राज्यस्तरीय कुस्ती स्पर्धेत खानापूरच्या श्रवण पाटीलची दमदार कामगिरी; कांस्यपदकाला गवसणी!
खानापूर : प्रतिनिधी
खानापूर तालुक्यातील गुंडपी या छोट्याशा गावातील उदयोन्मुख कुस्तीपटू श्रवण मऱ्याप्पा पाटील याने राज्यस्तरीय कुस्ती स्पर्धेत उल्लेखनीय कामगिरी करत कांस्यपदक पटकाविले आहे. त्याच्या या यशामुळे गुंडपी गावासह संपूर्ण खानापूर तालुक्याच्या शिरपेचात मानाचा तुरा रोवला गेला आहे.
कर्नाटक सरकारच्या राज्य पदवीपूर्व शिक्षण विभागाच्या वतीने आयोजित राज्यस्तरीय कुस्ती स्पर्धा नुकत्याच धारवाड येथील जेएसएस कॉलेज, विद्यागिरी येथे पार पडल्या. या स्पर्धेत चंदरगी येथील एस.पी.डी.सी.एल. महाविद्यालयाचा विद्यार्थी असलेल्या श्रवण पाटील याने 82 किलो वजन गटातील ग्रीको-रोमन कुस्ती प्रकारात तृतीय क्रमांक मिळवत कांस्यपदकावर आपले नाव कोरले.
श्रवणच्या या यशामागे महाविद्यालयाचे प्राचार्य सतीश पाटील तसेच कुस्ती प्रशिक्षक मंजुनाथ टी. आणि रवी केंपणावर यांचे मोलाचे मार्गदर्शन लाभले. त्याचबरोबर त्याचे वडील, खानापूर येथील प्रसिद्ध टाइल्स व्यापारी तथा श्रवण ट्रेडर्सचे मालक मऱ्याप्पा पाटील यांचेही त्याला सातत्याने प्रोत्साहन मिळत आहे.
अत्यंत मेहनत, जिद्द आणि चिकाटीच्या जोरावर श्रवणने मिळविलेल्या या यशाबद्दल त्याचे सर्वत्र अभिनंदन होत आहे. विविध स्तरांतून त्याच्यावर कौतुकाचा वर्षाव केला जात असून, भविष्यात त्याने कुस्ती क्षेत्रात आणखी उज्ज्वल कामगिरी करून राज्य आणि राष्ट्रीय स्तरावर खानापूर तालुक्याचे नाव उंचवावे, अशा शुभेच्छा व्यक्त होत आहेत.
ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಖಾನಾಪುರದ ಶ್ರವಣ ಪಾಟೀಲನ ಭರ್ಜರಿ ಸಾಧನೆ; ಕಂಚಿನ ಪದಕಕ್ಕೆ ಮುತ್ತಿಕ್ಕಿದ ಯುವ ಮಲ್ಲ!
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ಗುಂಡಪಿ ಎಂಬ ಪುಟ್ಟ ಗ್ರಾಮದ ಉದಯೋನ್ಮುಖ ಕುಸ್ತಿಪಟು ಶ್ರವಣ ಮರಿಯಪ್ಪ ಪಾಟೀಲ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿದ್ದಾನೆ. ಈತನ ಈ ಸಾಧನೆಯಿಂದ ಗುಂಡಪಿ ಗ್ರಾಮ ಸೇರಿದಂತೆ ಇಡೀ ಖಾನಾಪುರ ತಾಲ್ಲೂಕಿನ ಕೀರ್ತಿ ಹೆಚ್ಚಾಗಿದೆ.
ಕರ್ನಾಟಕ ಸರ್ಕಾರದ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಗಳು ಇತ್ತೀಚೆಗೆ ಧಾರವಾಡದ ವಿದ್ಯಾಗಿರಿ ಪ್ರದೇಶದಲ್ಲಿರುವ ಜೆಎಸ್ಎಸ್ ಕಾಲೇಜಿನಲ್ಲಿ ನಡೆದವು. ಈ ಸ್ಪರ್ಧೆಯಲ್ಲಿ ಚಂದರಗಿ ಗ್ರಾಮದ ಎಸ್.ಪಿ.ಡಿ.ಸಿ.ಎಲ್. ಮಹಾವಿದ್ಯಾಲಯದ ವಿದ್ಯಾರ್ಥಿಯಾಗಿರುವ ಶ್ರವಣ ಪಾಟೀಲ 82 ಕೆ.ಜಿ. ತೂಕದ ವಿಭಾಗದ ಗ್ರೀಕೊ-ರೋಮನ್ ಕುಸ್ತಿ ಪ್ರಕಾರದಲ್ಲಿ ತೃತೀಯ ಸ್ಥಾನ ಗಳಿಸುವ ಮೂಲಕ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾನೆ.
ಶ್ರವಣನ ಈ ಸಾಧನೆಯ ಹಿಂದೆ ಮಹಾವಿದ್ಯಾಲಯದ ಪ್ರಾಚಾರ್ಯರಾದ ಸತೀಶ ಪಾಟೀಲ ಹಾಗೂ ಕುಸ್ತಿ ತರಬೇತುದಾರರಾದ ಮಂಜುನಾಥ ಟಿ. ಮತ್ತು ರವಿ ಕೆಂಪಣವರ ಅವರ ಅಮೂಲ್ಯ ಮಾರ್ಗದರ್ಶನ ಹಾಗೂ ಪ್ರೋತ್ಸಾಹವಿದೆ. ಇದರೊಂದಿಗೆ ಖಾನಾಪುರದ ಪ್ರಸಿದ್ಧ ಟೈಲ್ಸ್ ವ್ಯಾಪಾರಿಯಾಗಿರುವ ಹಾಗೂ ಶ್ರವಣ ಟ್ರೇಡರ್ಸ್ ಮಾಲೀಕರಾದ ಆತನ ತಂದೆ ಮರಿಯಪ್ಪ ಪಾಟೀಲ ಅವರ ನಿರಂತರ ಪ್ರೋತ್ಸಾಹವೂ ಶ್ರವಣನ ಸಾಧನೆಗೆ ಬೆನ್ನೆಲುಬಾಗಿದೆ.
ಅಪಾರ ಪರಿಶ್ರಮ, ಛಲ ಮತ್ತು ನಿರಂತರ ಪ್ರಯತ್ನದ ಬಲದಿಂದ ಶ್ರವಣ ಸಾಧಿಸಿರುವ ಈ ಯಶಸ್ಸಿಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾರ್ವಜನಿಕರು ಆತನ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಕುಸ್ತಿ ಕ್ಷೇತ್ರದಲ್ಲಿ ಇನ್ನಷ್ಟು ಉನ್ನತ ಸಾಧನೆ ಮಾಡಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಖಾನಾಪುರ ತಾಲ್ಲೂಕಿನ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂದು ಅನೇಕರು ಶುಭ ಹಾರೈಸಿದ್ದಾರೆ.

