गर्लगूंजीत वारंवार वीज खंडित; चार दिवसांत सुरळीत पुरवठा न झाल्यास आंदोलनाचा इशारा.
खानापूर ; खानापूर तालुक्यातील गर्लगूंजी गावामध्ये मागील दोन महिन्यांपासून वारंवार वीज पुरवठा खंडित होत असल्याने ग्रामस्थांमध्ये तीव्र नाराजी व्यक्त होत आहे. विशेष म्हणजे ग्रामदैवत श्री माऊलीदेवी यात्रोत्सवाच्या मुख्य दिवशी तब्बल सहा तास गावात वीज नव्हती. त्यानंतर दररोज वीज खंडित होण्याचे प्रकार वाढले असून नागरिक त्रस्त झाले आहेत.
5 मे रोजी झालेल्या अवकाळी पावसामुळे तब्बल २६ तास वीज गायब झाली होती. त्यानंतर 13 मे रोजी पुन्हा पावसामुळे सुमारे 18 तास वीज पुरवठा खंडित करण्यात आला. सततच्या खंडित वीज पुरवठ्यामुळे गावातील पिण्याच्या पाण्याचा पुरवठा विस्कळीत झाला आहे. तसेच कोल्ड ड्रिंक्स दुकाने, दळण-कांडप गिरण्या आणि इतर लहान-मोठे उद्योगधंदे बंद ठेवण्याची वेळ व्यावसायिकांवर आली आहे.
या गंभीर परिस्थितीवर सविस्तर चर्चा करून आज समस्त गर्लगूंजी ग्रामस्थांच्या वतीने हेस्कॉमच्या अधिकाऱ्यांना निवेदन देण्यात आले. गावातील वीज समस्येबाबत सविस्तर माहिती देत तात्काळ उपाययोजना करण्याची मागणी करण्यात आली.
चार दिवसांच्या आत वीज पुरवठा सुरळीत न झाल्यास येत्या सोमवारी हेस्कॉम कार्यालयावर भव्य आंदोलन छेडण्यात येईल, असा इशाराही ग्रामस्थांनी दिला आहे. यावेळी गावातील नागरिक मोठ्या संख्येने उपस्थित होते.
ಗರ್ಲಗುಂಜಿಯಲ್ಲಿ ಪದೇಪದೇ ವಿದ್ಯುತ್ ವ್ಯತ್ಯಯ; ನಾಲ್ಕು ದಿನಗಳಲ್ಲಿ ನಿರಂತರ ಸರಬರಾಜು ಮಾಡದಿದ್ದರೆ ಪ್ರತಿಭಟನೆ ಎಚ್ಚರಿಕೆ.
ಖಾನಾಪುರ : ಖಾನಾಪುರ ತಾಲ್ಲೂಕಿನ ಗರ್ಲಗುಂಜಿ ಗ್ರಾಮದಲ್ಲಿ ಕಳೆದ ಎರಡು ತಿಂಗಳಿಂದ ಮೇಲಿಂದ ಮೇಲೆ ವಿದ್ಯುತ್ ಸರಬರಾಜು ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದು. ವಿಶೇಷವಾಗಿ ಗ್ರಾಮ ದೇವತೆ ಶ್ರೀ ಮಾವಲಿದೇವಿ ಜಾತ್ರೋತ್ಸವದ ಮುಖ್ಯ ದಿನವೇ ಸುಮಾರು ಆರು ಗಂಟೆಗಳ ಕಾಲ ಗ್ರಾಮದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ತದ ನಂತರ ಪ್ರತಿದಿನವೂ ವಿದ್ಯುತ್ ವ್ಯತ್ಯಯ ವಾಗುವ ಘಟನೆಗಳು ಹೆಚ್ಚಾಗಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮೇ 5ರಂದು ಸಂಭವಿಸಿದ ಅಕಾಲಿಕ ಮಳೆಯಿಂದಾಗಿ ಸುಮಾರು 26 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ನಂತರ ಮೇ 13ರಂದು ಮತ್ತೆ ಮಳೆಯ ಕಾರಣದಿಂದ ಸುಮಾರು 18 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಯಿತು. ನಿರಂತರ ವಿದ್ಯುತ್ ವ್ಯತ್ಯಯದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಹಾಗೆಯೇ ಕೋಲ್ಡ್ ಡ್ರಿಂಕ್ಸ್ ಅಂಗಡಿಗಳು, ಗಿರಣಿಗಳು ಹಾಗೂ ಇತರೆ ಸಣ್ಣ-ದೊಡ್ಡ ಉದ್ಯಮಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಗಂಭೀರ ಪರಿಸ್ಥಿತಿಯ ಕುರಿತು ಸವಿಸ್ತಾರ ಚರ್ಚೆ ನಡೆಸಿ, ಇಂದು ಸಮಸ್ತ ಗರ್ಲಗುಂಜಿ ಗ್ರಾಮಸ್ಥರ ಪರವಾಗಿ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಗ್ರಾಮದಲ್ಲಿನ ವಿದ್ಯುತ್ ಸಮಸ್ಯೆಯ ಕುರಿತು ಸಂಪೂರ್ಣ ಮಾಹಿತಿ ನೀಡಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು. ನಾಲ್ಕು ದಿನಗಳೊಳಗೆ ವಿದ್ಯುತ್ ಸರಬರಾಜು ಸರಾಗವಾಗಿ ಪುನಃ ಆರಂಭವಾಗದಿದ್ದರೆ, ಬರುವ ಸೋಮವಾರ ಹೆಸ್ಕಾಂ ಕಚೇರಿ ಎದುರು ಭಾರಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


