खानापूर पोलिसांची कारवाई; 700 ग्रॅम गांजासह एकास अटक ; गांजा विक्री करताना 15 हजार रुपयांचा मुद्देमाल जप्त; 540 रुपये रोखही हस्तगत.
खानापूर : प्रतिनिधी
खानापूर पोलीस ठाण्याच्या हद्दीत गांजाची विक्री करणाऱ्या एका व्यक्तीवर पोलिसांनी कारवाई केली. या कारवाईत सुमारे 700 ग्रॅम वजनाचा गांजा, त्याची अंदाजे किंमत 15 हजार रुपये असून, गांजा विक्रीतून मिळालेले 540 रुपये रोख पोलिसांनी जप्त केले.
या प्रकरणी नोंद झालेल्या आरोपीचे नाव नौशाद मेहबूब सनदी (वय 42, रा. हिरेहट्टीहोळी, ता. खानापूर) असे आहे.
पोलिसांनी दिलेल्या माहितीनुसार, दिनांक 4 ऑक्टोबर 2026 रोजी दुपारी 1 ते 2.55 वाजण्याच्या दरम्यान, हिरेहट्टीहोळी गावाच्या हद्दीत गाडिकोप्प क्रॉसजवळ पारिशवाड–एम. के. हुबळी मार्गालगत शेताकडे जाणाऱ्या कच्च्या रस्त्यावर आरोपी मोटारसायकलवरून येऊन थांबला होता. यावेळी तो गांजा विक्री करत असल्याचे पोलिसांच्या निदर्शनास आले.
पोलिसांनी कारवाई करून त्याच्याकडून 700 ग्रॅम गांजा व गांजा विक्रीतून मिळालेले 540 रुपये रोख असा मुद्देमाल जप्त केला. याप्रकरणी खानापूर पोलीस ठाण्यात गुन्हा दाखल करण्यात आला असून, पुढील तपास सुरू आहे.
ಖಾನಾಪುರ ಪೊಲೀಸರ ಕಾರ್ಯಾಚರಣೆ; 700 ಗ್ರಾಂ ಗಾಂಜಾ ಸಹಿತ ಓರ್ವನ ಬಂಧನ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ 15 ಸಾವಿರ ರೂ. ಮೌಲ್ಯದ ಮಾಲು ವಶ; 540 ರೂ. ನಗದು ಜಪ್ತಿ.
ಖಾನಾಪುರ : ಪ್ರತಿನಿಧಿ
ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಸುಮಾರು 700 ಗ್ರಾಂ ತೂಕದ ಗಾಂಜಾ, ಅಂದಾಜು 15 ಸಾವಿರ ರೂ. ಮೌಲ್ಯದ ಮಾಲು ಹಾಗೂ ಗಾಂಜಾ ಮಾರಾಟದಿಂದ ಬಂದಿದ್ದ 540 ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತ ಆರೋಪಿಯನ್ನು ನೌಶಾದ್ ಮೆಹಬೂಬ್ ಸನದಿ (ವಯಸ್ಸು 42, ಹಿರೇಹಟ್ಟಿಹೊಳಿ, ತಾ. ಖಾನಾಪುರ) ಎಂದು ಗುರುತಿಸಲಾಗಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ 4, 2026ರಂದು ಮಧ್ಯಾಹ್ನ 1ರಿಂದ 2.55 ಗಂಟೆಯ ಅವಧಿಯಲ್ಲಿ, ಹಿರೇಹಟ್ಟಿಹೊಳಿ ಗ್ರಾಮದ ವ್ಯಾಪ್ತಿಯ ಗಾಡಿಕೊಪ್ಪ ಕ್ರಾಸ್ ಸಮೀಪ, ಪಾರಿಶವಾಡ–ಎಂ.ಕೆ. ಹುಬ್ಬಳ್ಳಿ ಮಾರ್ಗದ ಪಕ್ಕದಲ್ಲಿರುವ ಹೊಲಕ್ಕೆ ತೆರಳುವ ಕಚ್ಚಾ ರಸ್ತೆಯಲ್ಲಿ ಆರೋಪಿ ಮೋಟಾರ್ಸೈಕಲ್ನಲ್ಲಿ ಬಂದು ನಿಂತಿದ್ದನು. ಈ ವೇಳೆ ಆತ ಗಾಂಜಾ ಮಾರಾಟ ಮಾಡುತ್ತಿದ್ದದ್ದು ಪೊಲೀಸರ ಗಮನಕ್ಕೆ ಬಂದಿದೆ.
ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯಿಂದ 700 ಗ್ರಾಂ ಗಾಂಜಾ ಹಾಗೂ ಗಾಂಜಾ ಮಾರಾಟದಿಂದ ಬಂದಿದ್ದ 540 ರೂ. ನಗದು ಸೇರಿದಂತೆ ಒಟ್ಟು ಸುಮಾರು 15 ಸಾವಿರ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.




