वीज बिल भरण्यासाठी अधिकृत पद्धतीचाच वापर करा; अनधिकृत व्यक्तींना रोख रक्कम देऊ नका – AEE प्रविण बरगाले यांचे आवाहन.
खानापूर : हुबळी इलेक्ट्रिसिटी सप्लाय कंपनी (HESCOM) अंतर्गत काही कंत्राटदार, कर्मचारी तसेच जीव्हीपी प्रतिनिधी यांनी ग्राहकांकडून वीज बिलाची रक्कम गोळा करून ती खात्यात जमा न केल्याबाबत तोंडी तक्रारी प्राप्त झाल्या आहेत. या पार्श्वभूमीवर सर्व ग्राहक व नागरिकांनी वीज बिलाचा भरणा केवळ अधिकृत माध्यमांतूनच करावा, असे आवाहन हेस्कॉमचे सहाय्यक कार्यकारी अभियंता प्रवीण बरगाले यांनी केले आहे.
वीज बिल भरण्यासाठी HESCOM चे अधिकृत बिल काउंटर, बीबीपीएस (BBPS) तसेच ऑनलाईन / ई-पेमेंट व GVP सुविधा यांचाच वापर करावा. कोणत्याही अनधिकृत व्यक्तीकडे रोख रक्कम देऊ नये, अन्यथा आर्थिक फसवणूक व गैरसोयीचा सामना करावा लागू शकतो, असा इशाराही देण्यात आला आहे.
ग्राहकांनी सतर्क राहून सुरक्षित व्यवहार करावेत, असे आवाहन खानापूर हेस्कॉमचे सहाय्यक कार्यकारी अभियंता प्रविण बरगाले, यांनी केले आहे.
ವಿದ್ಯುತ್ ಬಿಲ್ ಪಾವತಿಗೆ ಅಧಿಕೃತ ವಿಧಾನಗಳನ್ನೇ ಬಳಸಿ; ಅನಧಿಕೃತ ವ್ಯಕ್ತಿಗಳಿಗೆ ನಗದು ನೀಡಬೇಡಿ – AEE ಪ್ರವೀಣ ಬರಗಾಳೆ ಮನವಿ.
ಖಾನಾಪುರ : Hubli Electricity Supply Company (HESCOM) ವ್ಯಾಪ್ತಿಯ ಕೆಲ ಗುತ್ತಿಗೆದಾರರು, ಸಿಬ್ಬಂದಿ ಹಾಗೂ ಜಿವಿಪಿ ಪ್ರತಿನಿಧಿಗಳು ಗ್ರಾಹಕರಿಂದ ವಿದ್ಯುತ್ ಬಿಲ್ ಮೊತ್ತವನ್ನು ಸಂಗ್ರಹಿಸಿ ಅದನ್ನು ಖಾತೆಗೆ ಜಮಾ ಮಾಡಿಲ್ಲ ಎಂಬ ಮೌಖಿಕ ದೂರುಗಳು ಬಂದಿವೆ. ಈ ಹಿನ್ನೆಲೆ ಎಲ್ಲಾ ಗ್ರಾಹಕರು ಮತ್ತು ಸಾರ್ವಜನಿಕರು ವಿದ್ಯುತ್ ಬಿಲ್ ಪಾವತಿಯನ್ನು ಕೇವಲ ಅಧಿಕೃತ ಮಾರ್ಗಗಳ ಮೂಲಕವೇ ಮಾಡಬೇಕು ಎಂದು ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಬರಗಾಳೆ ಮನವಿ ಮಾಡಿದ್ದಾರೆ.
ವಿದ್ಯುತ್ ಬಿಲ್ ಪಾವತಿಗಾಗಿ HESCOM ಅಧಿಕೃತ ಬಿಲ್ ಕೌಂಟರ್ಗಳು, ಬಿಬಿಪಿಎಸ್ (BBPS) ಹಾಗೂ ಆನ್ಲೈನ್ / ಇ-ಪಾವತಿ ಮಾತು GVP ಸೌಲಭ್ಯಗಳನ್ನು ಮಾತ್ರ ಬಳಸಬೇಕು. ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ನಗದು ಹಣ ನೀಡಬಾರದು; ಇಲ್ಲವಾದಲ್ಲಿ ಆರ್ಥಿಕ ಮೋಸ ಹಾಗೂ ಅನಾನುಕೂಲತೆಗಳನ್ನು ಎದುರಿಸಬೇಕಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಗ್ರಾಹಕರು ಎಚ್ಚರಿಕೆಯಿಂದಿದ್ದು ಸುರಕ್ಷಿತ ವ್ಯವಹಾರಗಳನ್ನು ನಡೆಸಬೇಕು ಎಂದು ಖಾನಾಪುರ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪ್ರವೀಣ ಬರಗಾಳೆ ಅವರು ಮನವಿ ಮಾಡಿದ್ದಾರೆ.


