कॅनरा लोकसभा क्षेत्रातील रस्ते विकासासाठी केंद्राकडून ₹59.5 कोटी मंजूर; खासदार विश्वेश्वर हेगडे कागेरी.
शिरसी : प्रतिनिधी
केंद्र सरकारच्या केंद्रीय रस्ता विकास निधी (CRIF) 2026-27 योजनेअंतर्गत उत्तर कन्नड (कॅनरा) लोकसभा मतदारसंघातील खानापूर सह आठ विधानसभा क्षेत्रांमधील निवडक राज्य महामार्ग व जिल्हा मुख्य रस्त्यांच्या विकासासाठी एकूण ₹59.5 कोटींचा निधी मंजूर करण्यात आला असल्याची माहिती खासदार विश्वेश्वर हेगडे-कागेरी यांनी दिली.
जिल्ह्यातील महत्त्वाच्या रस्त्यांच्या उन्नतीकरणासाठी हा निधी मंजूर केल्याबद्दल खासदारांनी पंतप्रधान नरेंद्र मोदी तसेच केंद्रीय रस्ते वाहतूक व महामार्ग मंत्री नितीन गडकरी यांचे उत्तर कन्नड (कॅनरा) लोकसभा क्षेत्रातील जनतेच्या वतीने अभिनंदन व आभार व्यक्त केले.
या निधीमुळे उत्तर कन्नड जिल्ह्यातील विविध राज्य महामार्ग व प्रमुख जिल्हा तसेच तालुक्यातील रस्त्यांच्या विकासकामांना गती मिळणार असून, वाहतूक सुविधा अधिक सक्षम होण्यास मदत होणार आहे. ग्रामीण व दुर्गम भागातील नागरिकांना याचा मोठा लाभ मिळणार असल्याचेही खासदारांनी सांगितले आहे.
ಕ್ಯಾನರಾ ಲೋಕಸಭಾ ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಕೇಂದ್ರದಿಂದ ₹59.5 ಕೋಟಿ ಮಂಜೂರು; ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.
ಶಿರಸಿ : ಪ್ರತಿನಿಧಿ
ಕೇಂದ್ರ ಸರ್ಕಾರದ ಕೇಂದ್ರ ರಸ್ತೆ ಅಭಿವೃದ್ಧಿ ನಿಧಿ (CRIF) 2026-27 ಯೋಜನೆಯಡಿ ಉತ್ತರ ಕನ್ನಡ (ಕ್ಯಾನರಾ) ಲೋಕಸಭಾ ಕ್ಷೇತ್ರದ ಖಾನಾಪುರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಆಯ್ದ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿಗಾಗಿ ಒಟ್ಟು ₹59.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಜಿಲ್ಲೆಯ ಪ್ರಮುಖ ರಸ್ತೆಗಳ ಅಭಿವೃದ್ಧಿ ಮತ್ತು ಉನ್ನತೀಕರಣಕ್ಕಾಗಿ ಈ ಅನುದಾನವನ್ನು ಮಂಜೂರು ಮಾಡಿರುವುದಕ್ಕೆ ಸಂಸದರು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಉತ್ತರ ಕನ್ನಡ (ಕ್ಯಾನರಾ) ಲೋಕಸಭಾ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಈ ಅನುದಾನದಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ರಾಜ್ಯ ಹೆದ್ದಾರಿಗಳು ಹಾಗೂ ಪ್ರಮುಖ ಜಿಲ್ಲಾ ಮತ್ತು ತಾಲ್ಲೂಕು ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದ್ದು, ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಹಕಾರಿಯಾಗಲಿದೆ. ಗ್ರಾಮೀಣ ಹಾಗೂ ದುರ್ಗಮ ಪ್ರದೇಶಗಳ ಜನರಿಗೆ ಇದರಿಂದ ಹೆಚ್ಚಿನ ಪ್ರಯೋಜನವಾಗಲಿದ್ದು, ಸಂಚಾರ ಸೌಲಭ್ಯಗಳು ಸುಧಾರಿಸಿ ಅಭಿವೃದ್ಧಿಗೆ ಹೊಸ ಉತ್ತೇಜನ ದೊರೆಯಲಿದೆ ಎಂದು ಸಂಸದರು ತಿಳಿಸಿದ್ದಾರೆ.


