माणिकवाडी क्रॉसजवळ दुचाकी-ट्रकची भीषण धडक; पती पाठोपाठ गंभीर जखमी पत्नीचा ही मृत्यू.
खानापूर : खानापूर–लोंढा मार्गावरील माणिकवाडी क्रॉसजवळ मंगळवारी रात्री दुचाकी आणि ट्रकची समोरासमोर भीषण धडक झाली. या अपघातात युवराज शत्रुघ्न माळिक (30) भारतीय सैनिक, जागीच ठार झाला होता व पत्नी मोहिनी युवराज माळिक (25), रा. जटगे, ता. खानापूर, या गंभीर जखमी होत्या, त्यांना तात्काल खानापूरच्या प्राथमिक आरोग्य चिकित्सा केंद्रात उपचारासाठी दाखल करण्यात आले. परंतु तेथील डॉक्टरांनी तपासणी नंतर त्या सुद्धा मृत्यू पावल्याचे सांगितले.
दोघेही पती-पत्नी खानापूरहून जटगे गावाकडे दुचाकीवरून जात असताना हा अपघात झाला. धडक इतकी जोरदार होती की, दोघांचाही मृत्यू झाला. अपघाताची माहिती मिळताच खानापूर पोलिसांनी घटनास्थळी धाव घेतली व पत्नीला तात्काळ उपचारासाठी खानापूरच्या दवाखान्यात दाखल केले होते परंतु डॉक्टरांनी त्यांना मृत घोषित केले.
दोन्ही मृतदेह उत्तरीय तपासणीसाठी खानापूर येथील प्राथमिक आरोग्य चिकित्सा केंद्रात ठेवण्यात आले आहेत. या घटनेची नोंद खानापूर पोलीस ठाण्यात झाली असून, पुढील तपास सुरू आहे.
या दुर्दैवी घटनेमुळे जटगे गावावर शोककळा पसरली आहे.
अपघाताचे वृत समजताच खानापूर तालुक्याचे माजी आमदार व बेळगाव जिल्हा मध्यवर्ती सहकारी बँकेचे संचालक अरविंद पाटील, यांनी खानापूर येथील प्राथमिक आरोग्य चिकित्सा केंद्राला भेट देऊन मृत नातेवाईकांची भेट घेतली व त्यांचे सांत्वन केले व धीर दिला.
ಮಾಣಿಕವಾಡಿ ಕ್ರಾಸ್ ಬಳಿ ಬೈಕ್–ಟ್ರಕ್ ನಡುವೆ ಭೀಕರ ಅಪಘಾತ; ಪತಿಯ ಬೆನ್ನಲ್ಲೇ ಗಂಭೀರವಾಗಿ ಗಾಯಗೊಂಡಿದ್ದ ಪತ್ನಿಯ ಕೂಡ ಸಾವು.
ಖಾನಾಪುರ : ಖಾನಾಪುರ–ಲೋಂಡಾ ಮಾರ್ಗದ ಮಾಣಿಕವಾಡಿ ಕ್ರಾಸ್ ಬಳಿ ಮಂಗಳವಾರ ರಾತ್ರಿ ಬೈಕ್ ಮತ್ತು ಟ್ರಕ್ ನಡುವೆ ಮುಖಾಮುಖಿ ಭೀಕರ ಅಪಘಾತ ಸಂಭವಿಸಿದ್ದು. ಈ ಅಪಘಾತದಲ್ಲಿ ಯುವರಾಜ ಶತ್ರುಘ್ನ ಮಳಿಕ (30) ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಮೋಹಿನಿ ಯುವರಾಜ ಮಳಿಕ (25), ಜಟಗೆ, ತಾ. ಖಾನಾಪುರ, ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿನ ವೈದ್ಯರು ಪರಿಶೀಲನೆ ನಡೆಸಿದ ಬಳಿಕ ಅವರು ಕೂಡ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಇಬ್ಬರೂ ಪತಿ–ಪತ್ನಿ ಖಾನಾಪುರದಿಂದ ಜಟಗೆ ಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಟ್ರಕ್ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿ ಎಷ್ಟು ಭೀಕರವಾಗಿತ್ತೆಂದರೆ, ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.
ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಖಾನಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಗಂಭೀರವಾಗಿ ಗಾಯಗೊಂಡಿದ್ದ ಪತ್ನಿ ಮೋಹಿನಿ ಅವರನ್ನು ತಕ್ಷಣ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಪರಿಶೀಲಿಸಿದ ಬಳಿಕ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪತಿ–ಪತ್ನಿ ಇಬ್ಬರೂ ಒಂದೇ ಅಪಘಾತದಲ್ಲಿ ಮೃತಪಟ್ಟಿರುವ ಈ ದುಃಖದ ಘಟನೆಯಿಂದ ಜಟಗೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಅಪಘಾತದ ವಿವರಗಳು ತಿಳಿದ ತಕ್ಷಣ ಖಾನಾಪುರ ತಾಲೂಕಿನ ಮಾಜಿ ಶಾಸಕ ಮತ್ತು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಅರವಿಂದ್ ಪಾಟೀಲ್ ಖಾನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದು ಆದಷ್ಟು ಬೇಗ ಮರನೂತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಸಂಬಂಧಿಕರಿಗೆ ನೀಡಲು ಸೂಚಿಸಿದ್ದಾರೆ.

