अपघाताचा बनाव करून गर्भवती पत्नीचा खून केल्याचा पतीवर आरोप.
कागवाड : प्रतिनिधी
कागवाड तालुक्यातील उगार बुद्रुक गावातील सात महिन्यांची गरोदर असलेल्या चैताली प्रदीप किरणगी (22) हिचा संशयास्पद मृत्यू झाला असून तिचा पती प्रदीप यानेच तिचा खून केला असल्याचा आरोप चैतालीचे वडील अण्णासाहेब माळी यांनी केला आहे.

याबाबत समजलेली माहिती अशी की, प्रदीप आणि चैताली एकाच गावाचे रहिवासी होते. अनेक वर्षांच्या प्रेमसंबंधानंतर त्यांचे लग्न झाले होते. चैताली सात महिन्यांची गरोदर होती. पती प्रदीप तिला वारंवार त्रास देत होता आणि जीवे मारण्याची धमकीही देत होता, असे तिने माहेरच्यांना सांगितले होते, असे तिच्या कुटुंबीयांनी पोलिसांना सांगितले. रविवारी (7 सप्टेंबर) रोजी पती प्रदीप चैतालीला दुचाकीवरून रुग्णालयात घेऊन जात होता. शिरगुप्पी गावाजवळ त्याने गाडी थांबवली. त्याचवेळी पाठीमागून आलेल्या एका कारने चैतालीला धडक दिली. या धडकेत ती रक्ताच्या थारोळ्यात पडली. पतीने तिला त्याच कारमधून मिरजेतील एका खासगी रुग्णालयात नेले. उपचारादरम्यान तिचा मृत्यू झाला. हा अपघात नसून, चैतालीचा खून करण्यात आला असून, पुरावा नष्ट करण्यासाठी अपघाताचा बनाव रचला गेला असल्याचा संशय तिच्या वडिलांनी व्यक्त केला आहे. त्यांनी सोमवारी (8 सप्टेंबर) रोजी कागवाड पोलीस ठाण्यात तक्रार दाखल केली.
या तक्रारीवरून पोलिसांनी पती प्रदीप, कार चालक आणि कारला ताब्यात घेऊन चौकशी सुरू केली आहे. पोलीस उपअधीक्षक रामनगौडा बसरगी, डीवायएसपी प्रशांत मुन्नोळी, सीपीआय संतोष हळ्ळूर आणि पीएसआय राघवेंद्र खोत यांनी घटनास्थळी भेट देऊन तपास सुरू केला आहे.
ಗರ್ಭಿಣಿ ಪತ್ನಿಯನ್ನು ಅಪಘಾತದ ನಾಟಕ ಮಾಡಿ ಕೊಂದ ಆರೋಪ ; ಪತಿಯ ವಿರುದ್ಧ ಪ್ರಕರಣ
ಕಾಗವಾಡ : ಪ್ರತಿನಿಧಿ
ಕಾಗವಾಡ ತಾಲ್ಲೂಕಿನ ಉಗಾರ ಬುದ್ರುಕ ಗ್ರಾಮದ ಏಳು ತಿಂಗಳ ಗರ್ಭಿಣಿಯಾಗಿದ್ದ ಚೈತಾಳಿ ಪ್ರದೀಪ ಕಿರಣಗಿ (22) ಅವರ ಸಂಶಯಾಸ್ಪದ ಸಾವು ಸಂಭವಿಸಿದೆ. ಈಕೆಯನ್ನು ಪತಿಯಾದ ಪ್ರದೀಪನೇ ಕೊಂದಿದ್ದಾನೆ ಎಂಬ ಆರೋಪವನ್ನು ಚೈತಾಳಿಯ ತಂದೆ ಅಣ್ಣಾಸಾಹೇಬ ಮಾಳಿ ಅವರು ಆರೋಪ ಮಾಡಿದ್ದಾರೆ.
ಮಾಹಿತಿ ಪ್ರಕಾರ, ಪ್ರದೀಪ ಮತ್ತು ಚೈತಾಳಿ ಒಂದೇ ಗ್ರಾಮದವರು. ಹಲವು ವರ್ಷಗಳಿಂದ ಪ್ರೇಮ ಸಂಬಂಧದ ಬಳಿಕ ಇವರ ವಿವಾಹವಾಗಿತ್ತು. ಚೈತಾಳಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಪತಿ ಪ್ರದೀಪ ಆಕೆಗೆ ಆಗಾಗ ತೊಂದರೆ ನೀಡುತ್ತಿದ್ದನು ಹಾಗೂ “ಜೀವ ಬೆದರಿಕೆ ಹಾಕಿದ್ದಾರೆ” ಎಂದು ಆಕೆ ತಮ್ಮ ತಾಯಿ ಬಳಿ ಹಂಚಿಕೊಂಡಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಭಾನುವಾರ (7 ಸೆಪ್ಟೆಂಬರ್) ಪ್ರದೀಪ ಚೈತಾಳಿಯನ್ನು ಬೈಕ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಶಿರಗುಪ್ಪಿ ಗ್ರಾಮದ ಬಳಿ ಬೈಕ್ ನಿಲ್ಲಿಸಿದನು. ಆ ವೇಳೆಯಲ್ಲಿ ಹಿಂಬದಿಯಿಂದ ಬಂದ ಕಾರೊಂದು ಚೈತಾಳಿಗೆ ಗುದ್ದಿತು. ತಕ್ಷಣ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಪ್ರದೀಪನೇ ಆಕೆಯನ್ನು ಅದೇ ಕಾರಿನಲ್ಲಿ ಮಿರಜ್ನ ಖಾಸಗಿ ಆಸ್ಪತ್ರೆಗೈ ಕರೆದೊಯ್ದರೂ, ಚಿಕಿತ್ಸೆ ಸಂದರ್ಭದಲ್ಲಿ ಆಕೆಯ ಮರಣವಾಯಿತು.
ಈ ಘಟನೆ ಅಪಘಾತವಲ್ಲ, ಚೈತಾಳಿಯ ಹತ್ಯೆ ಮಾಡಿ ಅದನ್ನು ಅಪಘಾತದ ರೂಪದಲ್ಲಿ ತೋರಿಸಲು ನಾಟಕವಾಡಲಾಗಿದೆ ಎಂಬ ಅನುಮಾನವನ್ನು ಆಕೆಯ ತಂದೆ ವ್ಯಕ್ತಪಡಿಸಿದ್ದಾರೆ. ಅವರು ಸೋಮವಾರ (8 ಸೆಪ್ಟೆಂಬರ್) ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನ ಆಧಾರದ ಮೇಲೆ ಪೊಲೀಸರು ಪತಿ ಪ್ರದೀಪ, ಕಾರು ಚಾಲಕ ಹಾಗೂ ಕಾರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಪೊಲೀಸ್ ಉಪಾಧೀಕ್ಷಕ ರಾಮನಗೌಡ ಬಸರ್ಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರು ಹಾಗೂ ಪಿಎಸ್ಐ ರಾಘವೇಂದ್ರ ಖೋತ ಅವರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ.

