भटक्या कुत्र्यांच्या हल्ल्यात जखमी झालेल्या हरणाची समाजसेवक रेस्क्यू टीमकडून सुटका ; वनविभागाकडे उपचारासाठी सुरक्षित हस्तांतरण.

बेळगाव : प्रतिनिधी
बसरीकट्टी गावाजवळील चंदनहोसूर परिसरात भटक्या कुत्र्यांनी केलेल्या हल्ल्यात जखमी झालेल्या हरणाची सोशल वर्कर रेस्क्यू टीम, बेळगावच्या सदस्यांनी तातडीने घटनास्थळी धाव घेत सुरक्षित सुटका केली. शनिवारी 3 ऑक्टोंबर रोजी पहाटे जखमी हरणाबाबत मदतीचा तातडीचा संदेश मिळताच रेस्क्यू टीमने विलंब न करता चंदनहोसूर परिसर गाठला. भटक्या कुत्र्यांनी हरणाचा पाठलाग करून त्याला चावा घेतल्याने ते जखमी अवस्थेत मानवी वस्तीच्या परिसरात आले होते.

रेस्क्यू टीमचे अवधूत तुडवेकर, शशिकांत अंबेवाडकर आणि राजू टाककर यांनी मोठ्या दक्षतेने जखमी हरणाला ताब्यात घेतले. त्याला पुढील हल्ल्यापासून सुरक्षित ठेवत प्राथमिक उपचार व आवश्यक काळजी घेण्यात आली.
त्यानंतर जखमी हरणाला पुढील वैद्यकीय उपचार व पुनर्वसनासाठी वनविभागाच्या अधिकाऱ्यांकडे सुरक्षितपणे सुपूर्द करण्यात आले.
वन्यजीवांच्या संरक्षणासाठी सोशल वर्कर टीम बेळगावकडून करण्यात आलेल्या या तत्पर आणि माणुसकीपूर्ण कार्याचे स्थानिक ग्रामस्थ तसेच प्राणीप्रेमींनी कौतुक केले. संकटात सापडलेल्या वन्यप्राण्यांना तातडीने मदत मिळावी यासाठी अशा रेस्क्यू पथकांची भूमिका महत्त्वपूर्ण असल्याचे यावेळी ग्रामस्थांनी सांगितले.
ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಜಿಂಕೆಯ ರಕ್ಷಣೆ; ಸಮಾಜಸೇವಕ ರೆಸ್ಕ್ಯೂ ತಂಡದಿಂದ ಸುರಕ್ಷಿತವಾಗಿ ವಶಕ್ಕೆ ; ಚಿಕಿತ್ಸೆಗಾಗಿ ಸುರಕ್ಷಿತವಾಗಿ ಅರಣ್ಯ ಇಲಾಖೆಗೆ ಹಸ್ತಾಂತರ.
ಬೆಳಗಾವಿ : ಪ್ರತಿನಿಧಿ
ಬಸರಿಕಟ್ಟಿ ಗ್ರಾಮದ ಬಳಿ ಚಂದನಹೊಸೂರು ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ ಒಳಗಾಗಿ ಗಾಯಗೊಂಡಿದ್ದ ಜಿಂಕೆಯನ್ನು ಸೋಶಿಯಲ್ ವರ್ಕರ್ ರೆಸ್ಕ್ಯೂ ಟೀಮ್, ಬೆಳಗಾವಿಯ ಸದಸ್ಯರು ತುರ್ತಾಗಿ ಸ್ಥಳಕ್ಕೆ ಧಾವಿಸಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಶನಿವಾರ, ಅಕ್ಟೋಬರ್ 3ರಂದು ಮುಂಜಾನೆ ಗಾಯಗೊಂಡ ಜಿಂಕೆಯ ಕುರಿತು ತುರ್ತು ಸಹಾಯದ ಸಂದೇಶ ದೊರೆತ ತಕ್ಷಣ ರೆಸ್ಕ್ಯೂ ತಂಡವು ಯಾವುದೇ ವಿಳಂಬ ಮಾಡದೆ ಚಂದನಹೊಸೂರು ಪ್ರದೇಶಕ್ಕೆ ತೆರಳಿ ತಮ್ಮ ಕಾರ್ಯ ಮಾಡಿದೆ.
ಬೀದಿ ನಾಯಿಗಳು ಜಿಂಕೆಯನ್ನು ಬೆನ್ನಟ್ಟಿ ದಾಳಿ ಮಾಡಿ ಕಚ್ಚಿದ್ದರಿಂದ ಅದು ಗಾಯಗೊಂಡ ಸ್ಥಿತಿಯಲ್ಲಿ ಮಾನವ ವಸತಿ ಪ್ರದೇಶದ ಸಮೀಪಕ್ಕೆ ಬಂದಿತ್ತು. ಗಾಯಗೊಂಡ ಜಿಂಕೆ ಅಪಾಯದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿದ ರೆಸ್ಕ್ಯೂ ತಂಡದ ಸದಸ್ಯರು ತಕ್ಷಣವೇ ಕಾರ್ಯಾಚರಣೆ ಕೈಗೊಂಡರು.
ರೆಸ್ಕ್ಯೂ ತಂಡದ ಅವಧೂತ ತುಡವೇಕರ್, ಶಶಿಕಾಂತ ಅಂಬೇವಾಡ್ಕರ್ ಹಾಗೂ ರಾಜು ಟಕ್ಕರ್ ಅವರು ಅತ್ಯಂತ ಎಚ್ಚರಿಕೆಯಿಂದ ಗಾಯಗೊಂಡ ಜಿಂಕೆಯನ್ನು ವಶಕ್ಕೆ ಪಡೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಮುಂದಿನ ದಾಳಿಯಿಂದ ಜಿಂಕೆಯನ್ನು ರಕ್ಷಿಸುವ ಜೊತೆಗೆ, ಅದಕ್ಕೆ ಪ್ರಾಥಮಿಕ ಚಿಕಿತ್ಸೆ ಹಾಗೂ ಅಗತ್ಯ ಆರೈಕೆಯನ್ನು ಮಾಡಲಾಯಿತು.
ನಂತರ ಗಾಯಗೊಂಡ ಜಿಂಕೆಯನ್ನು ಮುಂದಿನ ವೈದ್ಯಕೀಯ ಚಿಕಿತ್ಸೆ ಹಾಗೂ ಪುನರ್ವಸತಿಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು.
ವನ್ಯಜೀವಿಗಳ ಸಂರಕ್ಷಣೆಗಾಗಿ ಸೋಶಿಯಲ್ ವರ್ಕರ್ ತಂಡ ಬೆಳಗಾವಿಯವರು ತಕ್ಷಣ ಸ್ಪಂದಿಸಿ ಕೈಗೊಂಡ ಈ ಮಾನವೀಯ ಹಾಗೂ ಸಮಯೋಚಿತ ಕಾರ್ಯಕ್ಕೆ ಸ್ಥಳೀಯ ಗ್ರಾಮಸ್ಥರು ಮತ್ತು ಪ್ರಾಣಿ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಪಾಯದಲ್ಲಿ ಸಿಲುಕುವ ವನ್ಯಜೀವಿಗಳಿಗೆ ತುರ್ತು ಸಂದರ್ಭದಲ್ಲಿ ತಕ್ಷಣ ನೆರವು ದೊರೆಯುವಂತೆ ಮಾಡುವಲ್ಲಿ ಇಂತಹ ರೆಸ್ಕ್ಯೂ ತಂಡಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಈ ಸಂದರ್ಭದಲ್ಲಿ ಗ್ರಾಮಸ್ಥರು ಹೇಳಿದರು.




