खानापूर काँग्रेसकडून पंडित ओगले यांच्यावर खोट्या तक्रारी ; कारवाई करू नये – महानगरपालिका सभागृह नेते संतोष पेडणेकर यांची मागणी.
बेळगाव : महानगरपालिका बेळगावचे सत्ताधारी सभागृह नेते संतोष पेडणेकर यांनी खानापूर तालुका ब्लॉक काँग्रेस समितीने श्री. पंडित ओगले यांच्याविरोधात केलेली तक्रार ही राजकीय द्वेषातून प्रेरित असून ती खोटी असल्याचा आरोप केला आहे. याबाबत आज बुधवारी त्यांनी जिल्हा पोलीस प्रमुखांना निवेदन सादर केले. यावेळी माजी महापौर व विद्यमान नगरसेवक मंगेश पवार, माजी उपमहापौर व विद्यमान नगरसेवक अनंत चव्हाण, नगरसेवक राजू भातकांडे, माजी गटनेते व विद्यमान नगरसेवक गिरीश धोंगडी, भाजपा महाशक्ती प्रमुख जितेंद्र देवन उपस्थित होते.

निवेदनात नमूद करण्यात आले आहे की, खानापूर तालुका ब्लॉक काँग्रेस समितीने श्री. पंडित ओगले यांच्यावर “रौडी शीटर” म्हणून कारवाई करण्याची मागणी करत गृहमंत्री, तहसीलदार तसेच जिल्हा पोलीस अधीक्षक, बेळगाव यांना पत्र दिले आहे. तसेच त्यांच्यावर पोलीस गुन्हा दाखल करण्याची मागणीही करण्यात आली आहे.
मात्र, श्री. पंडित ओगले हे भारतीय जनता पक्षाच्या युवा मोर्चाचे जिल्हा उपाध्यक्ष असून सामाजिक कार्यकर्ते आहेत. ते पोलीस शांतता समितीचे सदस्य म्हणूनही कार्यरत आहेत. त्यांनी विविध समाजोपयोगी उपक्रम राबवून सर्वसामान्य नागरिकांची कामे मार्गी लावली असल्याचे पेडणेकर यांनी म्हटले आहे.
राजकीय हेतूने त्यांच्याविरोधात कटकारस्थान रचले जात असल्याचा आरोप करत, कोणत्याही दबावाला बळी न पडता त्यांच्या विरोधात खोटा गुन्हा दाखल करू नये किंवा ‘रौडी शीटर’सारखी कठोर कारवाई करू नये, अशी मागणी बेळगाव महानगरपालिका सत्ताधारी सभागृह नेते संतोष पेडणेकर यांनी प्रशासनाकडे केली आहे.
ಖಾನಾಪುರ ಕಾಂಗ್ರೆಸ ವತಿಯಿಂದ ಪಂಡಿತ ಓಗಲೆ ವಿರುದ್ಧ ಸುಳ್ಳು ಆರೋಪ; ಯಾವುದೇ ಕ್ರಮ ಕೈಗೊಳ್ಳಬಾರದು – ಮಹಾನಗರ ಪಾಲಿಕೆ ಸಭಾನಾಯಕ ಸಂತೋಷ ಪೇಡಣೆಕರ ಅವರಿಂದ ಮನವಿ.
ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಸತ್ತಾಧಾರಿ ಸಭಾನಾಯಕ ಸಂತೋಷ ಪೇಡಣೆಕರ ಅವರು ಖಾನಾಪುರ ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿಯು ವತಿಯಿಂದ ಶ್ರೀ ಪಂಡಿತ ಓಗಲೆ ಅವರ ವಿರುದ್ಧ ನೀಡಿರುವ ದೂರು ರಾಜಕೀಯ ದ್ವೇಷದಿಂದ ಪ್ರೇರಿತವಾಗಿದ್ದು, ಅದು ಸಂಪೂರ್ಣ ಸುಳ್ಳು ಷಡ್ಯಂತ್ರ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಅವರು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮಹಾಪೌರ ಹಾಗೂ ಪ್ರಸ್ತುತ ನಗರಸಭಾ ಸದಸ್ಯ ಮಂಗೇಶ್ ಪವಾರ್, ಮಾಜಿ ಉಪಮಹಾಪೌರ ಹಾಗೂ ಪ್ರಸ್ತುತ ನಗರಸಭಾ ಸದಸ್ಯ ಅನಂತ ಚವ್ಹಾಣ, ನಗರಸಭಾ ಸದಸ್ಯ ರಾಜು ಭಾತಕಾಂಡೆ, ಮಾಜಿ ನಾಯಕ ಹಾಗೂ ಪ್ರಸ್ತುತ ನಗರಸಭಾ ಸದಸ್ಯ ಗಿರೀಶ ಧೋಂಗಡಿ, ಬಿಜೆಪಿ ಮಹಾಶಕ್ತಿ ಪ್ರಮುಖ ಜಿತೇಂದ್ರ ದೇವನ್ ಉಪಸ್ಥಿತರಿದ್ದರು.
ಮನವಿಯಲ್ಲಿ ಖಾನಾಪುರ ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಸಮಿತಿಯು ವತಿಯಿಂದ ಸಮಾಜ ಸೇವಕ ಶ್ರೀ ಪಂಡಿತ ಓಗಲೆ ಅವರನ್ನು “ರೌಡಿ ಶೀಟರ್” ಎಂದು ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರು, ತಹಸೀಲ್ದಾರ್ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಬೆಳಗಾವಿ ಅವರಿಗೆ ಪತ್ರ ನೀಡಿರುವುದಾಗಿ ಉಲ್ಲೇಖಿಸಲಾಗಿದೆ. ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸುವಂತೆ ಸಹ ಮನವಿ ಮಾಡಲಾಗಿದೆ.
ಆದರೆ, ಸದಾ ಸಮಾಜ ಸೇವೆಯಲ್ಲಿ ತೊಡಗಿರುವ ಶ್ರೀ ಪಂಡಿತ ಓಗಲೆ ಅವರು ಭಾರತೀಯ ಜನತಾ ಪಕ್ಷದ ಯುವ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷರಾಗಿದ್ದು, ಸಾಮಾಜಿಕ ಕಾರ್ಯಕರ್ತರಾಗಿದ್ದಾರೆ. ಅವರು ಪೊಲೀಸ್ ಶಾಂತಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರ ಕೆಲಸಗಳನ್ನು ನೆರವೇರಿಸಿದ್ದಾರೆ ಎಂದು ಪೇಡಣೆಕರ ತಿಳಿಸಿದ್ದಾರೆ.
ರಾಜಕೀಯ ಉದ್ದೇಶದಿಂದ ಅವರ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿ, ಯಾವುದೇ ಒತ್ತಡಕ್ಕೆ ಒಳಗಾಗದೆ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಬಾರದು ಅಥವಾ ‘ರೌಡಿ ಶೀಟರ್’ಂತಹ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಸತ್ತಾಧಾರಿ ಸಭಾನಾಯಕ ಸಂತೋಷ ಪೇಡಣೆಕರ ಅವರು ಆಡಳಿತಕ್ಕೆ ಮನವಿ ಮಾಡಿದ್ದಾರೆ.

