विविध चोरीच्या गुन्ह्यांतील १० अट्टल चोरट्यांना अटक. खानापूर पोलिसांचा मोठा तपास; अनेक घरफोडी व दरोड्यांची उकल होण्याची शक्यता.
खानापूर : प्रतिनिधी
खानापूर तालुक्यासह परिसरातील विविध चोरी, घरफोडी व दरोड्याच्या गुन्ह्यांत सहभागी असलेल्या दहा अट्टल चोरट्यांना खानापूर पोलिसांनी अटक केली असून, यामधील एका आरोपीचा श्रीराम सेना व हिंदू राष्ट्र सेनेचे नेते रवी कोकितकर यांच्यावर झालेल्या गोळीबार प्रकरणात समावेश असल्याचे समजते. या प्रकरणातील सखोल चौकशीत अनेक धक्कादायक बाबी समोर येत आहेत. आरोपींना सोमवारी रात्री न्यायालयासमोर हजर करण्यात आले असता न्यायालयाने सर्वांना पोलीस कोठडी सुनावली आहे.
खानापूरचे डीवायएसपी विरय्या हिरेमठ तसेच खानापूर पोलीस स्थानकाचे निरीक्षक लालसाब गवंडी यांच्या नेतृत्वाखाली या प्रकरणाचा पुढील तपास सुरू आहे.
गेल्या काही वर्षांपासून खानापूर शहरासह ग्रामीण भागात अनेक घरफोडी, चोरी आणि दरोड्यांच्या घटना घडल्या होत्या. या सर्व गुन्ह्यांचा तपास खानापूर पोलीस गुप्तपणे करत होते. काही दिवसांपूर्वी दाखल झालेल्या दरोड्याच्या फिर्यादीच्या आधारे पोलिसांनी तपासाची गती वाढवत विशेष तीन पथके तयार केली होती.
या पथकांनी बेळगाव, महाराष्ट्र, गोवा यांसह विविध ठिकाणी जाऊन तपास केला. तपासादरम्यान पोलिसांच्या हाती अनेक महत्त्वाचे धागेदोरे लागले असून, अनेक गुन्ह्यांची माहिती समोर आली आहे. या कारवाईत पोलिसांनी संशयितांना ताब्यात घेऊन चौकशी केली असता अनेक घरफोडी आणि दरोड्यांची कबुली मिळाल्याची माहिती समोर आली आहे.
याप्रकरणी रबिऊल रोहूल आमीन गाझी (वय २९) मूळचा बाराहीपूर दक्षिण २४ परगना पश्चिम बंगाल सध्या राहणार दाणे गल्ली शहापूर बेळगाव, अलीहुसेन कबीरुद्दीन मंडल (वय २७) मूळचा माधवपुरा तारकेश्वर हुगळी, पश्चिम बंगाल सध्या राहणार भारतनगर खासबाग बेळगाव, सादीक अब्दुल रेहमान तोरगल (वय ३७) अळवण गल्ली शहापूर बेळगाव, विवेक चंद्रकांत पाटील (वय ३३) महाद्वार रोड, तांगडी गल्ली बेळगाव, प्रशांत महादेव चव्हाण (वय ३७) कपिलेश्वर रोड तांगडी गल्ली बेळगाव, नितीन राजाराम चव्हाण (वय ३६), गायत्रीनगर खासबाग बेळगाव, दिगंबर नागेश पाटील (वय २६) शिवशक्तीनगर अनगोळ बेळगाव, मयुर राजू घाडी (वय २६) बसवाण गल्ली शहापूर यांसह आणखी दोघांना अटक करण्यात आली आहे.
सर्व आरोपींवर खानापूर पोलीस स्थानकात गुन्हा दाखल करण्यात आला आहे.
पोलिसांनी आरोपींकडून दरोड्यात वापरण्यात आलेली पिस्तूल, सोन्याचे दागिने तसेच इतर साहित्य जप्त केले आहे. या संपूर्ण प्रकरणाचा तपास अत्यंत गोपनीय पद्धतीने सुरू असून, चौकशीतून आणखी अनेक गुन्ह्यांची उकल होण्याची शक्यता व्यक्त करण्यात येत आहे.
ವಿವಿಧ ಕಳ್ಳತನ ಪ್ರಕರಣಗಳಲ್ಲಿನ ೧೦ ಖತರ್ನಾಕ್ ಕಳ್ಳರ ಬಂಧನ. ಖಾನಾಪುರ ಪೊಲೀಸರ ಮಹತ್ವದ ತನಿಖೆ; ಅನೇಕ ಮನೆಕಳ್ಳತನ ಹಾಗೂ ದರೋಡೆ ಪ್ರಕರಣಗಳ ಭೇದ ಸಾಧ್ಯತೆ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ವಿವಿಧ ಕಳ್ಳತನ, ಮನೆಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹತ್ತು ಖತರ್ನಾಕ್ ಕಳ್ಳರನ್ನು ಖಾನಾಪುರ ಪೊಲೀಸರು ಬಂಧಿಸಿದ್ದು, ಈ ಪ್ರಕರಣದ ಸವಿಸ್ತಾರ ವಿಚಾರಣೆಯಲ್ಲಿ ಅನೇಕ ಬೆಚ್ಚಿಬೀಳಿಸುವ ಮಾಹಿತಿಗಳು ಹೊರಬರುತ್ತಿವೆ. ಆರೋಪಿಗಳನ್ನು ಸೋಮವಾರ ರಾತ್ರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿ, ನ್ಯಾಯಾಲಯವು ಎಲ್ಲರಿಗೂ ಪೊಲೀಸ್ ಕಸ್ಟಡಿಯನ್ನು ವಿಧಿಸಿದೆ. ಖಾನಾಪುರ ಡಿವೈಎಸ್ಪಿ ವಿರಯ್ಯ ಹಿರೇಮಠ ಹಾಗೂ ಖಾನಾಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಲಾಲಸಾಬ ಗವಂಡಿ ಅವರ ನೇತೃತ್ವದಲ್ಲಿ ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಖಾನಾಪುರ ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅನೇಕ ಮನೆಕಳ್ಳತನ, ಕಳ್ಳತನ ಹಾಗೂ ದರೋಡೆ ಘಟನೆಗಳು ನಡೆದಿದ್ದವು. ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ಖಾನಾಪುರ ಪೊಲೀಸರು ರಹಸ್ಯವಾಗಿ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆ ದಾಖಲಾಗಿದ್ದ ದರೋಡೆ ಪ್ರಕರಣದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ವೇಗಗೊಳಿಸಿ ವಿಶೇಷ ಮೂರು ತಂಡಗಳನ್ನು ರಚಿಸಿದ್ದರು.
ಈ ತಂಡಗಳು ಬೆಳಗಾವಿ, ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿ ತನಿಖೆ ನಡೆಸಿವೆ. ತನಿಖೆಯ ವೇಳೆ ಪೊಲೀಸರಿಗೆ ಅನೇಕ ಪ್ರಮುಖ ಸುಳಿವುಗಳು ಲಭಿಸಿದ್ದು, ಹಲವು ಪ್ರಕರಣಗಳ ಮಾಹಿತಿ ಬಹಿರಂಗವಾಗಿದೆ. ಈ ಕಾರ್ಯಾಚರಣೆಯಲ್ಲಿ ಪೊಲೀಸರು ಸಂಶಯಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅನೇಕ ಮನೆಕಳ್ಳತನ ಹಾಗೂ ದರೋಡೆ ಪ್ರಕರಣಗಳನ್ನು ಒಪ್ಪಿಕೊಂಡಿರುವ ಮಾಹಿತಿ ಬೆಳಕಿಗೆ ಬಂದಿದೆ.
ಈ ಪ್ರಕರಣದಲ್ಲಿ ರಬಿಯುಲ್ ರೋಹೂಲ್ ಅಮೀನ್ ಗಾಜಿ (ವಯಸ್ಸು ೨೯) ಮೂಲ ನಿವಾಸಿ ಬರಾಹಿಪುರ, ದಕ್ಷಿಣ ೨೪ ಪರಗಣಾ, ಪಶ್ಚಿಮ ಬಂಗಾಳ, ಪ್ರಸ್ತುತ ದಾಣೆ ಗಲ್ಲಿ ಶಹಾಪುರ ಬೆಳಗಾವಿ, ಅಲಿಹುಸೇನ್ ಕಬೀರುದ್ದೀನ್ ಮಂಡಲ್ (ವಯಸ್ಸು ೨೭) ಮೂಲ ನಿವಾಸಿ ಮಾಧವಪುರ ತಾರಕೇಶ್ವರ ಹುಗ್ಲಿ, ಪಶ್ಚಿಮ ಬಂಗಾಳ, ಪ್ರಸ್ತುತ ಭಾರತನಗರ ಖಾಸಬಾಗ್ ಬೆಳಗಾವಿ, ಸಾದಿಕ್ ಅಬ್ದುಲ್ ರೆಹಮಾನ್ ತೋರಗಲ್ (ವಯಸ್ಸು ೩೭) ಅಳವಣ ಗಲ್ಲಿ ಶಹಾಪುರ ಬೆಳಗಾವಿ, ವಿವೇಕ ಚಂದ್ರಕಾಂತ ಪಾಟೀಲ್ (ವಯಸ್ಸು ೩೩) ಮಹಾದ್ವಾರ ರಸ್ತೆ, ತಾಂಗಡಿ ಗಲ್ಲಿ ಬೆಳಗಾವಿ, ಪ್ರಶಾಂತ್ ಮಹಾದೇವ ಚವ್ಹಾಣ್ (ವಯಸ್ಸು ೩೭) ಕಪಿಲೇಶ್ವರ ರಸ್ತೆ ತಾಂಗಡಿ ಗಲ್ಲಿ ಬೆಳಗಾವಿ, ನಿತಿನ್ ರಾಜಾರಾಮ ಚವ್ಹಾಣ್ (ವಯಸ್ಸು ೩೬) ಗಾಯತ್ರಿನಗರ ಖಾಸಬಾಗ್ ಬೆಳಗಾವಿ, ದಿಗಂಬರ್ ನಾಗೇಶ್ ಪಾಟೀಲ್ (ವಯಸ್ಸು ೨೬) ಶಿವಶಕ್ತಿನಗರ ಅಂಗೋಳ ಬೆಳಗಾವಿ, ಮಯೂರ್ ರಾಜು ಘಾಡಿ (ವಯಸ್ಸು ೨೬) ಬಸವಾಣ ಗಲ್ಲಿ ಶಹಾಪುರ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಎಲ್ಲ ಆರೋಪಿಗಳ ವಿರುದ್ಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಆರೋಪಿಗಳಿಂದ ದರೋಡೆಗೆ ಬಳಸಲಾಗಿದ್ದ ಪಿಸ್ತೂಲ್, ಚಿನ್ನದ ಆಭರಣಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಪೂರ್ಣ ಪ್ರಕರಣದ ತನಿಖೆ ಅತ್ಯಂತ ರಹಸ್ಯ ರೀತಿಯಲ್ಲಿ ನಡೆಯುತ್ತಿದ್ದು, ವಿಚಾರಣೆಯಿಂದ ಇನ್ನೂ ಅನೇಕ ಪ್ರಕರಣಗಳ ಭೇದವಾಗುವ ಸಾಧ್ಯತೆ ವ್ಯಕ್ತವಾಗಿದೆ.

