नंदगडसह परिसरात चार दिवसांपासून वीजपुरवठा खंडित; नागरिकांमध्ये तीव्र संताप.
नंदगड, प्रतिनिधी : गेल्या चार दिवसांपासून सुरू झालेल्या मुसळधार पावसानंतर नंदगडसह आणि परिसरातील अनेक गावांचा वीजपुरवठा पूर्णपणे विस्कळीत झाला आहे. परिणामी नागरिक, व्यापारी, विद्यार्थी, शेतकरी आणि लघुउद्योजक यांना मोठ्या अडचणींचा सामना करावा लागत असून विद्युत वितरण विभागाविषयी तीव्र नाराजी व्यक्त होत आहे.
पावसामुळे एखादे झाड वीजवाहिनीवर कोसळणे किंवा ट्रान्सफॉर्मरमध्ये तांत्रिक बिघाड होणे ही नैसर्गिक बाब आहे. अशा परिस्थितीत काही तास वीजपुरवठा खंडित होऊ शकतो, हे नागरिकही समजून घेतात. मात्र सलग चार दिवस वीजपुरवठा सुरळीत न होणे ही अत्यंत गंभीर बाब असल्याची भावना परिसरातील नागरिक व्यक्त करत आहेत.
सततच्या वीजखंडितामुळे व्यापारी वर्गाचे आर्थिक नुकसान होत आहे. अनेकांनी तात्पुरत्या उपाययोजने म्हणून इन्व्हर्टरची व्यवस्था केली असली तरी चार दिवस वीज नसल्याने त्यांचाही उपयोग संपला आहे. घरगुती कामे, पिण्याच्या पाण्याचा पुरवठा, विद्यार्थ्यांचा अभ्यास, लहान उद्योग तसेच दैनंदिन व्यवहार मोठ्या प्रमाणावर विस्कळीत झाले आहेत.
वारंवार विचारणा करूनही वीजपुरवठा पूर्ववत कधी होणार याबाबत नागरिकांना स्पष्ट माहिती मिळत नसल्याची तक्रार आहे. त्यामुळे नागरिकांमध्ये असंतोष वाढत असून विद्युत वितरण विभागाच्या कार्यपद्धतीवर प्रश्नचिन्ह उपस्थित केले जात आहे. स्थानिक लोकप्रतिनिधींनीही या गंभीर समस्येकडे तातडीने लक्ष देऊन संबंधित अधिकाऱ्यांशी समन्वय साधावा, अशी मागणी होत आहे.
नागरिकांचे म्हणणे आहे की, जर तांत्रिक अडचणी असतील तर त्या स्पष्टपणे सांगून वीजपुरवठा पूर्ववत करण्यासाठी कोणती उपाययोजना सुरू आहे, याची माहिती प्रशासनाने द्यावी. गोलमोल उत्तरे देण्यापेक्षा प्रत्यक्ष काम करून नागरिकांना दिलासा देणे अधिक महत्त्वाचे आहे.
येत्या काही तासांत वीजपुरवठा सुरळीत झाला नाही, तर नंदगड गावासह नंदगड आणि परिसरातील नागरिक खानापूर तालुका विद्युत केंद्र कार्यालयासमोर एकत्र येऊन तीव्र आंदोलन छेडण्याचा इशारा देत आहेत. वीज ही नागरिकांची मूलभूत गरज असून तिचा अखंडित पुरवठा करणे ही संबंधित विभागाची जबाबदारी असल्याचे नागरिकांनी स्पष्ट केले आहे.
नंदगड व परिसरातील सामान्य नागरिकांनी संबंधित अधिकाऱ्यांनी तातडीने लक्ष घालून वीजपुरवठा पूर्ववत करावा, अशी जोरदार मागणी केली आहे.
ನಂದಗಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ; ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ.
ನಂದಗಡ, ಪ್ರತಿನಿಧಿ : ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ನಂದಗಡ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಸಾರ್ವಜನಿಕರು, ವ್ಯಾಪಾರಸ್ಥರು, ವಿದ್ಯಾರ್ಥಿಗಳು, ರೈತರು ಹಾಗೂ ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ವಿದ್ಯುತ್ ವಿತರಣಾ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಳೆಯಿಂದ ಮರ ಅಥವಾ ಕೂಂಭೆ ವಿದ್ಯುತ್ ತಂತಿಗಳ ಮೇಲೆ ಬೀಳುವುದು ಅಥವಾ ಟ್ರಾನ್ಸ್ಫಾರ್ಮರ್ಗಳಲ್ಲಿ ತಾಂತ್ರಿಕ ದೋಷ ಉಂಟಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಕೆಲವು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾದರೆ ಸಾರ್ವಜನಿಕರು ಅದನ್ನು ಅರ್ಥಮಾಡಿಕೊಳ್ಳುತ್ತಾರೆ. ಆದರೆ ಸತತ ನಾಲ್ಕು ದಿನಗಳಾದರೂ ವಿದ್ಯುತ್ ಸರಬರಾಜು ಪುನಃಸ್ಥಾಪನೆ ಆಗದಿರುವುದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಿರಂತರ ವಿದ್ಯುತ್ ವ್ಯತ್ಯಯದಿಂದ ವ್ಯಾಪಾರಿಗಳಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಹಲವರು ತಾತ್ಕಾಲಿಕವಾಗಿ ಇನ್ವರ್ಟರ್ ವ್ಯವಸ್ಥೆ ಮಾಡಿಕೊಂಡಿದ್ದರೂ ನಾಲ್ಕು ದಿನಗಳಿಂದ ವಿದ್ಯುತ್ ಇಲ್ಲದ ಕಾರಣ ಅವುಗಳೂ ನಿಷ್ಕ್ರಿಯವಾಗಿವೆ. ಮನೆಮಠದ ಕೆಲಸ, ಕುಡಿಯುವ ನೀರಿನ ಪೂರೈಕೆ, ವಿದ್ಯಾರ್ಥಿಗಳ ಅಧ್ಯಯನ, ಸಣ್ಣ ಕೈಗಾರಿಕೆಗಳು ಹಾಗೂ ದೈನಂದಿನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮೇಲಿಂದ ಮೇಲೆ ವಿಚಾರಿಸಿದರೂ ವಿದ್ಯುತ್ ಸರಬರಾಜು ಯಾವಾಗ ಆರಂಭವಾಗಲಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇದರಿಂದ ಜನರ ಅಸಮಾಧಾನ ಮತ್ತಷ್ಟು ಹೆಚ್ಚುತ್ತಿದ್ದು, ವಿದ್ಯುತ್ ವಿತರಣಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳು ಉದ್ಭವಿಸಿವೆ. ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ಈ ಸಮಸ್ಯೆಯತ್ತ ಗಮನಹರಿಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಂತ್ರಿಕ ಸಮಸ್ಯೆಗಳಿದ್ದರೆ ಅವುಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ, ವಿದ್ಯುತ್ ಸರಬರಾಜು ಪುನಃಸ್ಥಾಪಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಸುಖಾಸುಮ್ಮನೆ ಉತ್ತರಗಳನ್ನು ನೀಡುವುದಕ್ಕಿಂತ ನೇರವಾಗಿ ಕಾರ್ಯನಿರ್ವಹಿಸಿ ಜನರಿಗೆ ಪರಿಹಾರ ಒದಗಿಸುವುದು ಹೆಚ್ಚು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಕೆಲವು ಗಂಟೆಗಳಲ್ಲಿಯೂ ವಿದ್ಯುತ್ ಸರಬರಾಜು ಸಾಮಾನ್ಯ ಸ್ಥಿತಿಗೆ ಮರಳದಿದ್ದರೆ, ನಂದಗಡ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಸಾರ್ವಜನಿಕರು ಖಾನಾಪುರ ತಾಲೂಕು ವಿದ್ಯುತ್ ಕೇಂದ್ರದ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ವಿದ್ಯುತ್ ಸಾರ್ವಜನಿಕರ ಮೂಲಭೂತ ಅಗತ್ಯವಾಗಿದ್ದು, ನಿರಂತರ ಹಾಗೂ ಸುಗಮ ವಿದ್ಯುತ್ ಸರಬರಾಜು ಒದಗಿಸುವುದು ಸಂಬಂಧಿತ ಇಲಾಖೆಯ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಂದಗಡ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವಿದ್ಯುತ್ ಸರಬರಾಜನ್ನು ಶೀಘ್ರ ಪುನಃಸ್ಥಾಪಿಸಬೇಕು ಎಂದು ಬಲವಾಗಿ ಆಗ್ರಹಿಸಿದ್ದಾರೆ.


