विद्यार्थ्यांची गुणवत्ता न सुधारल्यास शाळेला टाळे ठोकण्याचा इशारा.
खानापूर ; निट्टूर (ता. खानापूर, जि. बेळगांव):येथील सरकारी पूर्ण प्राथमिक मराठी शाळेतील शिक्षण व्यवस्थेबाबत वारंवार तक्रारी होऊनही अपेक्षित सुधारणा न झाल्यास शाळेला टाळे ठोकण्यात येईल, असा इशारा शाळा सुधारणा समिती (एसडीएमसी)ने दिला आहे. सोमवार, दि. 15 डिसेंबर रोजी तालुका शिक्षणाधिकारी पी. रामाप्पा यांच्या उपस्थितीत निट्टूर शाळेत झालेल्या बैठकीत हा इशारा देण्यात आला.
एसडीएमसीने मागील दोन वर्षांपासून केलेल्या निरीक्षणात चौथी ते सातवी इयत्तेतील निम्म्याहून अधिक विद्यार्थी शैक्षणिकदृष्ट्या मागास असल्याचे आढळून आले आहे. याबाबत मुख्याध्यापिका सौ. छाया पाटील तसेच सहशिक्षकांना अध्यापन पद्धतीत सुधारणा करून सर्व विद्यार्थ्यांना मुख्य प्रवाहात आणण्याबाबत वारंवार सूचना देण्यात आल्या होत्या. मात्र शिक्षकांकडून वेळेवर शाळेत उपस्थित न राहणे, मनमानी वेळेत येणे-जाणे तसेच शाळेत प्रत्यक्ष न येता हजेरी भरणे असे प्रकार सुरूच असल्याचा आरोप एसडीएमसीने केला आहे.
या संदर्भात जिल्हा शिक्षणाधिकाऱ्यांकडे लेखी तक्रारही करण्यात आली होती. तथापि, संबंधित अधिकाऱ्यांच्या दुर्लक्षामुळे शिक्षकांची मनमानी सुरूच राहिल्याचे समितीचे म्हणणे आहे. अखेर नोव्हेंबर महिन्याच्या पहिल्या आठवड्यात एसडीएमसी व पालकांनी सीआरपी व बीआरसी अधिकाऱ्यांना शाळेत बोलावून शिक्षकांवर कारवाईची मागणी केली होती. त्या वेळी संबंधित अधिकाऱ्यांनी शिक्षकांना सुधारण्यासाठी एक महिन्याची मुदत दिली होती.
मात्र दिलेल्या मुदतीनंतरही शाळेतील शिक्षण व्यवस्थेत फारसा बदल दिसून आला नसल्याचे निरीक्षणात स्पष्ट झाले. या बैठकीस तालुका शिक्षणाधिकारी पी. रामाप्पा यांच्यासह इतर अधिकारी उपस्थित होते. त्यानंतर एसडीएमसी व अधिकाऱ्यांमध्ये झालेल्या चर्चेनंतर बीइओ पी. रामाप्पा यांनी शिक्षकांना आणखी 15 दिवसांची मुदत देत या कालावधीत शाळेतील शिक्षण व्यवस्था निश्चितपणे सुधारेल, अशी ग्वाही दिली.
एसडीएमसीने ही मुदत मान्य केली असली तरी ठरलेल्या कालावधीत अपेक्षित सुधारणा व निकाल दिसून न आल्यास शाळेला टाळे ठोकण्याचा कठोर निर्णय घेतला जाईल, असा स्पष्ट इशारा समितीने बीइओ व संबंधित अधिकाऱ्यांना दिला आहे.
ನಿಟ್ಟೂರು ಶಾಲೆಯ ವಿದ್ಯಾರ್ಥಿಗಳ ಗುಣಮಟ್ಟ ಸುಧಾರಿಸದಿದ್ದರೆ ಶಾಲೆಗೆ ಬೀಗ ಹಾಕಲಾಗುವುದು ಎಂದು ನಿಟ್ಟೂರು ಎಸ್ಡಿಎಂಸಿ ವತಿಯಿಂದ ಆಡಳಿತಕ್ಕೆ ಎಚ್ಚರಿಕೆ
ಖಾನಾಪುರ ; ನಿಟ್ಟೂರು (ತಾ. ಖಾನಾಪುರ, ಜಿ. ಬೆಳಗಾವಿ) ಇಲ್ಲಿನ ಸರ್ಕಾರಿ ಪೂರ್ಣ ಪ್ರಾಥಮಿಕ ಮರಾಠಿ ಶಾಲೆಯ ಶಿಕ್ಷಣ ವ್ಯವಸ್ಥೆಯ ಕುರಿತು ಪದೇಪದೇ ದೂರು ನೀಡುತ್ತಾ ಬಂದರೂ ನಿರೀಕ್ಷಿತ ಸುಧಾರಣೆ ಆಗದಿದ್ದಲ್ಲಿ ಶಾಲೆಗೆ ಬೀಗ ಹಾಕಲಾಗುವುದು ಎಂದು ಶಾಲಾ ಅಭಿವೃದ್ಧಿ ಸಮಿತಿ (ಎಸ್ಡಿಎಂಸಿ) ಎಚ್ಚರಿಕೆ ನೀಡಿದೆ. ಸೋಮವಾರ, ದಿನಾಂಕ 15 ಡಿಸೆಂಬರ್ ರಂದು ತಾಲ್ಲೂಕು ಶಿಕ್ಷಣಾಧಿಕಾರಿ ಪಿ. ರಾಮಪ್ಪ ಅವರ ಉಪಸ್ಥಿತಿಯಲ್ಲಿ ನಿಟ್ಟೂರು ಶಾಲೆಯಲ್ಲಿ ನಡೆದ ಸಭೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಎಸ್ಡಿಎಂಸಿ ವತಿಯಿಂದ ಕಳೆದ ಎರಡು ವರ್ಷಗಳಿಂದ ನಡೆಸಿದ ಅವಲೋಕನದಲ್ಲಿ ನಾಲ್ಕನೇ ತರಗತಿ ಇಂದ ಏಳನೇ ತರಗತಿಯ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದಿರುವುದು ಕಂಡುಬಂದಿದೆ. ಈ ಕುರಿತು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಛಾಯಾ ಪಾಟೀಲ ಹಾಗೂ ಸಹಶಿಕ್ಷಕರಿಗೆ ಬೋಧನಾ ವಿಧಾನದಲ್ಲಿ ಸುಧಾರಣೆ ಮಾಡಿ ಎಲ್ಲಾ ವಿದ್ಯಾರ್ಥಿಗಳನ್ನು ಮುಖ್ಯ ಪ್ರವಾಹಕ್ಕೆ ತರುವಂತೆ ಹಲವು ಬಾರಿ ಸೂಚನೆಗಳನ್ನು ನೀಡಲಾಗಿತ್ತು. ಆದರೆ ಶಿಕ್ಷಕರು ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗದೇ ಇರುವುದು, ಮನಬಂದ ಸಮಯಕ್ಕೆ ಬಂದು ಹೋಗುವುದು, ಶಾಲೆಗೆ ನೇರವಾಗಿ ಹಾಜರಾಗದೆ ಹಾಜರಿ ದಾಖಲಿಸುವಂತಹ ವರ್ತನೆಗಳು ಮುಂದುವರಿದಿವೆ ಎಂದು ಎಸ್ಡಿಎಂಸಿ ಆರೋಪಿಸಿದೆ.
ಈ ಸಂಬಂಧ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಶಿಕ್ಷಕರ ಉದ್ಧಟತನ ಮುಂದುವರಿದಿದೆ ಎಂದು ಸಮಿತಿಯ ಅಭಿಪ್ರಾಯವಾಗಿದೆ. ಅಂತಿಮವಾಗಿ ನವೆಂಬರ್ ತಿಂಗಳ ಮೊದಲ ವಾರದಲ್ಲಿ ಎಸ್ಡಿಎಂಸಿ ಹಾಗೂ ಪಾಲಕರು, ಸಿಆರ್ಪಿ ಮತ್ತು ಬಿಆರ್ಸಿ ಅಧಿಕಾರಿಗಳನ್ನು ಶಾಲೆಗೆ ಕರೆಸಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಆ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಶಿಕ್ಷಕರಿಗೆ ಸುಧಾರಣೆಗಾಗಿ ಒಂದು ತಿಂಗಳ ಕಾಲಾವಕಾಶ ನೀಡಿದ್ದರು.
ಆದರೆ ನೀಡಿದ ಅವಧಿಯ ನಂತರವೂ ಶಾಲೆಯ ಶಿಕ್ಷಣ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿಲ್ಲ ಎಂಬುದು ಅವಲೋಕನದಲ್ಲಿ ಸ್ಪಷ್ಟವಾಗಿದೆ. ಈ ಸಭೆಗೆ ತಾಲ್ಲೂಕು ಶಿಕ್ಷಣಾಧಿಕಾರಿ ಪಿ. ರಾಮಪ್ಪ ಅವರೊಂದಿಗೆ ಇತರ ಅಧಿಕಾರಿಗಳು ಹಾಜರಿದ್ದರು. ನಂತರ ಎಸ್ಡಿಎಂಸಿ ಹಾಗೂ ಅಧಿಕಾರಿಗಳ ನಡುವೆ ನಡೆದ ಚರ್ಚೆಯ ಬಳಿಕ ಬಿಇಒ ಪಿ. ರಾಮಪ್ಪ ಅವರು ಶಿಕ್ಷಕರಿಗೆ ಇನ್ನೂ 15 ದಿನಗಳ ಕಾಲಾವಕಾಶ ನೀಡುತ್ತಾ, ಈ ಅವಧಿಯಲ್ಲಿ ಶಾಲೆಯ ಶಿಕ್ಷಣ ವ್ಯವಸ್ಥೆ ಖಂಡಿತವಾಗಿ ಸುಧಾರಿಸಲಾಗುವುದು ಎಂಬ ಭರವಸೆ ನೀಡಿದರು.
ಎಸ್ಡಿಎಂಸಿ ಈ ಅವಧಿಯನ್ನು ಒಪ್ಪಿಕೊಂಡಿದ್ದರೂ, ನಿಗದಿತ ಸಮಯದಲ್ಲಿ ನಿರೀಕ್ಷಿತ ಸುಧಾರಣೆ ಹಾಗೂ ಫಲಿತಾಂಶಗಳು ಕಂಡುಬರದಿದ್ದಲ್ಲಿ ಶಾಲೆಗೆ ಬೀಗ ಹಾಕುವ ಕಟ್ಟುನಿಟ್ಟಾದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಮಿತಿಯು ಬಿಇಒ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.



