अनुष्का देसाईचा 621 गुणांसह उल्लेखनीय यश; ग्रामस्थांतर्फे सत्कार.
खानापूर : दहावीतील यश हे विद्यार्थ्यांच्या आयुष्यातील अत्यंत महत्त्वाचे पाऊल असते. या यशानंतर पुढील शिक्षण घेताना सातत्य, मेहनत आणि शिस्त कायम ठेवणे आवश्यक आहे. आजच्या स्पर्धेच्या युगात विद्यार्थ्यांनी आत्मविश्वास बाळगून विविध स्पर्धा परीक्षांची तयारी करावी. योग्य नियोजन, चिकाटी आणि परिश्रम यांच्या जोरावर मोठे यश मिळविता येते, असे प्रतिपादन गुंडपी शाळेचे मुख्याध्यापक दत्तात्रय देसाई यांनी केले.
हलशीवाडी येथील विद्यार्थिनी अनुष्का देसाई हिने दहावीच्या परीक्षेत 621 गुण मिळवून उल्लेखनीय यश संपादन केले. तिच्या या यशाबद्दल ग्रामस्थांतर्फे शाल व स्मृतिचिन्ह देऊन तिचा सत्कार करण्यात आला.
यावेळी बोलताना मुख्याध्यापक दत्तात्रय देसाई यांनी सांगितले की, दहावीतील यशामुळे विद्यार्थ्यांच्या आयुष्याला योग्य दिशा मिळते. अनुष्काच्या यशामुळे गावातील इतर विद्यार्थ्यांनाही अधिक चांगली कामगिरी करण्याची प्रेरणा मिळेल, असा विश्वास त्यांनी व्यक्त केला.
प्रारंभी नरसिंग देसाई, हलशी पीकेपीएसचे माजी अध्यक्ष सुधीर देसाई, पुंडलिक देसाई, संचालक राजू देसाई, माजी ग्रामपंचायत सदस्य दिनेश देसाई, अनंत देसाई, वामन देसाई, मल्लाप्पा देसाई आदी मान्यवरांच्या हस्ते अनुष्काचा सत्कार करण्यात आला.
कार्यक्रमाचे स्वागत रघुनाथ देसाई यांनी केले, प्रास्ताविक मिलिंद देसाई यांनी केले. शेवटी अनुष्का देसाई हिने सर्वांचे आभार मानत भविष्यात अधिक मेहनत घेऊन मोठे यश संपादन करण्याचा निर्धार व्यक्त केला.
यावेळी सुनील देसाई, पुंडलिक शा. देसाई, रमेश देसाई, राजन सुतार, निंगाप्पा देसाई, प्रमोद देसाई, केशव देसाई, प्रशांत देसाई यांच्यासह ग्रामस्थ मोठ्या संख्येने उपस्थित होते.
ಖಾನಾಪುರ : ಅನುಷ್ಕಾ ದೇಸಾಯಿ 621 ಅಂಕಗಳೊಂದಿಗೆ ಗಮನಾರ್ಹ ಸಾಧನೆ; ಗ್ರಾಮಸ್ಥರಿಂದ ಸನ್ಮಾನ
ಖಾನಾಪುರ : 10 ನೇಯ ತರಗತಿಯ ಯಶಸ್ಸು ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಹಂತವಾಗಿರುತ್ತದೆ. ಈ ಯಶಸ್ಸಿನ ನಂತರ ಮುಂದಿನ ವಿದ್ಯಾಭ್ಯಾಸದಲ್ಲಿ ಸಹ ನಿರಂತರತೆ, ಪರಿಶ್ರಮ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸಬೇಕು. ಸರಿಯಾದ ಯೋಜನೆ, ಧೈರ್ಯ ಮತ್ತು ಪರಿಶ್ರಮದ ಮೂಲಕ ದೊಡ್ಡ ಸಾಧನೆಗಳನ್ನು ಸಾಧಿಸಬಹುದು ಎಂದು ಗುಂಡಪಿ ಶಾಲೆಯ ಮುಖ್ಯೋಪಾಧ್ಯಾಯ ದತ್ತಾತ್ರಯ ದೇಸಾಯಿ ಅಭಿಪ್ರಾಯಪಟ್ಟರು.
ಹಲಶಿವಾಡಿ ಗ್ರಾಮದ ವಿದ್ಯಾರ್ಥಿನಿ ಅನುಷ್ಕಾ ದೇಸಾಯಿ 10 ನೇಯ ತರಗತಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾಳೆ. ಆಕೆಯ ಈ ಸಾಧನೆಗಾಗಿ ಗ್ರಾಮಸ್ಥರ ವತಿಯಿಂದ ಶಾಲು ಮತ್ತು ಸ್ಮರಣಿಕೆಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ದತ್ತಾತ್ರಯ ದೇಸಾಯಿ ಅವರು, 10 ನೇಯ ತರಗತಿಯ ಯಶಸ್ಸು ವಿದ್ಯಾರ್ಥಿಗಳ ಜೀವನಕ್ಕೆ ಸರಿಯಾದ ದಿಕ್ಕು ನೀಡುತ್ತದೆ ಎಂದು ಹೇಳಿದರು. ಅನುಷ್ಕಾ ಸಾಧನೆಯಿಂದ ಗ್ರಾಮದಲ್ಲಿನ ಇತರ ವಿದ್ಯಾರ್ಥಿಗಳಿಗೂ ಉತ್ತಮ ಸಾಧನೆ ಮಾಡಲು ಪ್ರೇರಣೆ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾರಂಭದಲ್ಲಿ ನರಸಿಂಗ ದೇಸಾಯಿ, ಹಲಶಿ ಪಿಕೆಪಿಎಸ್ನ ಮಾಜಿ ಅಧ್ಯಕ್ಷ ಸುಧೀರ ದೇಸಾಯಿ, ಪುಂಡಲಿಕ ದೇಸಾಯಿ, ನಿರ್ದೇಶಕ ರಾಜು ದೇಸಾಯಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ದಿನೇಶ್ ದೇಸಾಯಿ, ಅನಂತ ದೇಸಾಯಿ, ವಾಮನ ದೇಸಾಯಿ, ಮಲ್ಲಪ್ಪ ದೇಸಾಯಿ ಅವರಿಂದ ಅನುಷ್ಕಾಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮಕ್ಕೆ ರಘುನಾಥ ದೇಸಾಯಿ ಸ್ವಾಗತ ಕೋರಿದರು, ಮಿಲಿಂದ ದೇಸಾಯಿ ಪ್ರಾಸ್ತಾವಿಕ ಭಾಷಣ ಮಾಡಿದರು. ಕೊನೆಯಲ್ಲಿ ಅನುಷ್ಕಾ ದೇಸಾಯಿ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿ, ಭವಿಷ್ಯದಲ್ಲಿ ಇನ್ನಷ್ಟು ಪರಿಶ್ರಮಪಟ್ಟು ದೊಡ್ಡ ಸಾಧನೆ ಮಾಡುವ ಸಂಕಲ್ಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುನಿಲ್ ದೇಸಾಯಿ, ಪುಂಡಲಿಕ ಶಾ. ದೇಸಾಯಿ, ರಮೇಶ್ ದೇಸಾಯಿ, ರಾಜನ್ ಸುತಾರ್, ನಿಂಗಪ್ಪ ದೇಸಾಯಿ, ಪ್ರಮೋದ ದೇಸಾಯಿ, ಕೇಶವ ದೇಸಾಯಿ, ಪ್ರಶಾಂತ್ ದೇಸಾಯಿ ಸೇರಿದಂತೆ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


