राजस्थानमध्ये इबोला विषाणूचा पहिला संशयित रुग्ण.
जयपूर : वृत्तसंस्था
राजस्थानमध्ये इबोला विषाणूचा एक संशयित रुग्ण आढळल्याने आरोग्य विभागाला सतर्कतेचा इशारा देण्यात आला आहे. इबोलासारखी लक्षणे दिसू लागल्यानंतर राजस्थानमध्ये आलेल्या युगांडातील एका परदेशी महिलेला जयपूरच्या आरयूएचएस रुग्णालयात दाखल करून विशेष विलगीकरण कक्षात ठेवण्यात आले आहे. रुग्णालय प्रशासन आणि आरोग्य विभाग या प्रकरणावर बारकाईने लक्ष ठेवून आहेत. महिलेचे नमुने तपासणीसाठी पुण्यातील एका विशेष प्रयोगशाळेत पाठवण्यात आले आहे.
आरयूएचएस रुग्णालयाचे अधीक्षक डॉ. अनिल गुप्ता यांनी
सांगितले की, सध्या इबोला संसर्गाची पुष्टी झालेली नाही. महिलेमध्ये इबोला विषाणूशी सुसंगत अशी काही लक्षणे दिसून आली आहेत. त्यामुळे खबरदारीचा उपाय म्हणून तिला विलगीकरणात ठेवण्यात आले आहे. सर्व आवश्यक वैद्यकीय नियमांचे पालन केले जात आहे. आरोग्य विभागाने रुग्णालयात
एक विशेष देखरेख प्रणाली लागू केली आहे. त्या महिलेच्या संपर्कात आलेल्या लोकांची माहिती देखील गोळा केली जात आहे. जेणेकरून गरज पडल्यास त्यांच्यावर लक्ष ठेवता येईल. अहवाल प्राप्त झाल्यानंतरच संसर्गाची खरी होईल. इबोला व्याप्ती स्पष्ट विषाणू हा जगातील सर्वात धोकादायक संसर्गजन्य रोगांपैकी एक मानला जातो. तो संक्रमित व्यक्तीच्या शारीरिक द्रव्यांच्या संपर्कातून पसरू शकतो.
राजस्थानमधील वैद्यकीय आणि एलेश्रर उरीश आरोग्य विभागाने इबोला विषाणूबाबत सतर्कतेचा इशारा दिला आहे. वैद्यकीय आणि आरोग्य विभागाने राज्यातील सर्व सरकारी आणि खाजगी रुग्णालयांना सतर्क राहण्याच्या सूचना दिल्या आहेत.
याव्यतिरिक्त, संभाव्य संसर्ग लवकर ओळखण्यासाठी विमानतळावर परदेशातून, विशेषतः आफ्रिकन देशांमधून येणाऱ्या प्रवाशांची तपासणी करण्याचे आदेश देण्यात आले आहेत.
ರಾಜಸ್ಥಾನದಲ್ಲಿ ಇಬೋಲಾ ವೈರಸ್ನ ಮೊದಲ ಶಂಕಿತ ರೋಗಿ.
ಜೈಪುರ : ಸುದ್ದಿ ಸಂಸ್ಥೆರಾಜಸ್ಥಾನದಲ್ಲಿ ಇಬೋಲಾ ವೈರಸ್ನ ಶಂಕಿತ ರೋಗಿಯೊಬ್ಬರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಘೋಷಿಸಿದೆ. ಇಬೋಲಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಉಗಾಂಡಾದಿಂದ ಬಂದಿರುವ ವಿದೇಶಿ ಮಹಿಳೆಯನ್ನು ಜೈಪುರದ RUHS ಆಸ್ಪತ್ರೆಯಲ್ಲಿ ದಾಖಲಿಸಿ ವಿಶೇಷ ಪ್ರತ್ಯೇಕೀಕರಣ (ಐಸೋಲೇಷನ್) ವಾರ್ಡ್ನಲ್ಲಿ ಇರಿಸಲಾಗಿದೆ. ಆಸ್ಪತ್ರೆ ಆಡಳಿತ ಮತ್ತು ಆರೋಗ್ಯ ಇಲಾಖೆ ಈ ಪ್ರಕರಣದ ಮೇಲೆ ನಿಕಟ ನಿಗಾ ವಹಿಸಿವೆ.
ರಾಜಸ್ಥಾನದಲ್ಲಿ ಇಬೋಲಾ ವೈರಸ್ನ ಶಂಕಿತ ರೋಗಿಯೊಬ್ಬರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ಘೋಷಿಸಿದೆ. ಇಬೋಲಾ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಉಗಾಂಡಾದಿಂದ ಬಂದಿರುವ ವಿದೇಶಿ ಮಹಿಳೆಯನ್ನು ಜೈಪುರದ RUHS ಆಸ್ಪತ್ರೆಯಲ್ಲಿ ದಾಖಲಿಸಿ ವಿಶೇಷ ಪ್ರತ್ಯೇಕೀಕರಣ (ಐಸೋಲೇಷನ್) ವಾರ್ಡ್ನಲ್ಲಿ ಇರಿಸಲಾಗಿದೆ. ಆಸ್ಪತ್ರೆ ಆಡಳಿತ ಮತ್ತು ಆರೋಗ್ಯ ಇಲಾಖೆ ಈ ಪ್ರಕರಣದ ಮೇಲೆ ನಿಕಟ ನಿಗಾ ವಹಿಸಿವೆ.
ಮಹಿಳೆಯ ರಕ್ತ ಮತ್ತು ಇತರೆ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಯ ವಿಶೇಷ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
RUHS ಆಸ್ಪತ್ರೆಯ ಅಧೀಕ್ಷಕರಾದ ಡಾ. ಅನಿಲ್ ಗುಪ್ತಾ ಅವರು, “ಪ್ರಸ್ತುತ ಇಬೋಲಾ ಸೋಂಕು ದೃಢಪಟ್ಟಿಲ್ಲ. ಆದರೆ ಮಹಿಳೆಯಲ್ಲಿ ಇಬೋಲಾ ವೈರಸ್ಗೆ ಹೊಂದುವಂತಹ ಕೆಲವು ಲಕ್ಷಣಗಳು ಕಂಡುಬಂದಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕೀಕರಣದಲ್ಲಿ ಇರಿಸಲಾಗಿದೆ. ಎಲ್ಲಾ ಅಗತ್ಯ ವೈದ್ಯಕೀಯ ನಿಯಮಗಳನ್ನು ಪಾಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ವಿಶೇಷ ನಿಗಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಮಹಿಳೆಯ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತಿದೆ. ಅಗತ್ಯವಿದ್ದಲ್ಲಿ ಅವರ ಮೇಲೂ ನಿಗಾ ವಹಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪರೀಕ್ಷಾ ವರದಿ ಬಂದ ನಂತರವೇ ಸೋಂಕಿನ ನಿಜಸ್ವರೂಪ ಸ್ಪಷ್ಟವಾಗಲಿದೆ.
ಇಬೋಲಾ ವೈರಸ್ ಅನ್ನು ವಿಶ್ವದ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದು ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳ ಸಂಪರ್ಕದ ಮೂಲಕ ಹರಡಬಹುದು.
ರಾಜಸ್ಥಾನದ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಇಬೋಲಾ ವೈರಸ್ ಕುರಿತು ರಾಜ್ಯದಾದ್ಯಂತ ಎಚ್ಚರಿಕೆ ಸೂಚನೆ ನೀಡಿದೆ. ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಹೆಚ್ಚಿನ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.
ಇದರ ಜೊತೆಗೆ, ಸಂಭವನೀಯ ಸೋಂಕನ್ನು ಆರಂಭದಲ್ಲೇ ಪತ್ತೆಹಚ್ಚುವ ಉದ್ದೇಶದಿಂದ ವಿಮಾನ ನಿಲ್ದಾಣಗಳಲ್ಲಿ ವಿದೇಶಗಳಿಂದ, ವಿಶೇಷವಾಗಿ ಆಫ್ರಿಕಾ ದೇಶಗಳಿಂದ ಆಗಮಿಸುವ ಪ್ರಯಾಣಿಕರ ತಪಾಸಣೆ ನಡೆಸುವಂತೆ ಆದೇಶಿಸಲಾಗಿದೆ.


