाट मार्गावर गवेगाळी क्रॉस येथे बुधवारी मध्यरात्री भीषण अपघात घडून दोन जणांचा जागीच मृत्यू झाला, तर तीन जण गंभीर जखमी झाल्याची दुर्दैवी घटना घडली. अपघात इतका भीषण होता की कार आणि टेम्पोच्या पुढील भागाचा अक्षरशः चुराडा झाला असून परिसरात काही काळ भीतीचे वातावरण निर्माण झाले होते.
मिळालेल्या माहितीनुसार, आंध्र प्रदेश पासिंगची कार (AP 02 BAN 0292) गोव्याहून कर्नाटकच्या दिशेने येत होती. त्याचवेळी कोंबड्यांनी भरलेला टेम्पो (GA 09 U 6990) गोव्याच्या दिशेने जात होता. संबंधित टेम्पो हा गोव्यातील केपे येथील असून कर्नाटकातून बॉयलर कोंबड्या घेऊन गोव्याकडे निघाला होता.
दरम्यान, गवेगाळी क्रॉस परिसरात कार चालकाने ओव्हरटेक करण्याचा प्रयत्न केला असता समोरून येणाऱ्या टेम्पोला जोरदार धडक बसली. धडकेचा आवाज दूरपर्यंत ऐकू गेला. या अपघातात दोन्ही वाहनांचे मोठ्या प्रमाणात नुकसान झाले असून टेम्पोतील कोंबड्याही रस्त्यावर विखुरल्या गेल्या.
या भीषण धडकेत कारमधील दोघांचा जागीच मृत्यू झाला. मृत दोघेही आंध्र प्रदेश येथील असल्याची प्राथमिक माहिती पोलिसांकडून मिळाली आहे. तसेच कार चालक आणि टेम्पोमधील नवरा-बायको गंभीर जखमी झाले असून त्यांना तातडीने उपचारासाठी जवळच्या रुग्णालयात दाखल करण्यात आले आहे. जखमींपैकी काहींची प्रकृती चिंताजनक असल्याचे समजते.
अपघाताची माहिती मिळताच स्थानिक नागरिक आणि प्रवाशांनी घटनास्थळी धाव घेत मदतकार्य सुरू केले. काही काळ महामार्गावरील वाहतूक विस्कळीत झाली होती. त्यानंतर पोलिसांनी घटनास्थळी पोहोचून वाहतूक सुरळीत केली.
ही दुर्घटना बुधवारी रात्री साधारण दीडच्या सुमारास घडल्याचे सांगितले जात आहे. सततचा पाऊस, घाट परिसरातील धोकादायक वळणे आणि वेगवान वाहनचालना यामुळे या मार्गावर अपघातांचे प्रमाण वाढत असल्याची चर्चा स्थानिकांमध्ये सुरू आहे.
या प्रकरणी रामनगर पोलीस ठाण्यात गुन्हा नोंद करण्यात आला असून पुढील तपास सुरू आहे.
ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : ಇಬ್ಬರು ಸಾವು, ಮೂವರು ಗಂಭೀರ ಗಾಯ.
ಜೋಯಿಡಾ : ಪ್ರತಿನಿಧಿ
ಬೆಳಗಾವಿ-ಗೋವಾ ರಾಷ್ಟ್ರೀಯ ಹೆದ್ದಾರಿಯ ರಾಮನಗರ-ಅನಮೋಡ್ ಘಾಟ್ ಮಾರ್ಗದ ಗವೆಗಾಳಿ ಕ್ರಾಸ್ ಬಳಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ ಕಾರು ಹಾಗೂ ಟೆಂಪೋದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕೆಲಕಾಲ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಲಭಿಸಿದ ಮಾಹಿತಿಯ ಪ್ರಕಾರ, ಆಂಧ್ರ ಪ್ರದೇಶ ನೋಂದಣಿಯ ಕಾರು (AP 02 BAN 0292) ಗೋವಾದಿಂದ ಕರ್ನಾಟಕದ ಕಡೆಗೆ ಬರುತ್ತಿತ್ತು. ಇದೇ ವೇಳೆ ಕೋಳಿಗಳಿಂದ ತುಂಬಿದ್ದ ಟೆಂಪೋ (GA 09 U 6990) ಗೋವಾ ಕಡೆಗೆ ತೆರಳುತ್ತಿತ್ತು. ಈ ಟೆಂಪೋ ಗೋವಾದ ಕೇಪೆ ಪ್ರದೇಶದದ್ದಾಗಿದ್ದು, ಕರ್ನಾಟಕದಿಂದ ಬ್ರಾಯ್ಲರ್ ಕೋಳಿಗಳನ್ನು ಸಾಗಿಸಿಕೊಂಡು ಗೋವಾಕ್ಕೆ ಹೊರಟಿತ್ತು.
ಈ ನಡುವೆ, ಗವೆಗಾಳಿ ಕ್ರಾಸ್ ಸಮೀಪ ಕಾರು ಚಾಲಕ ಓವರ್ಟೇಕ್ ಮಾಡಲು ಯತ್ನಿಸಿದಾಗ ಎದುರಿನಿಂದ ಬರುತ್ತಿದ್ದ ಟೆಂಪೋಗೆ ಭಾರೀ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಶಬ್ದ ದೂರದವರೆಗೆ ಕೇಳಿಬಂದಿದ್ದು, ಅಪಘಾತದಲ್ಲಿ ಎರಡೂ ವಾಹನಗಳಿಗೆ ಭಾರೀ ಹಾನಿಯಾಗಿದೆ. ಟೆಂಪೋದಲ್ಲಿದ್ದ ಕೋಳಿಗಳೂ ರಸ್ತೆ ಮೇಲೆ ಚದುರಿಬಿದ್ದವು.
ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಆಂಧ್ರ ಪ್ರದೇಶ ಮೂಲದವರು ಎಂಬ ಪ್ರಾಥಮಿಕ ಮಾಹಿತಿ ಪೊಲೀಸರಿಂದ ಲಭ್ಯವಾಗಿದೆ. ಅಲ್ಲದೆ, ಕಾರು ಚಾಲಕ ಹಾಗೂ ಟೆಂಪೋದಲ್ಲಿದ್ದ ಗಂಡ-ಹೆಂಡತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ಪ್ರಯಾಣಿಕರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಕೆಲಕಾಲ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರವನ್ನು ಸುಗಮಗೊಳಿಸಿದರು.
ಈ ದುರ್ಘಟನೆ ಬುಧವಾರ ರಾತ್ರಿ ಸುಮಾರು 1.30ರ ಸುಮಾರಿಗೆ ನಡೆದಿರುವುದಾಗಿ ತಿಳಿದುಬಂದಿದೆ. ನಿರಂತರ ಮಳೆ, ಘಾಟ್ ಪ್ರದೇಶದ ಅಪಾಯಕಾರಿ ತಿರುವುಗಳು ಹಾಗೂ ಅತಿವೇಗದ ವಾಹನ ಚಾಲನೆಯಿಂದ ಈ ಮಾರ್ಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಚರ್ಚೆ ಸ್ಥಳೀಯರಲ್ಲಿ ಕೇಳಿಬರುತ್ತಿದೆ.
ಈ ಕುರಿತು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

