मोदेकोपमध्ये 65 लाखांच्या ‘आयुष्मान आरोग्य मंदिरा’चे आमदार हलगेकर यांच्या हस्ते भूमिपूजन.
खानापूर : खानापूर तालुक्यातील मोदेकोप गावच्या आरोग्य सुविधांना बळकटी देणाऱ्या ‘आयुष्मान आरोग्य मंदिर’ उभारणीच्या कामाचा शुभारंभ व भूमिपूजन सोहळा आमदार विठ्ठलराव हलगेकर यांच्या हस्ते उत्साहपूर्ण वातावरणात पार पडला. कर्नाटक शासनाच्या आरोग्य व कुटुंब कल्याण विभागाच्या माध्यमातून पंतप्रधान आयुष्मान भारत हेल्थ इन्फ्रास्ट्रक्चर मिशन (PM-ABHIM) अंतर्गत या प्रकल्पाची उभारणी करण्यात येणार आहे.

या आरोग्य मंदिरासाठी शासनाकडून 65 लाख रुपयांचा निधी मंजूर करण्यात आला असून, परिसरातील नागरिकांना प्राथमिक आरोग्य सेवा अधिक सुलभ व जवळच्या ठिकाणी उपलब्ध होण्यास यामुळे मदत होणार आहे. ग्रामीण भागातील आरोग्य यंत्रणा अधिक सक्षम करण्याच्या दृष्टीने हा प्रकल्प महत्त्वाचा मानला जात आहे.
भूमिपूजन कार्यक्रमानंतर आमदार हलगेकर यांनी ग्रामस्थांशी संवाद साधत गावातील विविध समस्या जाणून घेतल्या. विशेषतः रस्ते, अंतर्गत मार्ग तसेच इतर मूलभूत सुविधांबाबत ग्रामस्थांनी आपल्या अडचणी त्यांच्या निदर्शनास आणून दिल्या.
यावेळी काटगाळी–मोदेकोप ते मुख्य रस्त्याला जोडणाऱ्या मार्गाचे टेंडर मंजूर झाले असून, लवकरच प्रत्यक्ष कामाला सुरुवात होईल, अशी माहिती आमदार हलगेकर यांनी दिली. तसेच पावसामुळे चिखलमय झालेल्या आणि दुरुस्तीची आवश्यकता असलेल्या गावातील अंतर्गत रस्त्यांसाठी तातडीने निधी उपलब्ध करून काँक्रीटीकरणाचे काम मार्गी लावण्याचे आश्वासन त्यांनी दिले.
दरम्यान, वारकरी संप्रदाय आणि ग्रामस्थांच्या वतीने मारुती मंदिरापर्यंतच्या रस्त्याची सुधारणा तसेच गावातील आवश्यक मूलभूत सुविधांसाठी निधी उपलब्ध करून देण्याची मागणी करण्यात आली. या मागण्यांवरही आमदारांनी सकारात्मक भूमिका घेत संबंधित कामांसाठी आवश्यक निधी उपलब्ध करून देण्याबाबत चर्चा केली.
आरोग्य सुविधा आणि रस्ते विकासाच्या माध्यमातून मोदेकोप गावाच्या सर्वांगीण विकासाला चालना देण्याचा प्रयत्न केला जाईल, असा विश्वास यावेळी व्यक्त करण्यात आला.
या कार्यक्रमाला तालुका आरोग्य अधिकारी महेश कीडसन्नावर, भाजप जिल्हा प्रधान कार्यदर्शी सौ. धनश्री सरदेसाई, तालुका प्रधान कार्यदर्शी श्री. मल्लाप्पा मारीहाळ, कंत्राटदार श्री. एम. आय. मुत्तगी, श्री. दत्ता कदम यांच्यासह पंच कमिटीचे सदस्य, स्थानिक नेते, वारकरी संप्रदायाचे पदाधिकारी आणि ग्रामस्थ मोठ्या संख्येने उपस्थित होते.
ಮೊದೇಕೊಪ್ಪದಲ್ಲಿ 65 ಲಕ್ಷ ರೂ.ಗಳ ‘ಆಯುಷ್ಮಾನ್ ಆರೋಗ್ಯ ಮಂದಿರದ ಕಟ್ಟಡ’ಕ್ಕೆ ಶಾಸಕ ಹಲಗೇಕರ ಅವರಿಂದ ಭೂಮಿಪೂಜೆ.
ಖಾನಾಪುರ : ಖಾನಾಪುರ ತಾಲೂಕಿನ ಮೊದೇಕೊಪ್ಪ ಗ್ರಾಮದ ಆರೋಗ್ಯ ಸೌಲಭ್ಯಗಳಿಗೆ ಮತ್ತಷ್ಟು ಬಲ ನೀಡುವ ‘ಆಯುಷ್ಮಾನ್ ಆರೋಗ್ಯ ಮಂದಿರ’ ಕಟ್ಟಡ ನಿರ್ಮಾಣ ಕಾಮಗಾರಿಯ ಉದ್ಘಾಟನೆ ಹಾಗೂ ಭೂಮಿಪೂಜೆ ಸಮಾರಂಭವು ಶಾಸಕ ವಿಠ್ಠಲರಾವ್ ಹಲಗೇಕರ ಅವರ ಹಸ್ತದಿಂದ ಉತ್ಸಾಹದ ವಾತಾವರಣದಲ್ಲಿ ನೆರವೇರಿತು.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ (PM-ABHIM) ಯೋಜನೆಯಡಿ ಈ ಆರೋಗ್ಯ ಮಂದಿರವನ್ನು ನಿರ್ಮಿಸಲಾಗುತ್ತಿದೆ.
ಈ ಆರೋಗ್ಯ ಮಂದಿರಕ್ಕಾಗಿ ಸರ್ಕಾರದಿಂದ 65 ಲಕ್ಷ ರೂಪಾಯಿಗಳ ಅನುದಾನ ಮಂಜೂರಾಗಿದ್ದು, ಇದರ ಮೂಲಕ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರಿಗೆ ಪ್ರಾಥಮಿಕ ಆರೋಗ್ಯ ಸೇವೆಗಳು ಇನ್ನಷ್ಟು ಸುಲಭವಾಗಿ ಹಾಗೂ ಹತ್ತಿರದ ಸ್ಥಳದಲ್ಲೇ ಲಭ್ಯವಾಗಲಿವೆ. ಗ್ರಾಮೀಣ ಪ್ರದೇಶಗಳ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ಈ ಯೋಜನೆ ಮಹತ್ವದ್ದಾಗಿದೆ.
ಭೂಮಿಪೂಜೆ ಕಾರ್ಯಕ್ರಮದ ನಂತರ ಶಾಸಕ ಹಲಗೇಕರ ಅವರು ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ಗ್ರಾಮದ ವಿವಿಧ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು. ವಿಶೇಷವಾಗಿ ರಸ್ತೆಗಳು, ಆಂತರಿಕ ಮಾರ್ಗಗಳು ಹಾಗೂ ಇತರ ಮೂಲಭೂತ ಸೌಲಭ್ಯಗಳ ಕುರಿತು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಕಾಟಗಾಳಿ–ಮೊದೇಕೊಪ್ಪದಿಂದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಟೆಂಡರ್ ಮಂಜೂರಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ, ಎಂದು ಶಾಸಕ ಹಲಗೇಕರ ಅವರು ಮಾಹಿತಿ ನೀಡಿದರು. ಅಲ್ಲದೆ, ಮಳೆಯಿಂದಾಗಿ ಕೆಸರುಮಯವಾಗಿರುವ ಹಾಗೂ ದುರಸ್ತಿಯ ಅಗತ್ಯವಿರುವ ಗ್ರಾಮದ ಆಂತರಿಕ ರಸ್ತೆಗಳಿಗಾಗಿ ತುರ್ತಾಗಿ ಅನುದಾನ ಒದಗಿಸಿ ಕಾಂಕ್ರೀಟೀಕರಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಭರವಸೆ ನೀಡಿದರು.
ಇದೇ ವೇಳೆ, ವಾರಕಾರಿ ಸಂಪ್ರದಾಯದವರು ಹಾಗೂ ಗ್ರಾಮಸ್ಥರ ಪರವಾಗಿ ಮಾರುತಿ ದೇವಸ್ಥಾನದವರೆಗೆ ಇರುವ ರಸ್ತೆಯ ಸುಧಾರಣೆ ಹಾಗೂ ಗ್ರಾಮದ ಅಗತ್ಯ ಮೂಲಭೂತ ಸೌಲಭ್ಯಗಳಿಗಾಗಿ ಅನುದಾನ ಒದಗಿಸಬೇಕೆಂದು ಮನವಿ ಮಾಡಲಾಯಿತು. ಈ ಬೇಡಿಕೆಗಳ ಬಗ್ಗೆಯೂ ಶಾಸಕ ಹಲಗೇಕರ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಸಂಬಂಧಿಸಿದ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸುವ ಕುರಿತು ಚರ್ಚಿಸಿದರು.
ಆರೋಗ್ಯ ಸೌಲಭ್ಯಗಳು ಹಾಗೂ ರಸ್ತೆ ಅಭಿವೃದ್ಧಿಯ ಮೂಲಕ ಮೊದೇಕೊಪ್ಪ ಗ್ರಾಮದ ಸಮಗ್ರ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಲು ಪ್ರಯತ್ನಿಸಲಾಗುವುದು ಎಂಬ ವಿಶ್ವಾಸವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಮಹೇಶ್ ಕೀಡಸನ್ನಾವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಧನಶ್ರೀ ಸರದೇಶಾಯಿ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀ ಮಲ್ಲಪ್ಪ ಮಾರಿಹಾಳ, ಗುತ್ತಿಗೆದಾರ ಶ್ರೀ ಎಂ. ಐ. ಮುತಗಿ, ಶ್ರೀ ದತ್ತಾ ಕದಮ ಸೇರಿದಂತೆ ಪಂಚ ಕಮಿಟಿ ಸದಸ್ಯರು, ಸ್ಥಳೀಯ ಮುಖಂಡರು, ವಾರಕಾರಿ ಸಂಪ್ರದಾಯದ ಪದಾಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಉಪಸ್ಥಿತರಿದ್ದರು.

