
येळ्ळूर ही संघर्षाची भूमी आहे ; शरद पवार, माजी केंद्रीय मंत्री.
बेळगाव; “‘येळ्ळूर’ हे फक्त एक गाव नाही, तर ते संघर्षाची भूमी आहे, जिथे शैक्षणिक क्रांतीची पाने लिहिली गेली,” असे प्रतिपादन माजी केंद्रीय मंत्री शरद पवार यांनी केले. येळ्ळूर येथील सरकारी मराठी मॉडेल स्कूलच्या शतकोत्तर सुवर्णमहोत्सवी समारंभाच्या उद्घाटनप्रसंगी ते बोलत होते.
पुढे बोलताना ते म्हणाले, “स्वातंत्र्य लढाईच्या काळात या गावाला विशेष महत्त्व होते. येथील लोक अन्यायाविरुद्ध धैर्याने उभे राहिले. या शाळेने संघर्षाची भावना आपल्या मुलांना शिक्षणाच्या स्वरूपात दिली आहे,” असे ते म्हणाले. येळ्ळूरमधील शैक्षणिक विचारवंत आणि ग्रामस्थांनी शिक्षणाद्वारे समाज जागृत करण्याचा प्रयत्न केला. या शाळेतून अनेक मान्यवर, अधिकारी आणि सामाजिक कार्यकर्ते पदवीधर झाले आहेत. त्यामुळे या संस्थेचा सन्मान वाढेल असे ते म्हणाले.
“जर साक्षरता संस्कृतीचा विकास झाला नाही तर ती समाजाच्या प्रगतीला अडथळा ठरेल. ग्रामीण भागातील दर्जेदार शिक्षण मिळाले पाहिजे. शाळांनी मूल्यांवर आधारित शिक्षण दिले पाहिजे. म्हणूनच, शिक्षणातील नवीन आव्हानांबद्दल बोलताना त्यांनी जुन्या विद्यार्थ्यांना आणि ग्रामस्थांना शाळेच्या विकासासाठी हातभार लावण्याचे आवाहन केले.”
सध्याच्या पिढीला केवळ धडेच नाही तर नैतिकता, शिस्त आणि देशभक्तीची देखील गरज आहे. त्यांनी सुचवले की शाळांचे ध्येय अभ्यासक्रमेतर उपक्रमांद्वारे मुलांच्या समग्र व्यक्तिमत्त्वात विकसित करणारे असावे. यावेळी बाल कल्याण विकास मंत्री लक्ष्मी हेब्बाळकर यांचे शाळेच्या प्रगती बद्दल भाषण झाले.
यावेळी शिवाजी विद्यापीठाचे निवृत्त कुलगुरू डॉ. माणिकराव साळुंके, डॉ. प्रभाकर कोरे, विधानपरिषद सदस्य चन्नराज हट्टीहोळी, आमदार विठ्ठलराव हलगेकर, माजी विधान परिषद सदस्य महांतेश कवठगीमठ, माजी आमदार अरविंद पाटील, रावजी पाटील, एन.डी.गोरे, सतीश पाटील आदी उपस्थित होते.

ಯಳ್ಳೂರು ಹೋರಾಟದ ಭೂಮಿ ; ಶರದ್ ಪವಾರ್, ಮಾಜಿ ಕೇಂದ್ರ ಸಚಿವ
ಬೆಳಗಾವಿ ; “ಯಳ್ಳೂರು’ ಕೇವಲ ಒಂದು ಗ್ರಾಮವಲ್ಲ, ಇದು ಹೋರಾಟದ ಭೂಮಿ, ಶೈಕ್ಷಣಿಕ ಕ್ರಾಂತಿಯ ಪುಟಗಳನ್ನು ಬರೆದ ಸ್ಥಳ ಎಂದು ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಹೇಳಿದರು. ಯಳ್ಳೂರಿನ ಸರ್ಕಾರಿ ಮರಾಠಿ ಮಾದರಿ ಶಾಲೆಯ ಶತಕೋತ್ತರ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಈ ಗ್ರಾಮಕ್ಕೆ ವಿಶೇಷ ಮಹತ್ವವಿತ್ತು. ಇಲ್ಲಿ ಜನರು ಅನ್ಯಾಯದ ವಿರುದ್ಧ ಧೈರ್ಯದಿಂದ ಎದ್ದು ನಿಂತರು. ಈ ಹೋರಾಟದ ಆತ್ಮವನ್ನೇ ಶಾಲೆಯು ತಮ್ಮ ಮಕ್ಕಳಿಗೆ ಶಿಕ್ಷಣ ರೂಪದಲ್ಲಿ ನೀಡಿತು ಎಂದರು.
ಯಳ್ಳೂರಿನ ಶೈಕ್ಷಣಿಕ ಚಿಂತಕರು, ಗ್ರಾಮಸ್ಥರು ಶಿಕ್ಷಣದ ಮೂಲಕ ಸಮಾಜವನ್ನು ಎಚ್ಚರಿಸಲು ಪ್ರಯತ್ನಿಸಿದರು. ಈ ಶಾಲೆಯಿಂದ ಅನೆಕ ಗಣ್ಯರು, ಅಧಿಕಾರಿಗಳು, ಸಮಾಜ ಸೇವಕರು ಬೆಳೆದಿದ್ದಾರೆ. ಇದು ಈ ಸಂಸ್ಥೆಯ ಗೌರವವನ್ನು ಹೆಚ್ಚಿಸುತ್ತದೆ ಎಂದರು.
“ಅಕ್ಷರ ಸಂಸ್ಕೃತಿಯ ಬೆಳವಣಿಗೆ ಇಲ್ಲದಿದ್ದರೆ ಸಮಾಜದ ಪ್ರಗತಿಗೆ ಅಡ್ಡಿಯಾಗುತ್ತದೆ. ಗ್ರಾಮೀಣ ಪ್ರದೇಶಗಳ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ಶಾಲೆಗಳು ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕು. ಆದ್ದರಿಂದ ಹಳೆಯ ವಿದ್ಯಾಥಿರ್ಗಳು ಮತ್ತು ಗ್ರಾಮಸ್ಥರು ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು, ಶಿಕ್ಷಣದ ಹೊಸ ಸವಾಲುಗಳ ಬಗ್ಗೆ ಮಾತನಾಡಿದ
ಈಗಿನ ಪೀಳಿಗೆಗೆ ಕೇವಲ ಪಾಠದ ಜೊತೆಗೆ ನೈತಿಕತೆ, ಶಿಸ್ತು, ರಾಷ್ಟ್ರಪ್ರೇಮವೂ ಬೇಕಾಗಿದೆ. ಪತ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳನ್ನು ಸಮಗ್ರ ವ್ಯಕ್ತಿತ್ವಗಳಾಗಿ ಬೆಳೆಸುವುದು ಶಾಲೆಗಳ ಗುರಿಯಾಗಬೇಕು ಎಂದು ಸಲಹೆ ನೀಡಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು. ಶಿವಾಜಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಮಾಣಿಕರಾವ್ ಸಾಳುಂಕೆ, ಡಾ. ಪ್ರಭಾಕರ್ ಕೋರೆ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ವಿಠಲರಾವ್ ಹಲಗೇಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಅರವಿಂದ ಪಾಟೀಲ, ರಾವಜಿ ಪಾಟೀಲ, ಎನ್.ಡಿ.ಗೋರೆ, ಸತೀಶ್ ಪಾಟೀಲ ಉಪಸ್ಥಿತರಿದ್ದರು
