खानापूर येथे शासकीय विश्वकर्मा जयंती उत्साहात साजरी.
खानापूर : आज बुधवार दिनांक 17 सप्टेंबर 2025 रोजी, सरकारतर्फे शासकीय विश्वकर्मा जयंती उत्साहात साजरी करण्यात आली. कार्यक्रमाची सुरुवात तहसीलदार कार्यालयातून करण्यात आली. यावेळी तहसीलदार दुंड्डाप्पा कोमार, विविध शासकीय अधिकारी तसेच तालुक्यातील सर्व विश्वकर्मा बांधव मोठ्या संख्येने उपस्थित होते.
सर्वप्रथम श्री प्रभू विश्वकर्मा यांच्या प्रतिमेचे पूजन करण्यात आले. श्री शंकर कमार यांनी प्रास्ताविक करून विश्वकर्मा जयंतीचे महत्त्व पटवून दिले. यानंतर देवेंद्र बडगेर यांनी प्रत्येक सरकारी कार्यालय व शाळांमध्ये विश्वकर्मा जयंती साजरी करण्याचे आदेश द्यावेत अशी मागणी केली. प्रमोद सुतार यांनी ट्रस्ट कमिटीचे कार्य व समाजाची होत असलेली प्रगती याबद्दल विचार मांडले.
माननीय तहसीलदार साहेबांनी सरकारने दिलेल्या आदेशाची माहिती देताना सांगितले की, विश्वकर्मा बांधवांच्या कलेचा आदर्श जपण्यासाठी व त्यांच्या कलागुणांना वाव देण्यासाठी शासकीय विश्वकर्मा जयंती साजरी करणे आवश्यक आहे. तसेच यापुढे प्रत्येक कार्यालयात ही जयंती साजरी केली जाईल, असे त्यांनी स्पष्ट केले.
यानंतर सर्व अधिकारी व विश्वकर्मा बांधव श्री विश्वकर्मा मंदिरात जाऊन पूजन करून तीर्थप्रसाद ग्रहण केला. या कार्यक्रमाला तालुक्यातील विश्वकर्मा बांधव मोठ्या संख्येने उपस्थित होते.
ಖಾನಾಪುರದಲ್ಲಿ ಸರ್ಕಾರದ ವತಿಯಿಂದ ವಿಶ್ವಕರ್ಮಾ ಜಯಂತಿಯನ್ನು ಉತ್ಸಾಹದಿಂದ ಆಚರಣೆ
ಖಾನಾಪುರ : ಇಂದು ಬುಧವಾರ (ಸೆಪ್ಟೆಂಬರ್ 17) ರಂದು ಖಾನಾಪುರದಲ್ಲಿ ಸರ್ಕಾರದ ವತಿಯಿಂದ ವಿಶ್ವಕರ್ಮಾ ಜಯಂತಿಯನ್ನು ಖಾನಾಪುರದಲ್ಲಿ ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಆರಂಭ ತಹಸೀಲ್ದಾರ ಕಚೇರಿಯಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ತಹಸೀಲ್ದಾರ ದುಂಡಪ್ಪ ಕೋಮಾರ, ವಿವಿಧ ಸರ್ಕಾರಿ ಅಧಿಕಾರಿಗಳು ಹಾಗೂ ತಾಲ್ಲೂಕಿನ ವಿಶ್ವಕರ್ಮಾ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
ಮೊದಲಿಗೆ ಶ್ರೀ ಪ್ರಭು ವಿಶ್ವಕರ್ಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶಂಕರ ಕುಮಾರ ಅವರು ಪ್ರಸ್ತಾವನೆ ನೀಡುತ್ತಾ ವಿಶ್ವಕರ್ಮಾ ಜಯಂತಿಯ ಮಹತ್ವವನ್ನು ವಿವರಿಸಿದರು. ಬಳಿಕ ದೇವೇಂದ್ರ ಬಡಗೇರ್ ಅವರು ಪ್ರತಿ ಸರ್ಕಾರಿ ಕಚೇರಿ ಹಾಗೂ ಶಾಲೆಗಳಲ್ಲಿ ವಿಶ್ವಕರ್ಮಾ ಜಯಂತಿಯನ್ನು ಆಚರಿಸುವಂತೆ ಸರ್ಕಾರ ಆದೇಶಿಸಬೇಕು ಎಂದು ಆಗ್ರಹಿಸಿದರು. ಪ್ರಮೋದ್ ಸುತಾರ ಅವರು ಟ್ರಸ್ಟ್ ಸಮಿತಿಯ ಕೆಲಸ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಪ್ರಗತಿಯ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮಾನ್ಯ ತಹಸೀಲ್ದಾರರು ಸರ್ಕಾರದಿಂದ ಬಂದಿರುವ ಆದೇಶವನ್ನು ವಿವರಿಸುತ್ತಾ, ವಿಶ್ವಕರ್ಮಾ ಬಂಧುಗಳ ಕಲೆ ಹಾಗೂ ಅವರ ಪ್ರತಿಭೆಯನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸರ್ಕಾರದ ಮಟ್ಟದಲ್ಲಿ ವಿಶ್ವಕರ್ಮಾ ಜಯಂತಿಯನ್ನು ಆಚರಿಸುವುದು ಅಗತ್ಯ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಪ್ರತಿ ಸರ್ಕಾರಿ ಕಚೇರಿಯಲ್ಲೂ ಈ ಜಯಂತಿಯನ್ನು ಆಚರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ನಂತರ ಅಧಿಕಾರಿಗಳು ಹಾಗೂ ವಿಶ್ವಕರ್ಮಾ ಬಂಧುಗಳು ವಿಶ್ವಕರ್ಮಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ತೀರ್ಥಪ್ರಸಾದ ಸ್ವೀಕರಿಸಿದರು. ತಾಲ್ಲೂಕಿನ ವಿಶ್ವಕರ್ಮಾ ಸಮಾಜದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

