
हुक्केरी बाजार पेठेत भर दिवसा युवकाची भयानक हत्या.
हुक्केरी : सकाळच्या वेळी लोकांची वर्दळ सुरू असतानाच 25 वर्षीय युवकाची धारदार शस्त्रांनी वार करून निर्घृण हत्या करण्यात आल्याची धक्कादायक घटना हुक्केरी शहरात सोमवारी घडली आहे.
मल्लिक हुसेन किल्लेदार (वय 25) हा मृत युवक असून, हुक्केरी पेठेत मोटारसायकलवरून जात असताना दोन संशयितांनी त्याच्यावर प्राणघातक हल्ला केला. ही हत्या मालमत्तेच्या वादातून झाल्याचे सांगण्यात येत आहे. हत्येचे दृश्य स्थानिक सीसीटीव्ही कॅमेऱ्यात कैद झाले आहे.
भर-दिवसा ही घटना घडल्याने नागरिकांमध्ये भीतीचे वातावरण निर्माण झाले आहे. हुक्केरी पोलीस ठाण्यात गुन्हा दाखल करण्यात आला असून, आरोपी श्यानूर जमखंडी (वय 24) आणि बशीर किल्लेदार (38) या दोघांना पोलिसांनी अटक करून चौकशी सुरू केली आहे.
ಹುಕ್ಕೇರಿಯ ಬಜಾರ ಪೇಟೆಯಲ್ಲಿ ಹಾಡಹಗಲೇ ಯುವಕನ ಕೊಲೆ
ಹುಕ್ಕೇರಿ : ಬೆಳಗಿನ ವೇಳೆ ಜನ ದಟ್ಟಣೆ ವೇಳೆಯಲ್ಲೇ 25 ವರ್ಷದ ಯುವಕನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ಸೋಮವಾರ ನಡೆದಿದೆ.
ಮಲ್ಲಿಕ ಹುಸೇನ ಕಿಲ್ಲೇದಾರ ( 25 )ಕೊಲೆಯಾದ ದುರ್ದೈವಿ. ಹುಕ್ಕೇರಿಯ ಬಜಾರ ಪೇಟೆಯಲ್ಲಿ ಯುವಕ ಮಲ್ಲಿಕ್ ಬೈಕ್ ಮೇಲೆ ತೆರಳುವ ವೇಳೆ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
ಕೊಲೆಗೆ ಆಸ್ತಿ ವಿವಾದ ಕಾರಣ ಎಂದು ಹೇಳಲಾಗುತ್ತಿದೆ. ಕೊಲೆಯ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಗಲಿನ ವೇಳೆ ಈ ಘಟನೆ ನಡೆದಿದ್ದು ಜನರಲ್ಲಿ ಭಯ ಹೆಚ್ಚಿಸಿದೆ.
ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಕೊಲೆ ಪ್ರಕರಣದಲ್ಲಿ ಆರೋಪಿತರಾದ ಶ್ಯಾನೂರ ಜಮಖಂಡಿ(24) ಮತ್ತು ಬಶೀರ ಕಿಲ್ಲೇದಾರ(38) ಇಬ್ಬರನ್ನು ಪೋಲಿಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
