भाजपाचे ज्येष्ठ नेते सुरेश नारायण देसाई यांचा आज वाढदिवस; सर्व स्तरांतून शुभेच्छांचा वर्षाव! तालुक्याच्या विकासकार्यात महत्त्वाचे योगदान.
खानापूर : प्रतिनिधी
खानापूर तालुक्यातील निटूर गावचे सुपुत्र, तालुका पंचायतीचे माजी उपसभापती, भारतीय जनता पार्टीचे ज्येष्ठ नेते आणि कर्नाटक वन निगमचे माजी संचालक सुरेश नारायण देसाई यांचा आज वाढदिवस साजरा होत आहे. यानिमित्त त्यांच्यावर विविध राजकीय पक्षांतील नेते, कार्यकर्ते, मित्रपरिवार, हितचिंतक आणि नागरिकांकडून शुभेच्छांचा वर्षाव होत आहे.
सुरेश देसाई यांनी राजकीय, सामाजिक आणि सहकार क्षेत्रात काम करताना खानापूर तालुक्यात आपली वेगळी ओळख निर्माण केली आहे. ग्रामीण भागातील विविध प्रश्नांची जाण, विकासकामांमधील सहभाग आणि नागरिकांशी असलेला सातत्यपूर्ण संपर्क यामुळे त्यांचा तालुक्यातील जनसंपर्क मजबूत असल्याचे मानले जाते.
राजकीय आणि सामाजिक क्षेत्रात सक्रिय योगदान…
सुरेश नारायण देसाई यांनी तालुका पंचायतीचे उपसभापती म्हणून कार्य करताना ग्रामीण भागातील विकासकामांमध्ये सहभाग घेतला. गावागावांतील मूलभूत सुविधा, स्थानिक विकासाच्या गरजा आणि नागरिकांच्या समस्या यांसंदर्भात त्यांनी काम केले आहे. त्यांच्या राजकीय अनुभवामुळे निटूरसह परिसरातील अनेक गावांमध्ये त्यांना मानणारा कार्यकर्त्यांचा आणि समर्थकांचा वर्ग आहे.
भारतीय जनता पार्टीमध्ये सक्रिय असलेल्या देसाई यांनी कर्नाटक वन निगमचे संचालक म्हणूनही जबाबदारी सांभाळली आहे. राजकारणाबरोबरच शेती आणि सरकारी बांधकाम कंत्राटदारी या क्षेत्रांतही ते कार्यरत आहेत. त्यामुळे ग्रामीण भागातील नागरिक, शेतकरी आणि विविध क्षेत्रांतील लोकांशी त्यांचा नियमित संपर्क राहतो.
सहकार क्षेत्रातही महत्त्वाची भूमिका…
निटूर प्राथमिक कृषी पतसंस्थेच्या माध्यमातूनही सुरेश नारायण देसाई यांनी सहकार क्षेत्रात योगदान दिले आहे. ते अनेक वर्षे संस्थेचे संचालक म्हणून कार्यरत होते. तसेच त्यांनी संस्थेच्या चेअरमनपदाची जबाबदारीही सांभाळली आहे. राजकीय आणि सामाजिक कार्यासोबत सहकार क्षेत्रातील त्यांचा अनुभव त्यांच्या कार्याचा महत्त्वाचा भाग मानला जातो.
पत्नी वर्षा सुरेश देसाई यांच्या उमेदवारीसाठी इच्छुक...
सुरेश देसाई यांच्या पत्नी वर्षा देसाई यांनी निटूर ग्रामपंचायतीच्या माजी अध्यक्ष म्हणून काम पाहिले आहे. ग्रामपंचायतीच्या माध्यमातून स्थानिक स्वराज्य संस्थेच्या कामकाजाचा अनुभव घेतलेल्या वर्षा देसाई या सामाजिक क्षेत्रातही सक्रिय आहेत.
दरम्यान, आगामी जिल्हा पंचायत निवडणुकीच्या पार्श्वभूमीवर गर्लगुंजी जिल्हा पंचायत क्षेत्र सर्वसाधारण महिला प्रवर्गासाठी राखीव झाल्याने या क्षेत्रातील राजकीय हालचालींना महत्त्व प्राप्त झाले आहे. या पार्श्वभूमीवर आपल्या पत्नी वर्षा सुरेश देसाई यांना भारतीय जनता पार्टीकडून उमेदवारी मिळावी, यासाठी सुरेश देसाई इच्छुक असल्याचे समजते.
वर्षा देसाई यांना ग्रामपंचायत अध्यक्षपदाचा अनुभव असून, स्थानिक पातळीवरील सामाजिक संपर्क आणि ग्रामीण प्रश्नांची माहिती या बाबी त्यांच्या संभाव्य उमेदवारीच्या दृष्टीने महत्त्वाच्या ठरू शकतात. मात्र, गर्लगुंजी जिल्हा पंचायत क्षेत्रातून भाजपची अधिकृत उमेदवारी कोणाला मिळणार, याबाबत पक्षाच्या निर्णयाकडे लक्ष लागले आहे.
वाढदिवसानिमित्त शुभेच्छा…
राजकीय, सामाजिक, सहकार आणि व्यावसायिक क्षेत्रांत कार्यरत असलेल्या सुरेश देसाई यांचा वाढदिवस त्यांच्या समर्थकांसाठी आनंदाचा दिवस ठरत आहे. त्यांच्या पुढील वाटचालीसाठी विविध स्तरांतून शुभेच्छा व्यक्त केल्या जात आहेत. वाढदिवसानिमित्त त्यांना उत्तम आरोग्य, दीर्घायुष्य आणि सामाजिक कार्यासाठी नवी ऊर्जा लाभो, अशा सदिच्छा व्यक्त होत आहेत.
ಬಿಜೆಪಿಯ ಹಿರಿಯ ನಾಯಕ ಸುರೇಶ ದೇಸಾಯಿ ಅವರ ಜನ್ಮದಿನದ ಅಂಗವಾಗಿ ಇಂದು ಎಲ್ಲಡೆ ಸಂಭ್ರಮ; ಎಲ್ಲ ವರ್ಗಗಳಿಂದ ಶುಭಾಶಯಗಳ ಮಹಾಪೂರ! ನಿಟ್ಟೂರಿನ ಅಭಿವೃದ್ಧಿ ಕಾರ್ಯಗಳಲ್ಲಿ ಮಹತ್ವದ ಕೊಡುಗೆ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ನಿಟ್ಟೂರು ಗ್ರಾಮದ ಸುಪುತ್ರ, ತಾಲೂಕು ಪಂಚಾಯಿತಿಯ ಮಾಜಿ ಉಪಸಭಾಪತಿ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಕರ್ನಾಟಕ ಅರಣ್ಯ ನಿಗಮದ ಮಾಜಿ ನಿರ್ದೇಶಕರಾದ ಸುರೇಶ ದೇಸಾಯಿ ಅವರ ಜನ್ಮದಿನವನ್ನು ಇಂದು ದಿನಾಂಕ 25 ರಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು, ಸ್ನೇಹಿತರು, ಹಿತೈಷಿಗಳು ಹಾಗೂ ನಾಗರಿಕರಿಂದ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಸುರೇಶ ದೇಸಾಯಿ ಅವರು ರಾಜಕೀಯ, ಸಾಮಾಜಿಕ ಹಾಗೂ ಸಹಕಾರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಖಾನಾಪುರ ತಾಲೂಕಿನಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ. ಗ್ರಾಮೀಣ ಭಾಗದ ವಿವಿಧ ಸಮಸ್ಯೆಗಳ ಬಗ್ಗೆ ಅರಿವು, ಅಭಿವೃದ್ಧಿ ಕಾರ್ಯಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ನಾಗರಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವುದರಿಂದ ತಾಲೂಕಿನಾದ್ಯಂತ ಅವರ ಜನಸಂಪರ್ಕ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ.
ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯ ಕೊಡುಗೆ…
ಸುರೇಶ ದೇಸಾಯಿ ಅವರು ತಾಲೂಕು ಪಂಚಾಯಿತಿಯ ಉಪಸಭಾಪತಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿ ಕಾರ್ಯಗಳಲ್ಲಿ ಯಶಸ್ಸು ಸಾಧಿಸಿದ್ದರು. ಗ್ರಾಮಗಳ ಮೂಲಭೂತ ಸೌಕರ್ಯಗಳು, ಸ್ಥಳೀಯ ಅಭಿವೃದ್ಧಿಯ ಅಗತ್ಯಗಳು ಹಾಗೂ ನಾಗರಿಕರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅವರು ಕಾರ್ಯನಿರ್ವಹಿಸಿದ್ದಾರೆ. ಅವರ ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ನಿಟ್ಟೂರು ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ಅವರನ್ನು ಬೆಂಬಲಿಸುವ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಅಪಾರ ವರ್ಗವಿದೆ.
ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯರಾಗಿರುವ ದೇಸಾಯಿ ಅವರು ಕರ್ನಾಟಕ ಅರಣ್ಯ ನಿಗಮದ ನಿರ್ದೇಶಕರಾಗಿಯೂ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ರಾಜಕೀಯದ ಜೊತೆಗೆ ಕೃಷಿ ಹಾಗೂ ಸರ್ಕಾರಿ ಕಟ್ಟಡ ನಿರ್ಮಾಣದ ಗುತ್ತಿಗೆದಾರಿಕೆ ಕ್ಷೇತ್ರಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಇದರಿಂದಾಗಿ ಗ್ರಾಮೀಣ ಭಾಗದ ನಾಗರಿಕರು, ರೈತರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಜನರೊಂದಿಗೆ ಅವರಿಗೆ ನಿರಂತರ ಸಂಪರ್ಕವಿದೆ.
ಸಹಕಾರ ಕ್ಷೇತ್ರದಲ್ಲಿಯೂ ಮಹತ್ವದ ಪಾತ್ರ…
ನಿಟ್ಟೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕವೂ ಸುರೇಶ ದೇಸಾಯಿ ಅವರು ಸಹಕಾರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಹಲವು ವರ್ಷಗಳ ಕಾಲ ಅವರು ಈ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ಸಂಸ್ಥೆಯ ಅಧ್ಯಕ್ಷರಾಗಿಯೂ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ರಾಜಕೀಯ ಮತ್ತು ಸಾಮಾಜಿಕ ಕಾರ್ಯಗಳ ಜೊತೆಗೆ ಸಹಕಾರ ಕ್ಷೇತ್ರದಲ್ಲಿನ ಅವರ ಅನುಭವವೂ ಅವರ ಕಾರ್ಯಚಟುವಟಿಕೆಗಳ ಪ್ರಮುಖ ಭಾಗವಾಗಿದೆ.
ಪತ್ನಿ ವರ್ಷಾ ದೇಸಾಯಿ ಅವರ ಉಮೇದುವಾರಿಕೆಗೆ ಆಸಕ್ತಿ…
ಸುರೇಶ ದೇಸಾಯಿ ಅವರ ಪತ್ನಿ ವರ್ಷಾ ದೇಸಾಯಿ ಅವರು ನಿಟ್ಟೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಗ್ರಾಮ ಪಂಚಾಯಿತಿಯ ಮೂಲಕ ಸ್ಥಳೀಯ ಸ್ವರಾಜ್ಯ ಸಂಸ್ಥೆಯ ಆಡಳಿತದ ಅನುಭವ ಹೊಂದಿರುವ ವರ್ಷಾ ದೇಸಾಯಿ ಅವರು ಸಾಮಾಜಿಕ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದಾರೆ.
ಇದೀಗ ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರವು ಸಾಮಾನ್ಯ ಮಹಿಳಾ ಪ್ರವರ್ಗಕ್ಕೆ ಮೀಸಲಾಗಿರುವುದರಿಂದ ಈ ಕ್ಷೇತ್ರದ ರಾಜಕೀಯ ಚಟುವಟಿಕೆಗಳಿಗೆ ಮಹತ್ವ ದೊರೆತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಪತ್ನಿ ವರ್ಷಾ ದೇಸಾಯಿ ಅವರಿಗೆ ಭಾರತೀಯ ಜನತಾ ಪಕ್ಷದಿಂದ ಟಿಕೆಟ್ ದೊರೆಯಬೇಕೆಂಬ ಆಶಯವನ್ನು ಸುರೇಶ ದೇಸಾಯಿ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ವರ್ಷಾ ದೇಸಾಯಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಸ್ಥಳೀಯ ಮಟ್ಟದ ಸಾಮಾಜಿಕ ಸಂಪರ್ಕ ಹಾಗೂ ಗ್ರಾಮೀಣ ಸಮಸ್ಯೆಗಳ ಕುರಿತಾದ ಅರಿವು ಅವರ ಸಂಭವನೀಯ ಉಮೇದುವಾರಿಕೆಯ ದೃಷ್ಟಿಯಿಂದ ಮಹತ್ವದ ಅಂಶಗಳಾಗಿವೆ. ಆದರೆ, ಗರ್ಲಗುಂಜಿ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುದರ ಬಗ್ಗೆ ಪಕ್ಷದ ನಿರ್ಧಾರದತ್ತ ಎಲ್ಲರ ಗಮನ ನೆಟ್ಟಿದೆ.
ಜನ್ಮದಿನದ ಅಂಗವಾಗಿ ಶುಭಾಶಯಗಳು…
ರಾಜಕೀಯ, ಸಾಮಾಜಿಕ, ಸಹಕಾರ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸುರೇಶ ದೇಸಾಯಿ ಅವರ ಜನ್ಮದಿನವು ಅವರ ಬೆಂಬಲಿಗರು ಮತ್ತು ಅಭಿಮಾನಿಗಳಿಗೆ ಸಂತಸದ ದಿನವಾಗಿದೆ. ಅವರ ಮುಂದಿನ ಜೀವನ ಪಯಣಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಹಿತೈಷಿಗಳು ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.
ಜನ್ಮದಿನದ ಈ ಸಂದರ್ಭದಲ್ಲಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಹೊಸ ಶಕ್ತಿ ಮತ್ತು ಉತ್ಸಾಹ ದೊರೆಯಲಿ ಎಂದು ಅಪಲ ಖಾನಾಪುರ ಸುದ್ದಿ ಜಾಲದ ಮುಖ್ಯಸ್ಥ ದಿನಕರ್ ಮರಗಾಳೆ ಅವರು ಹಾರೈಸಿದ್ದಾರೆ.



