बिदरभावी श्री महालक्ष्मी जत्रेच्या पूर्वतयारीला वेग; जत्रेच्या नियोजनासाठी पूर्वतयारी सभा उत्साहात.
खानापूर : प्रतिनिधी
बिदरभावी येथे मे 2027 मध्ये होणाऱ्या श्री महालक्ष्मी जत्रेच्या पार्श्वभूमीवर गावातील मराठी शाळेत जत्रेच्या पूर्वतयारीसाठी विशेष सभेचे आयोजन करण्यात आले होते. या सभेच्या अध्यक्षस्थानी खानापूर तालुक्याचे आमदार विठ्ठलराव हलगेकर होते. यावेळी तालुका पंचायत अधिकारी रमेश मेस्त्री, जत्रा कमिटीचे अध्यक्ष, सर्व सदस्य, पंच कमिटी, जत्रा उत्सव समितीचे पदाधिकारी आणि ग्रामस्थ मोठ्या संख्येने उपस्थित होते.
सभेच्या प्रारंभी आमदार विठ्ठलराव हलगेकर यांच्या हस्ते गावातील नूतन रस्त्याचे भूमिपूजन करण्यात आले. त्यानंतर त्यांनी गावातील विविध गल्लींमध्ये जाऊन रस्त्यांची प्रत्यक्ष पाहणी केली तसेच ग्रामस्थांशी संवाद साधून त्यांच्या समस्या आणि प्रलंबित विकासकामांची माहिती जाणून घेतली.
जत्रेच्या पूर्वतयारीतून गावाच्या विकासाला चालना….
सभेत मार्गदर्शन करताना आमदार विठ्ठलराव हलगेकर म्हणाले की, खानापूर तालुक्यात अनेक गावांमध्ये दर 12 वर्षांनी जत्रा भरतात. अशा जत्रांच्या नियोजनाचा अनुभव लक्षात घेता जत्रेच्या चार ते सहा महिने आधी पूर्वतयारी सभा घेणे अत्यंत महत्त्वाचे आहे. यामुळे शासकीय कामे वेळेत सुरू करून ती दर्जेदार पद्धतीने पूर्ण करता येतात.
बिदरभावी आणि तोपीनकट्टी गावांचा पावसाळ्यात चिखलामुळे संपर्क तुटण्याचा पूर्वीचा प्रश्न आता रस्त्यांच्या जोडणीमुळे कमी झाला आहे. देवलत्ती ते बिदरभावी मुख्य डांबरी रस्त्याचे काम हाती घेण्यात आले असून, हा रस्ता पूर्ण झाल्यानंतर बेळगाव व परिसरातून थेट बससेवा सुरू होण्यास मदत होणार आहे. तसेच पारिश्वाड ते बिदरभावी रस्त्याचे कामही प्राधान्याने पूर्ण करण्यात येईल, असे त्यांनी स्पष्ट केले.
बहुग्राम पाणीपुरवठा योजनेमुळे पाणीप्रश्न सुटणार….
बिदरभावी गावातील पाणीटंचाईवर कायमस्वरूपी उपाय करण्यासाठी मलप्रभा नदीतून 136 गावांना पाणीपुरवठा करणाऱ्या सुमारे 500 कोटी रुपयांच्या बहुग्राम पाणीपुरवठा योजनेचे काम अंतिम टप्प्यात आले आहे. पुढील महिन्यात योजनेची चाचणी घेऊन मार्च महिन्यापर्यंत उद्घाटन करण्यात येणार असल्याचे आमदार हलगेकर यांनी सांगितले.
या योजनेमुळे बिदरभावी गावाचा पाणीप्रश्न कायमस्वरूपी सुटण्यास मदत होईल. तोपर्यंत जत्रेच्या तयारीसाठी तातडीने नवीन बोअरवेल मारून पाण्याची तात्पुरती व्यवस्था करण्याच्या सूचनाही त्यांनी संबंधितांना दिल्या.
जत्रेसाठी वीज व्यवस्था आणि निधीचे नियोजन….
जत्रेच्या काळात वाढणारा वीजभार लक्षात घेऊन महावितरणला निवेदन देण्यात येईल. गावात जादा क्षमतेचे ट्रान्सफॉर्मर बसवणे, जुने वीजखांब बदलणे आणि लोंबकळणाऱ्या वीजतारा दुरुस्त करणे यासाठी प्रयत्न करण्यात येतील. रोजगार हमी योजनेतून गावातील विविध विकासकामे करून उपलब्ध निधीचा योग्य वापर करण्याचे आवाहनही आमदारांनी केले.
जत्रा ही केवळ धार्मिक उत्सवापुरती मर्यादित न राहता गावाच्या सर्वांगीण विकासाला चालना देणारी आणि ग्रामस्थांची एकजूट वाढवणारी असावी. लक्ष्मी मंदिराच्या रंगरंगोटी व इतर विकासकामांसाठी आपण वैयक्तिकरीत्या आर्थिक मदत करू, असे आश्वासनही आमदार हलगेकर यांनी यावेळी दिले.
ग्रामस्थांकडून विविध विकासकामांचे निवेदन….
यावेळी समस्त ग्रामस्थ आणि जत्रा उत्सव समितीच्या वतीने आमदार विठ्ठलराव हलगेकर यांना गावातील विविध प्रलंबित विकासकामांसंदर्भात निवेदन देण्यात आले.
यामध्ये देवलत्ती ते बिदरभावी व पारिश्वाड ते बिदरभावी रस्ते पूर्ण करणे, तोपीनकट्टी ते बिदरभावी दरम्यान खराब झालेल्या पुलाची दुरुस्ती, अंकलगी रोडवरील २०० फूट कच्चा रस्ता पूर्ण करून पथदिवे बसवणे, गावाभोवतालच्या चक्कर लाईनचे सी.सी. काँक्रिटीकरण व रुंदीकरण करणे, जुने खराब झालेले सी.सी. रस्ते आणि शेतवडीतील रस्ते दुरुस्त करणे आदी मागण्यांचा समावेश आहे.
तसेच श्री लक्ष्मी मंदिराची दुरुस्ती व सुशोभीकरण, मारुती मंदिर आणि विठ्ठल-रखुमाई मंदिराच्या कळसाचे काम, जैमकोट रोडवरील स्थळ देव व कलमेश्वर मंदिराकडे जाणारे प्रत्येकी २०० फूट रस्ते तयार करणे, गावासाठी नियमित व मुबलक पाणीपुरवठा करणे, नवीन घरांना वीजजोडणी देणे, जुने वीजखांब व लोंबकळणाऱ्या तारा दुरुस्त करणे, गटारांची दुरुस्ती व सांडपाणी व्यवस्थापन करणे आणि गावाच्या प्रवेशद्वारावर दर्शनी कमान उभारणे अशा विविध मागण्या निवेदनातून करण्यात आल्या.
या सभेमुळे बिदरभावी येथील श्री महालक्ष्मी जत्रेच्या पूर्वतयारीला वेग आला असून, जत्रेच्या निमित्ताने गावातील रस्ते, पाणी, वीज आणि मंदिर विकासाच्या कामांना चालना मिळण्याची अपेक्षा ग्रामस्थांकडून व्यक्त करण्यात येत आहे.
ಬಿದರಭಾವಿ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಪೂರ್ವಸಿದ್ಧತೆಗೆ ವೇಗ;
ಜಾತ್ರೆಯ ಯೋಜನೆಗಾಗಿ ಪೂರ್ವಸಿದ್ಧತಾ ಸಭೆ ಉತ್ಸಾಹದಿಂದ ಸಂಪನ್ನ!
ಖಾನಾಪುರ : ಪ್ರತಿನಿಧಿ
ಬಿದರಭಾವಿ ಗ್ರಾಮದಲ್ಲಿ ಮೇ 2027ರಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದ ಮರಾಠಿ ಶಾಲೆಯಲ್ಲಿ ಜಾತ್ರೆಯ ಪೂರ್ವಸಿದ್ಧತೆಗಾಗಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಖಾನಾಪುರ ತಾಲೂಕಿನ ಶಾಸಕ ವಿಠ್ಠಲರಾವ್ ಹಲಗೇಕರ್ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿ ರಮೇಶ ಮೇಸ್ತ್ರಿ, ಜಾತ್ರಾ ಸಮಿತಿಯ ಅಧ್ಯಕ್ಷರು, ಎಲ್ಲಾ ಸದಸ್ಯರು, ಪಂಚ ಸಮಿತಿ, ಜಾತ್ರಾ ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಹಸ್ತದಿಂದ ಗ್ರಾಮದ ನೂತನ ರಸ್ತೆಗೆ ಭೂಮಿಪೂಜೆ ನೆರವೇರಿಸಲಾಯಿತು. ನಂತರ ಅವರು ಗ್ರಾಮದ ವಿವಿಧ ಗಲ್ಲಿಗಳಲ್ಲಿ ಸಂಚರಿಸಿ ರಸ್ತೆಗಳನ್ನು ಪ್ರತ್ಯಕ್ಷವಾಗಿ ಪರಿಶೀಲಿಸಿದರು. ಅಲ್ಲದೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆಗಳು ಹಾಗೂ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದುಕೊಂಡರು.
ಜಾತ್ರೆಯ ಪೂರ್ವಸಿದ್ಧತೆಯಿಂದ ಗ್ರಾಮಾಭಿವೃದ್ಧಿಗೆ ವೇಗ….
ಸಭೆಯಲ್ಲಿ ಮಾರ್ಗದರ್ಶನ ನೀಡಿದ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು ಮಾತನಾಡಿ, ಖಾನಾಪುರ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಜಾತ್ರೆಗಳು ನಡೆಯುತ್ತವೆ. ಇಂತಹ ಜಾತ್ರೆಗಳ ಯೋಜನೆಯ ಅನುಭವವನ್ನು ಗಮನದಲ್ಲಿಟ್ಟುಕೊಂಡು ಜಾತ್ರೆಗೆ ನಾಲ್ಕರಿಂದ ಆರು ತಿಂಗಳು ಮುಂಚಿತವಾಗಿ ಪೂರ್ವಸಿದ್ಧತಾ ಸಭೆ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಇದರಿಂದ ಸರ್ಕಾರಿ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಆರಂಭಿಸಿ ಗುಣಮಟ್ಟದ ರೀತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಬಿದರಭಾವಿ ಮತ್ತು ತೋಪಿನಕಟ್ಟಿ ಗ್ರಾಮಗಳ ಸಂಪರ್ಕ ಮಳೆಗಾಲದಲ್ಲಿ ಕೆಸರುಮಯ ರಸ್ತೆಗಳ ಕಾರಣದಿಂದ ಕಡಿತಗೊಳ್ಳುತ್ತಿದ್ದ ಹಿಂದಿನ ಸಮಸ್ಯೆ ಇದೀಗ ರಸ್ತೆ ಸಂಪರ್ಕದ ಮೂಲಕ ಕಡಿಮೆಯಾಗಿದೆ. ದೇವಲತ್ತಿಯಿಂದ ಬಿದರಭಾವಿವರೆಗೆ ಮುಖ್ಯ ಡಾಂಬರು ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ರಸ್ತೆ ಪೂರ್ಣಗೊಂಡ ನಂತರ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ನೇರ ಬಸ್ ಸೇವೆ ಆರಂಭಿಸಲು ಸಹಾಯವಾಗಲಿದೆ. ಅಲ್ಲದೆ ಪಾರಿಶ್ವಾಡದಿಂದ ಬಿದರಭಾವಿವರೆಗಿನ ರಸ್ತೆ ಕಾಮಗಾರಿಯನ್ನು ಕೂಡ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರಿನ ಸಮಸ್ಯೆ ಪರಿಹಾರ….
ಬಿದರಭಾವಿ ಗ್ರಾಮದ ನೀರಿನ ಕೊರತೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಮಲಪ್ರಭಾ ನದಿಯಿಂದ 136 ಗ್ರಾಮಗಳಿಗೆ ನೀರು ಪೂರೈಸುವ ಸುಮಾರು 500 ಕೋಟಿ ರೂಪಾಯಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದಿನ ತಿಂಗಳು ಯೋಜನೆಯ ಪರೀಕ್ಷಾರ್ಥ ಕಾರ್ಯ ನಡೆಸಿ ಮಾರ್ಚ್ ತಿಂಗಳೊಳಗೆ ಉದ್ಘಾಟನೆ ಮಾಡಲಾಗುವುದು ಎಂದು ಶಾಸಕ ಹಲಗೇಕರ್ ತಿಳಿಸಿದರು.
ಈ ಯೋಜನೆಯಿಂದ ಬಿದರಭಾವಿ ಗ್ರಾಮದ ನೀರಿನ ಸಮಸ್ಯೆ ಶಾಶ್ವತವಾಗಿ ಪರಿಹಾರವಾಗಲು ಸಹಾಯವಾಗಲಿದೆ. ಅಲ್ಲಿಯವರೆಗೆ ಜಾತ್ರೆಯ ಸಿದ್ಧತೆಗಾಗಿ ತುರ್ತಾಗಿ ಹೊಸ ಬೋರ್ವೆಲ್ ಕೊರೆದು ತಾತ್ಕಾಲಿಕವಾಗಿ ನೀರಿನ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದರು.
ಜಾತ್ರೆಗಾಗಿ ವಿದ್ಯುತ್ ವ್ಯವಸ್ಥೆ ಹಾಗೂ ಅನುದಾನದ ಯೋಜನೆ….
ಜಾತ್ರೆಯ ಸಂದರ್ಭದಲ್ಲಿ ಹೆಚ್ಚಾಗುವ ವಿದ್ಯುತ್ ಭಾರವನ್ನು ಗಮನದಲ್ಲಿಟ್ಟುಕೊಂಡು ಹೆಸ್ಕಾಂಗೆ ಮನವಿ ಸಲ್ಲಿಸಲಾಗುವುದು. ಗ್ರಾಮದಲ್ಲಿ ಹೆಚ್ಚಿನ ಸಾಮರ್ಥ್ಯದ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸುವುದು, ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸುವುದು ಹಾಗೂ ಜೋತುಬಿದ್ದ ವಿದ್ಯುತ್ ತಂತಿಗಳನ್ನು ದುರಸ್ತಿಗೊಳಿಸಲು ಪ್ರಯತ್ನಿಸಲಾಗುವುದು. ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಗ್ರಾಮದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡು ಲಭ್ಯವಿರುವ ಅನುದಾನವನ್ನು ಸೂಕ್ತವಾಗಿ ಬಳಸಿಕೊಳ್ಳುವಂತೆ ಶಾಸಕ ಹಲಗೇಕರ್ ಕರೆ ನೀಡಿದರು.
ಜಾತ್ರೆಯು ಕೇವಲ ಧಾರ್ಮಿಕ ಉತ್ಸವಕ್ಕೆ ಸೀಮಿತವಾಗದೆ ಗ್ರಾಮದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ಹಾಗೂ ಗ್ರಾಮಸ್ಥರ ಒಗ್ಗಟ್ಟನ್ನು ಹೆಚ್ಚಿಸುವ ಉತ್ಸವವಾಗಬೇಕು. ಶ್ರೀ ಲಕ್ಷ್ಮಿ ದೇವಸ್ಥಾನದ ಬಣ್ಣ ಬಳಿಯುವಿಕೆ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ತಾವು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವುದಾಗಿ ಶಾಸಕ ಹಲಗೇಕರ್ ಭರವಸೆ ನೀಡಿದರು.
ಗ್ರಾಮಸ್ಥರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮನವಿ….
ಈ ಸಂದರ್ಭದಲ್ಲಿ ಸಮಸ್ತ ಗ್ರಾಮಸ್ಥರು ಹಾಗೂ ಜಾತ್ರಾ ಉತ್ಸವ ಸಮಿತಿಯ ವತಿಯಿಂದ ಶಾಸಕ ವಿಠ್ಠಲರಾವ್ ಹಲಗೇಕರ್ ಅವರಿಗೆ ಗ್ರಾಮದ ವಿವಿಧ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ದೇವಲತ್ತಿಯಿಂದ ಬಿದರಭಾವಿ ಹಾಗೂ ಪಾರಿಶ್ವಾಡದಿಂದ ಬಿದರಭಾವಿವರೆಗಿನ ರಸ್ತೆಗಳನ್ನು ಪೂರ್ಣಗೊಳಿಸುವುದು, ತೋಪಿನಕಟ್ಟಿಯಿಂದ ಬಿದರಭಾವಿ ನಡುವಿನ ಹದಗೆಟ್ಟ ಸೇತುವೆಯನ್ನು ದುರಸ್ತಿಗೊಳಿಸುವುದು, ಅಂಕಲಗಿ ರಸ್ತೆಯಲ್ಲಿರುವ 200 ಅಡಿ ಕಚ್ಚಾ ರಸ್ತೆಯನ್ನು ಪೂರ್ಣಗೊಳಿಸಿ ಬೀದಿದೀಪಗಳನ್ನು ಅಳವಡಿಸುವುದು, ಗ್ರಾಮದ ಸುತ್ತಮುತ್ತಲಿನ ಚಕ್ಕರ್ ಲೈನ್ ರಸ್ತೆಗೆ ಸಿ.ಸಿ. ಕಾಂಕ್ರೀಟೀಕರಣ ಹಾಗೂ ಅಗಲೀಕರಣ ಮಾಡುವುದು, ಹಳೆಯ ಹದಗೆಟ್ಟ ಸಿ.ಸಿ. ರಸ್ತೆಗಳು ಮತ್ತು ಕೃಷಿ ಜಮೀನುಗಳಿಗೆ ಹೋಗುವ ರಸ್ತೆಗಳ ದುರಸ್ತಿ ಮುಂತಾದ ಬೇಡಿಕೆಗಳನ್ನು ಒಳಗೊಂಡಿತ್ತು.
ಅಲ್ಲದೆ ಶ್ರೀ ಲಕ್ಷ್ಮಿ ದೇವಸ್ಥಾನದ ದುರಸ್ತಿ ಹಾಗೂ ಸೌಂದರ್ಯೀಕರಣ, ಮಾರುತಿ ದೇವಸ್ಥಾನ ಮತ್ತು ವಿಠ್ಠಲ-ರುಕ್ಮಿಣಿ ದೇವಸ್ಥಾನದ ಕಳಸ ಕಾಮಗಾರಿ, ಜೈಮಕೋಟ ರಸ್ತೆಯಲ್ಲಿರುವ ಸ್ಥಳದೇವ ಹಾಗೂ ಕಲಮೇಶ್ವರ ದೇವಸ್ಥಾನಗಳಿಗೆ ಹೋಗಲು ತಲಾ 200 ಅಡಿ ರಸ್ತೆ ನಿರ್ಮಿಸುವುದು, ಗ್ರಾಮಕ್ಕೆ ನಿಯಮಿತ ಹಾಗೂ ಸಮರ್ಪಕ ನೀರು ಪೂರೈಕೆ ಮಾಡುವುದು, ಹೊಸ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು, ಹಳೆಯ ವಿದ್ಯುತ್ ಕಂಬಗಳು ಹಾಗೂ ಜೋತುಬಿದ್ದ ತಂತಿಗಳನ್ನು ದುರಸ್ತಿಗೊಳಿಸುವುದು, ಚರಂಡಿಗಳ ದುರಸ್ತಿ ಹಾಗೂ ಕೊಳಚೆ ನೀರಿನ ನಿರ್ವಹಣೆ ಮತ್ತು ಗ್ರಾಮದ ಪ್ರವೇಶದ್ವಾರದಲ್ಲಿ ಆಕರ್ಷಕ ಕಮಾನು ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮನವಿಯ ಮೂಲಕ ಸಲ್ಲಿಸಲಾಯಿತು.
ಈ ಸಭೆಯಿಂದ ಬಿದರಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಪೂರ್ವಸಿದ್ಧತೆಗೆ ವೇಗ ದೊರೆತಿದ್ದು, ಜಾತ್ರೆಯ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆ, ನೀರು, ವಿದ್ಯುತ್ ಹಾಗೂ ದೇವಸ್ಥಾನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಮತ್ತಷ್ಟು ಚಾಲನೆ ದೊರೆಯುವ ನಿರೀಕ್ಷೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.

