बेळगाव : शहरातील चन्नम्मा सर्कल परिसरात अपंगत्वाचे सोंग घेऊन नागरिकांकडून भीक मागणाऱ्या एका व्यक्तीचा प्रकार सोशल वर्कर टीमच्या सतर्कतेमुळे उघडकीस आला आहे.
याबाबत सविस्तर माहिती अशी की, सोशल वर्कर टीमचे सदस्य अवधूत तुडवेकर, पद्मप्रसाद हूली, शशिकांत अंबेवाडकर, विकी मेहता, मायकेल पिंटो आणि शुभम हूली यांच्याकडे एका व्यक्तीने शारीरिकदृष्ट्या गंभीर अपंग असल्याचे भासवून मदतीची मागणी केली. त्याला खरी मदत मिळावी या उद्देशाने टीमने त्याच्याकडे ओळखपत्राची मागणी केली. त्यावेळी त्याने अपंगत्वाचे प्रमाणपत्र सादर केले.
संबंधित व्यक्तीला योग्य उपचार व मदत मिळावी म्हणून टीमने त्याला सिव्हिल हॉस्पिटलमध्ये नेले. मात्र, त्याच्याकडे आधारकार्ड नसल्याने पोलिसांच्या अधिकृत संदर्भपत्राची आवश्यकता असल्याचे रुग्णालय प्रशासनाने सांगितले. त्यानंतर टीमने त्याला खडेबाजार पोलीस ठाण्यात नेले.
पोलिसांकडून नियमित चौकशी व पडताळणी सुरू असताना या व्यक्तीचे अपंगत्वाचे सोंग उघड झाले. चौकशीदरम्यान तो अचानक स्वतःच्या पायावर उभा राहिला आणि चक्क पळत सुटला. त्यामुळे तो शारीरिक अपंगत्वाचे सोंग करून नागरिकांची सहानुभूती मिळवून भीक मागत असल्याचा प्रकार स्पष्ट झाला.
या घटनेनंतर सोशल वर्कर टीम आणि बेळगाव पोलिसांनी नागरिकांना बनावट अपंगत्व दाखवून मदत मागणाऱ्या तसेच फसवणूक करणाऱ्या भिकाऱ्यांपासून सावध राहण्याचे आवाहन केले आहे. अशा व्यक्तींबाबत संशय आल्यास नागरिकांनी सतर्क राहून संबंधित पोलिसांना माहिती द्यावी, असेही आवाहन करण्यात आले आहे.
या प्रकरणाचा पुढील तपास पोलिसांकडून सुरू आहे.
ಚನ್ನಮ್ಮ ವೃತ್ತದಲ್ಲಿ ನಕಲಿ ಅಂಗವೈಕಲ್ಯದ ವಂಚನೆ ಬಯಲು; ಸಹಾಯ ಕೇಳಲು ಬಂದಾಗ ಮೋಸ ಬಹಿರಂಗ.
ಬೆಳಗಾವಿ : ನಗರದ ಚನ್ನಮ್ಮ ವೃತ್ತದ ಪ್ರದೇಶದಲ್ಲಿ ಅಂಗವೈಕಲ್ಯದ ನಾಟಕವಾಡಿಕೊಂಡು ನಾಗರಿಕರಿಂದ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನ ಕೃತ್ಯವು ಸೋಶಿಯಲ್ ವರ್ಕರ್ ತಂಡದ ಎಚ್ಚರಿಕೆಯಿಂದ ಬಯಲಿಗೆ ಬಿಳಿಸಿದೆ.
ಈ ಕುರಿತು ವಿವರವಾದ ಮಾಹಿತಿ ಪ್ರಕಾರ: ಸೋಶಿಯಲ್ ವರ್ಕರ್ ತಂಡದ ಸದಸ್ಯರಾದ ಅವಧೂತ್ ತುಡವೇಕರ್, ಪದ್ಮಪ್ರಸಾದ್ ಹೂಳಿ, ಶಶಿಕಾಂತ್ ಅಂಬೇವಾಡ್ಕರ್, ವಿಕ್ಕಿ ಮೆಹತಾ, ಮೈಕೆಲ್ ಪಿಂಟೋ ಮತ್ತು ಶುಭಮ್ ಹೂಳಿ ಅವರ ಬಳಿ ವ್ಯಕ್ತಿಯೊಬ್ಬನು ತಾನು ದೈಹಿಕವಾಗಿ ಗಂಭೀರ ಅಂಗವಿಕಲನಾಗಿರುವಂತೆ ನಟಿಸಿ ಸಹಾಯಕ್ಕಾಗಿ ಮನವಿ ಮಾಡಿದ್ದಾನೆ. ಆತನಿಗೆ ನಿಜವಾದ ಸಹಾಯ ದೊರಕಬೇಕು ಎಂಬ ಉದ್ದೇಶದಿಂದ ತಂಡದ ಸದಸ್ಯರು ಆತನ ಬಳಿ ಗುರುತಿನ ಚೀಟಿಯನ್ನು ಕೇಳಿದ್ದಾರೆ. ಆಗ ಆತ ಅಂಗವೈಕಲ್ಯದ ಪ್ರಮಾಣಪತ್ರವನ್ನು ಹಾಜರುಪಡಿಸಿದ್ದಾನೆ.
ಸಂಬಂಧಪಟ್ಟ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಹಾಗೂ ಸಹಾಯ ದೊರಕಬೇಕು ಎಂಬ ಉದ್ದೇಶದಿಂದ ತಂಡದ ಸದಸ್ಯರು ಆತನನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆತನ ಬಳಿ ಆಧಾರ್ ಕಾರ್ಡ್ ಇಲ್ಲದ ಕಾರಣ ಪೊಲೀಸರ ಅಧಿಕೃತ ಶಿಫಾರಸು ಪತ್ರದ ಅಗತ್ಯವಿದೆ ಎಂದು ಆಸ್ಪತ್ರೆ ಆಡಳಿತ ತಿಳಿಸಿದೆ. ಬಳಿಕ ತಂಡದ ಸದಸ್ಯರು ಆತನನ್ನು ಖಡೆಬಜಾರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರು ನಿಯಮಿತ ವಿಚಾರಣೆ ಹಾಗೂ ಪರಿಶೀಲನೆ ನಡೆಸುತ್ತಿದ್ದ ಸಂದರ್ಭದಲ್ಲಿ ಈ ವ್ಯಕ್ತಿಯ ಅಂಗವೈಕಲ್ಯದ ನಾಟಕ ಬಯಲಾಗಿದೆ. ವಿಚಾರಣೆ ವೇಳೆ ಆತ ಏಕಾಏಕಿ ತನ್ನ ಕಾಲುಗಳ ಮೇಲೆ ನಿಂತು ಅಲ್ಲಿಂದ ಓಡಿಹೋಗಿದ್ದಾನೆ. ಇದರಿಂದ ಆತ ದೈಹಿಕ ಅಂಗವೈಕಲ್ಯದ ನಾಟಕವಾಡಿಕೊಂಡು ನಾಗರಿಕರ ಸಹಾನುಭೂತಿ ಪಡೆದು ಭಿಕ್ಷೆ ಬೇಡುತ್ತಿದ್ದ ಪ್ರಕರಣ ಸ್ಪಷ್ಟವಾಗಿದೆ.
ಈ ಘಟನೆಯ ನಂತರ ಸೋಶಿಯಲ್ ವರ್ಕರ್ ತಂಡ ಹಾಗೂ ಬೆಳಗಾವಿ ಪೊಲೀಸರು ನಾಗರಿಕರಿಗೆ ನಕಲಿ ಅಂಗವೈಕಲ್ಯವನ್ನು ತೋರಿಸಿ ಸಹಾಯ ಕೇಳುವ ಹಾಗೂ ವಂಚನೆ ಮಾಡುವ ಭಿಕ್ಷುಕರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ.
ಇಂತಹ ವ್ಯಕ್ತಿಗಳ ಬಗ್ಗೆ ಅನುಮಾನ ಬಂದಲ್ಲಿ ನಾಗರಿಕರು ಎಚ್ಚರಿಕೆಯಿಂದಿದ್ದು, ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಕೂಡ ಮನವಿ ಮಾಡಲಾಗಿದೆ. ಈ ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.



