प्रख्यात यक्षगान विनोदी कलाकार श्रीधर भट कासरगोड यांचे निधन; खासदार विश्वेश्वर हेगडे-कागेरी यांची श्रद्धांजली.
खानापूर/प्रतिनिधी : बडगू तिट्टू यक्षगान परंपरेतील ज्येष्ठ आणि प्रख्यात विनोदी कलाकार श्रीधर भट कासरगोड यांच्या निधनाने यक्षगान क्षेत्रावर शोककळा पसरली आहे. त्यांच्या निधनाबद्दल उत्तर कन्नडचे खासदार विश्वेश्वर हेगडे-कागेरी यांनी तीव्र दुःख व्यक्त करत भावपूर्ण श्रद्धांजली अर्पण केली आहे.
खासदार कागेरी यांनी आपल्या शोकसंदेशात म्हटले आहे की, “श्रीधर भट कासरगोड यांनी आपल्या सहज, सुसंस्कृत आणि दर्जेदार विनोदातून हजारो रसिकांची मने जिंकली. त्यांचे निधन म्हणजे यक्षगान विश्वासाठी कधीही भरून न निघणारी हानी आहे.”
ते पुढे म्हणाले की, “हास्यसम्राट कुंजाळू रामकृष्ण यांच्यानंतर बडगू यक्षगानातील विनोदी भूमिकांना नवे परिमाण देण्याचे कार्य श्रीधर भट यांनी केले. त्यांनी कधीही उपहासाचा आधार न घेता सुसंस्कृत, कलात्मक आणि सांस्कृतिक मूल्यांनी परिपूर्ण विनोद सादर करून प्रेक्षकांना खळखळून हसविले.”
अनेक दशकांपासून यक्षगान रंगभूमीवर त्यांनी दिलेले योगदान अविस्मरणीय असून, त्यांच्या नैसर्गिक अभिनयाने, समयोचित संवादफेकीने आणि सहज विनोदशैलीने प्रत्येक कलारसिकाच्या मनात अढळ स्थान निर्माण केले. त्यांच्या निधनामुळे बडगू यक्षगान क्षेत्राने एक उत्कृष्ट कलाकार गमावल्याची भावना त्यांनी व्यक्त केली.
शेवटी, दिवंगत आत्म्यास चिरशांती लाभो तसेच त्यांच्या कुटुंबीयांना, असंख्य चाहत्यांना आणि यक्षगान कलावंतांना हे दुःख सहन करण्याची शक्ती लाभो, अशी प्रार्थना खासदार विश्वेश्वर हेगडे-कागेरी यांनी व्यक्त केली.
ಪ್ರಖ್ಯಾತ ಯಕ್ಷಗಾನ ಹಾಸ್ಯ ಕಲಾವಿದ ಶ್ರೀಧರ ಭಟ್ ಕಾಸರಗೋಡು ಇವರ ನಿಧನ; ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.
ಖಾನಾಪುರ/ಪ್ರತಿನಿಧಿ : ಬಡಗು ತಿಟ್ಟಿನ ಯಕ್ಷಗಾನ ಪರಂಪರೆಯ ಹಿರಿಯ ಹಾಗೂ ಪ್ರಖ್ಯಾತ ಹಾಸ್ಯ ಕಲಾವಿದ ಶ್ರೀಧರ ಭಟ್ ಕಾಸರಗೋಡು ಅವರ ನಿಧನದಿಂದ ಯಕ್ಷಗಾನ ಕ್ಷೇತ್ರದಲ್ಲಿ ಶೋಕದ ಛಾಯೆ ಆವರಿಸಿದೆ. ಅವರ ನಿಧನಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ತಮ್ಮ ಶೋಕ ಸಂದೇಶದಲ್ಲಿ ಸಂಸದ ಕಾಗೇರಿ ಅವರು, “ಶ್ರೀಧರ ಭಟ್ ಕಾಸರಗೋಡು ಅವರು ತಮ್ಮ ಸಹಜ, ಸಾಂಸ್ಕೃತಿಕ ಹಾಗೂ ಸಭ್ಯ ಹಾಸ್ಯದ ಮೂಲಕ ಸಾವಿರಾರು ಯಕ್ಷಗಾನ ಅಭಿಮಾನಿಗಳ ಮನ ಗೆದ್ದಿದ್ದರು. ಅವರ ನಿಧನವು ಯಕ್ಷಗಾನ ಲೋಕಕ್ಕೆ ಎಂದಿಗೂ ತುಂಬಲಾರದ ನಷ್ಟವಾಗಿದೆ,” ಎಂದು ತಿಳಿಸಿದ್ದಾರೆ.
ಅವರು ಮುಂದುವರಿದು, “ಹಾಸ್ಯ ಸಾಮ್ರಾಟ್ ಕುಂಜಾಳು ರಾಮಕೃಷ್ಣ ಅವರ ನಂತರ ಬಡಗು ಯಕ್ಷಗಾನದಲ್ಲಿ ಹಾಸ್ಯ ಪಾತ್ರಗಳಿಗೆ ಹೊಸ ಆಯಾಮ ನೀಡಿದ ಕಲಾವಿದ ಶ್ರೀಧರ ಭಟ್. ಯಾವುದೇ ವ್ಯಕ್ತಿಯನ್ನು ಹೀಯಾಳಿಸದೇ, ಸಭ್ಯತೆ, ಕಲಾತ್ಮಕತೆ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸಿಕೊಂಡ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮನರಂಜಿಸುವ ಅಪರೂಪದ ಪ್ರತಿಭೆ ಅವರದ್ದಾಗಿತ್ತು,” ಎಂದು ಸ್ಮರಿಸಿದರು.
ಹಲವಾರು ದಶಕಗಳ ಕಾಲ ಯಕ್ಷಗಾನ ರಂಗಭೂಮಿಗೆ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ. ತಮ್ಮ ಸಹಜ ಅಭಿನಯ, ಸಮಯೋಚಿತ ಸಂಭಾಷಣೆ ಹಾಗೂ ವಿಶಿಷ್ಟ ಹಾಸ್ಯ ಶೈಲಿಯಿಂದ ಅವರು ಪ್ರತಿಯೊಬ್ಬ ಕಲಾರಸಿಕರ ಹೃದಯದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ನಿಧನದಿಂದ ಬಡಗು ಯಕ್ಷಗಾನ ಕ್ಷೇತ್ರವು ಒಬ್ಬ ಶ್ರೇಷ್ಠ ಕಲಾವಿದರನ್ನು ಕಳೆದುಕೊಂಡಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಕೊನೆಯಲ್ಲಿ, ದಿವಂಗತ ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬದವರಿಗೆ, ಅಪಾರ ಅಭಿಮಾನಿಗಳಿಗೆ ಮತ್ತು ಯಕ್ಷಗಾನ ಕಲಾವಿದರಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರಾರ್ಥಿಸಿದರು.

