दिल्ली येथे झालेल्या 36 व्या अखिल भारतीय वेटलिफ्टिंग स्पर्धेत पवन कदम याने ब्रॉंझ पदक पटकाविले.
खानापूर : दिल्ली येथे नुकत्याच पार पडलेल्या 36 व्या वीद्या भारती श्रीकृष्ण संस्था आयोजित अखिल भारतीय वेटलिफ्टिंग चॅम्पियनशिप स्पर्धेमध्ये खानापूर येथील व्यायाम मंदिर जिमचा खेळाडू व स्वामी विवेकानंद शाळेचा विद्यार्थी पवन यल्लाप्पा कदम याने उत्कृष्ट कामगिरी करत ब्रॉंझ पदक पटकाविले आहे.
या उल्लेखनीय यशामुळे पवन कदम याचे सर्वत्र कौतुक होत आहे. पवन याला या यशामागे खानापूर व्यायाम मंदिरचे प्रशिक्षक राहुल यल्लाप्पा सावंत यांचे मोलाचे मार्गदर्शन आणि प्रशिक्षण लाभले आहे.

पवन कदम याने 17 वर्षाखालील 79 किलो वजनी गटात स्पर्धेत भाग घेतला होता. कठोर परिश्रम, शिस्त आणि प्रशिक्षक राहुल सावंत यांच्या मार्गदर्शनाच्या जोरावर त्याने दिल्ली येथे झालेल्या या राष्ट्रीय स्तरावरील स्पर्धेत तिसरे स्थान मिळवत ब्रॉंझ पदक जिंकले.
या कामगिरीमुळे पवन कदम याने व्यायाम मंदिर, खानापूर तसेच स्वामी विवेकानंद शाळेचे नाव उज्ज्वल केले असून, खानापूरकरांसाठी अभिमानाचा क्षण निर्माण केला आहे.
ನವದೆಹಲಿಯಲ್ಲಿ ನಡೆದ 36ನೇ ಅಖಿಲ ಭಾರತೀಯ ವೇಟ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪವನ್ ಕದಮ್ಗೆ ಕಂಚಿನ ಪದಕ.
ಖಾನಾಪುರ : ನವದೆಹಲಿಯಲ್ಲಿ ನಡೆದ 36ನೇ ಅಖಿಲ ಭಾರತೀಯ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಖಾನಾಪುರದ ವ್ಯಾಯಾಮ ಮಂದಿರ ಜಿಮ್ನ ಕಿಲಾಡಿ ಮತ್ತು ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿ ಪವನ್ ಯಲ್ಲಪ್ಪ ಕದಮ್ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕವನ್ನು ಗಳಿಸಿದ್ದಾರೆ.
ಈ ಗಮನಾರ್ಹ ಸಾಧನೆಯ ಹಿನ್ನೆಲೆ ಪವನ್ ಕದಮ್ ಅವರಿಗೆ ಎಲ್ಲೆಡೆ ಅಭಿನಂದನೆಗಳ ಮಳೆ ಬೀಳುತ್ತಿದೆ. ಪವನ್ ಅವರ ಈ ಯಶಸ್ಸಿನ ಹಿಂದೆ ಖಾನಾಪುರ ವ್ಯಾಯಾಮ ಮಂದಿರದ ತರಬೇತುದಾರ ರಾಹುಲ್ ಯಲ್ಲಪ್ಪ ಸಾವಂತ ಅವರ ಅಮೂಲ್ಯ ಮಾರ್ಗದರ್ಶನ ಮತ್ತು ತರಬೇತಿ ಇದೆ.
ಪವನ್ ಕದಮ್ ಅವರು 17 ವರ್ಷದೊಳಗಿನ 79 ಕೆ.ಜಿ. ತೂಕದ ವಿಭಾಗದಲ್ಲಿ ಸ್ಪರ್ಧೆಗಿಳಿದಿದ್ದರು. ಪರಿಶ್ರಮ, ಶಿಸ್ತು ಮತ್ತು ತರಬೇತುದಾರ ರಾಹುಲ್ ಸಾವಂತ ಅವರ ಮಾರ್ಗದರ್ಶನದ ಬಲದಿಂದ ಅವರು ದೆಹಲಿಯಲ್ಲಿ ನಡೆದ ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನು ಗೆದ್ದಿದ್ದಾರೆ.
ಈ ಸಾಧನೆಯಿಂದ ಪವನ್ ಕದಮ್ ಅವರು ವ್ಯಾಯಾಮ ಮಂದಿರ, ಖಾನಾಪುರ ಹಾಗು ಸ್ವಾಮಿ ವಿವೇಕಾನಂದ ಶಾಲೆಯ ಹೆಸರನ್ನು ಉಜ್ವಲಗೊಳಿಸಿದ್ದಾರೆ ಹಾಗೂ ಖಾನಾಪುರದ ಜನತೆಗೆ ಹೆಮ್ಮೆಯ ಕ್ಷಣವನ್ನು ನೀಡಿದ್ದಾರೆ. ಅವರಿಗೆ ಅಭಿನಂದನೆಗಳು.

