के.एल.ई. एम.एस. होसमनी कनिष्ठ महाविद्यालयात प्रथम पीयूसी विद्यार्थ्यांचे स्वागत व गुणवंतांचा सत्कार सोहळा उत्साहात.
खानापूर : के.एल.ई. संस्थेच्या एम.एस. होसमनी कनिष्ठ महाविद्यालयात शनिवार, दि. 11 जुलै 2026 रोजी प्रथम पीयूसी विद्यार्थ्यांचा स्वागत समारंभ, गुणवंत विद्यार्थ्यांचा सत्कार तसेच सांस्कृतिक व क्रीडा उपक्रमांच्या उद्घाटनाचा कार्यक्रम मोठ्या उत्साहात संपन्न झाला.

महाविद्यालयाचे प्राचार्य विजय एम. कलमठ यांनी उपस्थित मान्यवरांचे स्वागत करून प्रास्ताविक केले. त्यांनी मागील वर्षी द्वितीय पीयूसी परीक्षेत महाविद्यालयाने उत्कृष्ट निकालाची परंपरा कायम राखल्याचे सांगितले. विद्यार्थ्यांच्या सर्वांगीण विकासासाठी के.एल.ई. संस्थेने विविध शैक्षणिक व आधुनिक सुविधा उपलब्ध करून दिल्या असून, विद्यार्थ्यांनी त्यांचा योग्य लाभ घेऊन उज्ज्वल यश संपादन करावे, असे आवाहन त्यांनी केले.
कार्यक्रमाचे प्रमुख पाहुणे व उद्घाटक आनंद भिंगे, ग्रामपंचायत विकास अधिकारी (आमटे) यांनी विद्यार्थ्यांना मार्गदर्शन करताना जीवनात यशस्वी होण्यासाठी शिस्त, कठोर परिश्रम आणि चांगल्या सवयी अत्यंत आवश्यक असल्याचे सांगितले. चांगल्या सवयींमुळे व्यक्तिमत्त्वाचा सर्वांगीण विकास होतो, असे त्यांनी नमूद केले.
स्थानिक व्यवस्थापन समितीचे कार्याध्यक्ष आर. डी. हंजी यांनी विद्यार्थ्यांनी शिक्षणावर पूर्ण लक्ष केंद्रित करून उज्ज्वल भवितव्य घडवावे, असे आवाहन केले.
व्यवस्थापन समितीचे सदस्य बी. व्ही. होंडदकट्टी यांनी विद्यार्थ्यांना मार्गदर्शन करताना अभ्यासात दृढनिश्चय, समर्पण आणि निष्ठा या तीन गुणांच्या बळावर प्रथम व द्वितीय पीयूसीमध्ये उत्कृष्ट यश मिळवता येते, असे सांगितले.
कार्यक्रमाचे प्रभावी सूत्रसंचालन द्वितीय पीयूसीच्या विद्यार्थिनी साक्षी कामत आणि अंजली मिराशी यांनी केले. यावेळी शैक्षणिक, सांस्कृतिक व क्रीडा क्षेत्रात उल्लेखनीय कामगिरी करणाऱ्या विद्यार्थ्यांचा सत्कार करण्यात आला.
कार्यक्रमाला स्थानिक व्यवस्थापन समितीचे सदस्य सी. एस. कोडोळी, जी. बी. होसमनी, बीसीए महाविद्यालयाचे प्राचार्य आनंद तावांशी, विजय पुजार, महेश कल्याणी, सर्व प्राध्यापक, पालक व विद्यार्थी मोठ्या संख्येने उपस्थित होते.
कार्यक्रमाच्या शेवटी द्वितीय पीयूसीच्या विद्यार्थिनी भूमिका गोडादाद्री यांनी आभार प्रदर्शन केले.
ಕೆ.ಎಲ್.ಇ. ಹೋಸಮನಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ್ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ
ಖಾನಾಪುರ: ಕೆ.ಎಲ್.ಇ. ಸಂಸ್ಥೆಯ ಎಂ.ಎಸ್. ಹೋಸಮನಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ದಿನಾಂಕ 11.07.2026 ರಂದು ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಕಾಲೇಜಿನ ಪ್ರಾಚಾರ್ಯರಾದ ಶ್ರೀ ವಿಜಯ್ ಎಂ. ಕಲ್ಮಠ ಅವರು ವೇದಿಕೆ ಮೇಲೆ ಇದ್ದ ಎಲ್ಲಾ ಗಣ್ಯ ಮಾನ್ಯರನ್ನು ಸ್ವಾಗತಿಸುತ್ತಾ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವರ್ಷದ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಕಾಲೇಜು ಉತ್ತಮ ಫಲಿತಾಂಶ ಸಾಧಿಸಿರುವುದನ್ನು ನೆನಪಿಸಿದರು. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಕೆ.ಎಲ್.ಇ. ಸಂಸ್ಥೆಯು ಎಲ್ಲಾ ರೀತಿಯ ಸೌಲಭ್ಯಗಳನ್ನು ಕಾಲೇಜಿನಲ್ಲಿ ಒದಗಿಸಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಹಾಗೂ ಉದ್ಘಾಟಕರಾಗಿ ಆಗಮಿಸಿದ್ದ ಅಮಟೆ ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಆನಂದ್ ಬಿಂಗೆ ಅವರು ಮಾತನಾಡಿ, ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಪರಿಶ್ರಮ ಹಾಗೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಒಳ್ಳೆಯ ಹವ್ಯಾಸಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾಗಿದ್ದ ಶ್ರೀ ಆರ್.ಡಿ. ಹಂಜಿ ಅವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವ ಅಗತ್ಯತೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು ಆದ ಶ್ರೀ ಬಿ.ವಿ. ಹೊಂಡದಕಟ್ಟಿ ಅವರು ಮಾತನಾಡಿ, ಓದಿನಲ್ಲಿ ನಿರ್ಧಾರ, ಸಮರ್ಪಣೆ ಮತ್ತು ಭಕ್ತಿ ಬಹಳ ಮುಖ್ಯ. ಈ ಮೂರು ಗುಣಗಳಿಂದ ದ್ವಿತೀಯ ಪಿ.ಯು ಹಾಗೂ ಪ್ರಥಮ ಪಿ.ಯು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಬಹುದು ಎಂದು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮವನ್ನು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಕು. ಸಾಕ್ಷಿ ಕಾಮತ್ ಮತ್ತು ಕು. ಅಂಜಲಿ ಮಿರಾಶಿ ಅವರು ಅತ್ಯಂತ ಚೆನ್ನಾಗಿ ನಿರೂಪಿಸಿದರು.
ಈ ಸಮಾರಂಭದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಾಗೆ ಈ ಸಂದರ್ಭದಲ್ಲಿ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರು ಆದ ಶ್ರೀ ಸಿ ಎಸ್ ಕೋಡೋಳಿ, ಶ್ರೀಮತಿ ಜಿ ಬಿ ಹೊಸಮನಿ, BCA ಪ್ರಿನ್ಸಿಪಾಲ್ ಶ್ರೀ ಆನಂದ ತಾವಾಂಶಿ, ಶ್ರೀ ವಿಜಯ್ ಪೂಜಾರ, ಮಹೇಶ್ ಕಲ್ಯಾಣಿ ಹಾಗೂ ಎಲ್ಲಾ ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೊನೆಯಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಕು. ಭೂಮಿಕಾ ಗೋದಾಡದ್ರಿ ಅವರು ವಂದನಾರ್ಪಣೆಯನ್ನು ಸಲ್ಲಿಸಿದರು.

