खानापूर ब्लॉक काँग्रेस अध्यक्षपदासाठी इमरान तालिकोटी मैदानात!
खानापूर : प्रतिनिधी
खानापूर तालुका ब्लॉक काँग्रेस अध्यक्षपदासाठी देवराई येथील सामाजिक कार्यकर्ते, युवा काँग्रेसचे माजी अध्यक्ष तसेच गोधोळी तालुका पंचायत क्षेत्राचे माजी सदस्य इमरान रफिक अहमद तालिकोटी यांनी आपला अर्ज सादर केला आहे. काँग्रेस पक्षाच्या संघटन सृजन अभियान भाग-2 अंतर्गत खानापूर येथील शिवस्मारकात गुरुवारी, दि. 12 नोव्हेंबर रोजी झालेल्या बैठकीत त्यांनी वरिष्ठ नेत्यांकडे अध्यक्षपदासाठी आपली मागणी मांडली.
काँग्रेस पक्षाची संघटना अधिक मजबूत करणे, आगामी काळात संघटनात्मक बांधणीला गती देणे तसेच नव्याने दोन ब्लॉक काँग्रेस अध्यक्ष आणि पदाधिकाऱ्यांची नियुक्ती करण्यासंदर्भात चर्चा करण्यासाठी या बैठकीचे आयोजन करण्यात आले होते. या बैठकीला पक्ष निरीक्षक शाकीर सनदी, जिल्हाध्यक्ष बसवराज शेगावी यांच्यासह काँग्रेसचे वरिष्ठ नेते आणि कार्यकर्ते उपस्थित होते. पक्षाच्या दोन ब्लॉक अध्यक्षपदांसाठी एकूण दहा जणांनी अर्ज सादर केल्याचे समजते.
अल्पसंख्याक समाजाला प्रतिनिधित्व देण्याची मागणी….
इमरान तालिकोटी यांनी वरिष्ठ नेत्यांना सादर केलेल्या निवेदनात आपल्या राजकीय आणि संघटनात्मक कार्याचा उल्लेख केला आहे. गोधोळी विभागातून तालुका पंचायत सदस्य म्हणून कार्य करताना त्यांनी जनतेच्या प्रश्नांवर काम केले आहे. महाराष्ट्र एकीकरण समितीचे वर्चस्व असलेल्या गोधोळी भागातून काँग्रेस पक्षाचे पहिले सदस्य म्हणून निवडून येण्याचा मान मिळाल्याचे त्यांनी निवेदनात नमूद केले आहे.
युवा काँग्रेस अध्यक्ष म्हणून कार्यरत असताना तालुक्याच्या तळागाळात काँग्रेस पक्षाची संघटना मजबूत करण्यासाठी प्रयत्न केले. पक्षाचे विचार आणि कार्य जनतेपर्यंत पोहोचविण्यासाठी सातत्याने काम केले असल्याचेही त्यांनी स्पष्ट केले आहे.
1956 पासून आजपर्यंत खानापूर तालुक्यात अल्पसंख्याक समाजातील व्यक्तीला ब्लॉक काँग्रेस अध्यक्षपदाची संधी मिळालेली नसल्याचा मुद्दा उपस्थित करून यावेळी आपल्या उमेदवारीचा विचार करण्यात यावा, अशी मागणी त्यांनी केली आहे.
अध्यक्षपद मिळाल्यास पक्षाला मजबूत करण्याची ग्वाही…..
ब्लॉक काँग्रेस अध्यक्षपदाची जबाबदारी मिळाल्यास आगामी निवडणुकांमध्ये पक्षाच्या उमेदवारांना विजयी करण्यासाठी आपल्या पदाचा प्रभावी उपयोग करणार असल्याची ग्वाही इमरान तालिकोटी यांनी निवेदनातून दिली आहे. पक्ष संघटनेला बळकटी देणे, युवकांना व विविध समाजघटकांना एकत्र आणणे आणि जनसंपर्क वाढविणे यासाठी आपण प्रयत्नशील राहणार असल्याचे त्यांनी स्पष्ट केले आहे.
तालिकोटी कुटुंबीयांचा सामाजिक कार्याचा वारसा….
खानापूर तालुक्यात तालिकोटी कुटुंबीयांचे सामाजिक कार्याच्या माध्यमातून व्यापक परिचयाचे नाव आहे. इमरान तालिकोटी यांनी युवा काँग्रेस अध्यक्ष तसेच तालुका पंचायत सदस्य म्हणून केलेल्या कार्यामुळे त्यांची तालुक्यात चांगली ओळख निर्माण झाली आहे. त्यामुळे त्यांच्या ब्लॉक काँग्रेस अध्यक्षपदाच्या मागणीला पक्षातील अनेक कार्यकर्त्यांकडून पाठिंबा मिळत असल्याचे समजते.
तालुक्यात मुस्लिम अल्पसंख्याक समाजाचे सुमारे 30 ते 35 हजार मतदान असल्याचे सांगितले जाते. तालिकोटी कुटुंबीय सर्व धर्मीय समाजांमध्ये बंधुभाव आणि सामाजिक सलोखा जोपासण्यासाठी कार्यरत असल्याने त्यांचा विविध समाजघटकांशी चांगला जनसंपर्क आहे.
या पार्श्वभूमीवर इमरान तालिकोटी यांच्या उमेदवारीला पक्षश्रेष्ठी कितपत सकारात्मक प्रतिसाद देतात आणि खानापूर ब्लॉक काँग्रेस अध्यक्षपदासाठी त्यांच्या नावाला हिरवा कंदील मिळतो का, याकडे आता तालुक्यातील काँग्रेस कार्यकर्त्यांचे लक्ष लागले आहे.
ಖಾನಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಮ್ರಾನ್ ತಾಳಿಕೋಟಿ ಆಕಾಂಕ್ಷಿ!
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದೇವರಾಯಿ ಗ್ರಾಮದ ಸಾಮಾಜಿಕ ಕಾರ್ಯಕರ್ತ, ಯುವ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಹಾಗೂ ಗೊಧೋಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯ ಇಮ್ರಾನ್ ರಫೀಕ್ ಅಹ್ಮದ್ ತಾಳಿಕೋಟಿ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನಾ ಸೃಜನ ಅಭಿಯಾನ ಭಾಗ-2ರ ಅಡಿಯಲ್ಲಿ ಖಾನಾಪುರದ ಶಿವಸ್ಮಾರಕದಲ್ಲಿ ಗುರುವಾರ, ದಿನಾಂಕ 12 ನವೆಂಬರ್ ರಂದು ನಡೆದ ಸಭೆಯಲ್ಲಿ ಅವರು ಹಿರಿಯ ನಾಯಕರ ಮುಂದೆ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಬೇಡಿಕೆಯನ್ನು ಮಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಮುಂದಿನ ದಿನಗಳಲ್ಲಿ ಸಂಘಟನಾತ್ಮಕ ಕಾರ್ಯಗಳಿಗೆ ವೇಗ ನೀಡುವುದು ಹಾಗೂ ಹೊಸದಾಗಿ ಇಬ್ಬರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡುವ ಕುರಿತು ಚರ್ಚಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಪಕ್ಷದ ವೀಕ್ಷಕ ಶಾಕೀರ್ ಸನದಿ, ಜಿಲ್ಲಾಧ್ಯಕ್ಷ ಬಸವರಾಜ ಶೇಗಾವಿ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಪಕ್ಷದ ಎರಡು ಬ್ಲಾಕ್ ಅಧ್ಯಕ್ಷ ಸ್ಥಾನಗಳಿಗೆ ಒಟ್ಟು ಹತ್ತು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಪಸಂಖ್ಯಾತ ಸಮಾಜಕ್ಕೆ ಪ್ರಾತಿನಿಧ್ಯ ನೀಡುವಂತೆ ಬೇಡಿಕೆ….
ಇಮ್ರಾನ್ ತಾಳಿಕೋಟಿ ಅವರು ಹಿರಿಯ ನಾಯಕರಿಗೆ ಸಲ್ಲಿಸಿರುವ ಮನವಿಯಲ್ಲಿ ತಮ್ಮ ರಾಜಕೀಯ ಹಾಗೂ ಸಂಘಟನಾತ್ಮಕ ಕಾರ್ಯಗಳ ಕುರಿತು ಉಲ್ಲೇಖಿಸಿದ್ದಾರೆ. ಗೊಧೋಳಿ ವಿಭಾಗದಿಂದ ತಾಲೂಕು ಪಂಚಾಯಿತಿ ಸದಸ್ಯರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲಸ ಮಾಡಿರುವುದಾಗಿ ತಿಳಿಸಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿಯ ಪ್ರಾಬಲ್ಯವಿರುವ ಗೊಧೋಳಿ ಭಾಗದಿಂದ ಕಾಂಗ್ರೆಸ್ ಪಕ್ಷದ ಮೊದಲ ಸದಸ್ಯರಾಗಿ ಆಯ್ಕೆಯಾಗುವ ಗೌರವ ಪಡೆದಿರುವುದಾಗಿ ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ತಾಲೂಕಿನ ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಬಲಪಡಿಸಲು ಪ್ರಯತ್ನಿಸಿದ್ದೇನೆ. ಪಕ್ಷದ ವಿಚಾರಧಾರೆ ಮತ್ತು ಕಾರ್ಯಗಳನ್ನು ಜನರಿಗೆ ತಲುಪಿಸಲು ನಿರಂತರವಾಗಿ ಕೆಲಸ ಮಾಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
1956ರಿಂದ ಇಂದಿನವರೆಗೆ ಖಾನಾಪುರ ತಾಲೂಕಿನಲ್ಲಿ ಅಲ್ಪಸಂಖ್ಯಾತ ಸಮಾಜದ ವ್ಯಕ್ತಿಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಅವಕಾಶ ದೊರೆತಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು, ಈ ಬಾರಿ ತಮ್ಮ ಉಮೇದುವಾರಿಕೆಯನ್ನು ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಧ್ಯಕ್ಷ ಸ್ಥಾನ ದೊರೆತರೆ ಪಕ್ಷವನ್ನು ಬಲಪಡಿಸುವ ಭರವಸೆ….
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಜವಾಬ್ದಾರಿ ದೊರೆತರೆ ಮುಂದಿನ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ತಮ್ಮ ಹುದ್ದೆಯ ಪ್ರಭಾವವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಾಗಿ ಇಮ್ರಾನ್ ತಾಲಿಕೋಟಿ ಅವರು ತಮ್ಮ ಮನವಿಯಲ್ಲಿ ಭರವಸೆ ನೀಡಿದ್ದಾರೆ. ಪಕ್ಷದ ಸಂಘಟನೆಯನ್ನು ಬಲಪಡಿಸುವುದು, ಯುವಕರು ಹಾಗೂ ವಿವಿಧ ಸಮಾಜದ ಜನರನ್ನು ಒಗ್ಗೂಡಿಸುವುದು ಮತ್ತು ಜನಸಂಪರ್ಕವನ್ನು ಹೆಚ್ಚಿಸುವುದಕ್ಕಾಗಿ ಪ್ರಯತ್ನಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ತಾಳಿಕೋಟಿ ಕುಟುಂಬದ ಸಾಮಾಜಿಕ ಸೇವೆಯ ಪರಂಪರೆ….
ಖಾನಾಪುರ ತಾಲೂಕಿನಲ್ಲಿ ತಾಳಿಕೋಟಿ ಕುಟುಂಬವು ಸಾಮಾಜಿಕ ಸೇವೆಯ ಮೂಲಕ ವ್ಯಾಪಕ ಪರಿಚಿತತೆಯನ್ನು ಹೊಂದಿದೆ. ಇಮ್ರಾನ್ ತಾಳಿಕೋಟಿ ಅವರು ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಸದಸ್ಯರಾಗಿ ಮಾಡಿದ ಕಾರ್ಯಗಳಿಂದ ತಾಲೂಕಿನಲ್ಲಿ ಉತ್ತಮ ಗುರುತನ್ನು ಗಳಿಸಿದ್ದಾರೆ. ಹೀಗಾಗಿ ಅವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬೇಡಿಕೆಗೆ ಪಕ್ಷದ ಅನೇಕ ಕಾರ್ಯಕರ್ತರಿಂದ ಬೆಂಬಲ ವ್ಯಕ್ತವಾಗುತ್ತಿದೆ ಎಂದು ತಿಳಿದುಬಂದಿದೆ.
ತಾಲೂಕಿನಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮಾಜದ ಸುಮಾರು 30ರಿಂದ 35 ಸಾವಿರ ಮತಗಳಿವೆ ಎಂದು ಹೇಳಲಾಗುತ್ತಿದೆ. ತಾಳಿಕೋಟಿ ಕುಟುಂಬವು ಎಲ್ಲ ಧರ್ಮಗಳ ಜನರ ನಡುವೆ ಸಹೋದರತ್ವ ಮತ್ತು ಸಾಮಾಜಿಕ ಸಾಮರಸ್ಯವನ್ನು ಕಾಪಾಡಿಕೊಂಡು ಬರಲು ಕಾರ್ಯನಿರ್ವಹಿಸುತ್ತಿರುವುದರಿಂದ ವಿವಿಧ ಸಮಾಜದ ಜನರೊಂದಿಗೆ ಉತ್ತಮ ಜನಸಂಪರ್ಕ ಹೊಂದಿದೆ.
ಈ ಹಿನ್ನೆಲೆಯಲ್ಲಿ ಇಮ್ರಾನ್ ತಾಳಿಕೋಟಿ ಅವರ ಉಮೇದುವಾರಿಕೆಗೆ ಪಕ್ಷದ ವರಿಷ್ಠರು ಎಷ್ಟರಮಟ್ಟಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಾರೆ ಹಾಗೂ ಖಾನಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರಿಗೆ ಹಸಿರು ನಿಶಾನೆ ದೊರೆಯುತ್ತದೆಯೇ ಎಂಬುದರ ಕುರಿತು ಇದೀಗ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಗಮನ ನೆಟ್ಟಿದೆ.

