प्रशासनाच्या निष्काळजीपणामुळे दुचाकी घसरून नागरिक गंभीर जखमी; संबंधित अधिकाऱ्यांवर फौजदारी गुन्हा दाखल करण्याची मागणी.
खानापूर (प्रतिनिधी) : खानापूर–पणजी मार्गावरील नगरपंचायतीच्या जॅकवेलजवळ रस्त्यावर करण्यात आलेल्या निकृष्ट दर्जाच्या खोदकामामुळे एका दुचाकीस्वाराचा गंभीर अपघात झाला असून प्रशासनाच्या दुर्लक्षामुळे नागरिकांच्या जीवाशी खेळ सुरू असल्याचा आरोप होत आहे. या प्रकरणी पोलिसांनी संबंधित विभागाच्या अधिकाऱ्यांवर फौजदारी गुन्हा दाखल करण्याची मागणी नागरिकांकडून जोर धरू लागली आहे.

खानापूर शहराला 24 तास पाणीपुरवठा करण्याच्या योजनेअंतर्गत संबंधित खात्याकडून रस्ता खोदून पाईपलाईन टाकण्यात आली होती. मात्र खोदलेला चर योग्य पद्धतीने बुजविण्यात न आल्याने त्या ठिकाणी मोठा खड्डा निर्माण झाला आहे. याच ठिकाणी रूमेवाडी क्रॉस येथील रहिवासी शामराव सुतार हे दुचाकीवरून जात असताना त्यांचे दुचाकी वाहन घसरून पडले व ते गंभीर जखमी झाले.
या अपघातात त्यांच्या डोक्याच्या उजव्या बाजूला, हाताला, गुडघ्याला तसेच पायाच्या बोटांना गंभीर दुखापत झाली. अपघातानंतर स्थानिक नागरिकांनी तातडीने त्यांना प्राथमिक आरोग्य केंद्रात दाखल केले. प्राथमिक उपचारानंतर त्यांना घरी सोडण्यात आले असून त्यांच्यावर अद्याप उपचार सुरू आहेत. सुदैवाने डोक्याला गंभीर मार बसला नसल्याने मोठी जीवितहानी टळली.
विशेष म्हणजे, या धोकादायक चराबाबत यापूर्वीच “आपलं खानापूर” न्यूज पोर्टलने वृत्त प्रसिद्ध करून प्रशासनाचे लक्ष वेधले होते. त्यानंतर संबंधित विभागाने केवळ तात्पुरती डागडुजी केली. मात्र काही दिवसांतच पुन्हा खड्डा निर्माण झाल्याने हा अपघात घडला आहे. या ठिकाणी वारंवार लहान-मोठे अपघात होत असल्याचे नागरिकांचे म्हणणे आहे.
अपघातानंतर प्रशासनाने पुन्हा एकदा तात्पुरती डागडुजी केली असली तरी काही दिवसांतच खड्डा पूर्ववत होण्याची शक्यता व्यक्त केली जात आहे. त्यामुळे कायमस्वरूपी दुरुस्ती करून नागरिकांच्या सुरक्षिततेची हमी द्यावी, तसेच निष्काळजीपणामुळे अपघातास कारणीभूत ठरलेल्या संबंधित अधिकारी व कंत्राटदारांवर फौजदारी गुन्हा दाखल करावा, अशी मागणी नागरिकांनी केली आहे.
ಆಡಳಿತದ ನಿರ್ಲಕ್ಷ್ಯದಿಂದ ಬೈಕ್ ಜಾರಿ ನಾಗರಿಕ ಗಂಭೀರ ಗಾಯ; ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಆಗ್ರಹ.
ಖಾನಾಪುರ (ಪ್ರತಿನಿಧಿ): ಖಾನಾಪುರ–ಪಣಜಿ ರಸ್ತೆಯ ನಗರ ಪಂಚಾಯಿತಿಯ ಜಾಕ್ವೆಲ್ ಸಮೀಪ ರಸ್ತೆಯಲ್ಲಿ ಕಳಪೆ ಮಟ್ಟದ ಕಾಮಗಾರಿ ನಡೆಸಿರುವುದರಿಂದ ದ್ವಿಚಕ್ರ ವಾಹನ ಸವಾರ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಆಡಳಿತದ ನಿರ್ಲಕ್ಷ್ಯದಿಂದ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ ನಡೆಯುತ್ತಿದೆ ಎಂದು ಆರೋಪಿಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.
ಖಾನಾಪುರ ಪಟ್ಟಣಕ್ಕೆ 24 ಗಂಟೆಗಳ ನೀರು ಪೂರೈಕೆ ಯೋಜನೆಯಡಿ ಸಂಬಂಧಿಸಿದ ಇಲಾಖೆಯಿಂದ ರಸ್ತೆ ಅಗೆದು ಪೈಪ್ಲೈನ್ ಅಳವಡಿಸಲಾಗಿತ್ತು. ಆದರೆ ಅಗೆದ ಕಾಲುವೆಯನ್ನು ಸಮರ್ಪಕವಾಗಿ ಮುಚ್ಚದ ಕಾರಣ ಆ ಸ್ಥಳದಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿದೆ. ಇದೇ ಸ್ಥಳದಲ್ಲಿ ರೂಮೇವಾಡಿ ಕ್ರಾಸ್ ನಿವಾಸಿಯಾದ ಶಾಮರಾವ್ ಸುತಾರ್ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ವಾಹನ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಅಪಘಾತದಲ್ಲಿ ಅವರ ತಲೆಯ ಬಲಭಾಗ, ಕೈ, ಮೊಣಕಾಲು ಹಾಗೂ ಕಾಲಿನ ಬೆರಳುಗಳಿಗೆ ಗಂಭೀರ ಗಾಯಗಳಾಗಿದ್ದು. ಅಪಘಾತದ ಬಳಿಕ ಸ್ಥಳೀಯರು ತಕ್ಷಣವೇ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಅವರನ್ನು ಮನೆಗೆ ಕಳುಹಿಸಲಾಗಿದ್ದು, ಪ್ರಸ್ತುತವೂ ಚಿಕಿತ್ಸೆ ಮುಂದುವರಿದಿದೆ. ಅದೃಷ್ಟವಶಾತ್ ತಲೆಗೆ ಗಂಭೀರ ಪೆಟ್ಟು ಬಿಳದ ಕಾರಣ ದೊಡ್ಡ ಅನಾಹುತ ತಪ್ಪಿದೆ.
ವಿಶೇಷವೆಂದರೆ, ಈ ಅಪಾಯಕಾರಿ ಗುಂಡಿಯ ಕುರಿತು ಈ ಹಿಂದೆಯೇ “ಆಪಲ ಖಾನಾಪುರ” ನ್ಯೂಸ್ ಪೋರ್ಟಲ್ ವರದಿ ಪ್ರಕಟಿಸಿ ಆಡಳಿತದ ಗಮನ ಸೆಳೆದಿತ್ತು. ಬಳಿಕ ಸಂಬಂಧಿಸಿದ ಇಲಾಖೆಯು ಕೇವಲ ತಾತ್ಕಾಲಿಕ ದುರಸ್ತಿ ನಡೆಸಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಗುಂಡಿ ಉಂಟಾಗಿ ಈ ಅಪಘಾತ ಸಂಭವಿಸಿದೆ.
ಈ ಸ್ಥಳದಲ್ಲಿ ಆಗಾಗ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ಬಳಿಕ ಆಡಳಿತವು ಮತ್ತೊಮ್ಮೆ ತಾತ್ಕಾಲಿಕ ದುರಸ್ತಿ ನಡೆಸಿದರೂ, ಕೆಲವೇ ದಿನಗಳಲ್ಲಿ ಗುಂಡಿ ಮತ್ತೆ ಯಥಾಸ್ಥಿತಿಗೆ ಬರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಆದ್ದರಿಂದ ಈ ಸ್ಥಳದಲ್ಲಿ ಶಾಶ್ವತ ದುರಸ್ತಿ ಕಾಮಗಾರಿ ನಡೆಸಿ ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಬೇಕು. ಅಲ್ಲದೆ, ನಿರ್ಲಕ್ಷ್ಯದಿಂದ ಈ ಅಪಘಾತಕ್ಕೆ ಕಾರಣರಾದ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

