
मळवाड येथे मोबाईल टॉवर स्थापनेसाठी ग्रामस्थांचा अर्ज.
खानापूर : मळवाड (ता. खानापूर) गावातील मोबाईल नेटवर्कच्या सततच्या समस्यांवर उपाय म्हणून मळवाड येथील ग्रामस्थांनी एकजुटीने पुढाकार घेत कापोली ग्रामपंचायत अधिकाऱ्यांकडे मोबाईल टॉवर स्थापनेसाठी निवेदन अर्ज सादर केला. या वेळी गावातील ज्येष्ठ मंडळींसह युवकांची उपस्थिती लक्षणीय होती. लक्ष्मीदेवी व श्री गणपती बाप्पाच्या कृपेने हा उपक्रम पार पडल्याचे ग्रामस्थांनी सांगितले.

गेल्या काही वर्षांपासून नेटवर्कअभावी विद्यार्थ्यांना ऑनलाईन शिक्षण घेण्यात गंभीर अडचणी येत होत्या. शेतकऱ्यांना हवामान अंदाज, शासनाच्या योजना व तांत्रिक मार्गदर्शनाची माहिती वेळेवर मिळत नसल्याने मोठा तोटा सहन करावा लागत होता.

नेटवर्कअभावी आपत्कालीन सेवांमध्येही अडथळे निर्माण होत होते. रुग्णवाहिका बोलावणे, दवाखान्याशी संपर्क साधणे किंवा अन्य तातडीच्या सेवांचा लाभ घेणे कठीण ठरत होते. अनेकदा या विलंबामुळे गंभीर परिणामांना सामोरे जावे लागत असल्याचे ग्रामस्थांनी नमूद केले.
गावातील वडीलधारी मंडळींच्या मार्गदर्शनाखाली व युवकांच्या सक्रिय सहभागातून हा अर्ज सादर करण्यात आला. गावाच्या सर्वांगीण विकासासाठी टॉवर उभारणीचा निर्णय ऐतिहासिक ठरेल, असा विश्वास ग्रामस्थांनी व्यक्त केला आहे.
शिक्षण, शेती, आरोग्य व दळणवळण या सर्वच क्षेत्रांना याचा मोठा लाभ होईल. त्यामुळे प्रशासनाने तातडीने या अर्जावर सकारात्मक प्रतिसाद द्यावा, अशी अपेक्षा ग्रामस्थांकडून व्यक्त करण्यात आली आहे.
ಮಳವಾಡದಲ್ಲಿ ಮೊಬೈಲ್ ಟವರ್ ಸ್ಥಾಪನೆಗಾಗಿ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿಗೆ ಅರ್ಜಿ
ಖಾನಾಪುರ : ಮಳವಾಡ (ತಾ. ಖಾನಾಪುರ) ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಪರಿಹಾರವಾಗಿ ಗ್ರಾಮಸ್ಥರು ಒಗ್ಗಟ್ಟಿನಿಂದ ಮುಂದಾಗಿದ್ದು, ಕಾಪೋಲಿ ಗ್ರಾಮಪಂಚಾಯತ್ ಅಧಿಕಾರಿಗಳಿಗೆ ಮೊಬೈಲ್ ಟವರ್ ಸ್ಥಾಪನೆಗಾಗಿ ಮನವಿ ಅರ್ಜಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು ಹಾಗೂ ಯುವಕರ ಹಾಜರಾತಿ ಲಕ್ಷಣೀಯವಾಗಿತ್ತು. ಲಕ್ಷ್ಮೀದೇವಿ ಹಾಗೂ ಶ್ರೀ ಗಣೇಶನ ಕೃಪೆಯಿಂದ ಈ ಉಪಕ್ರಮ ನೆರವೇರಲೆಂದು ಗ್ರಾಮಸ್ಥರು ಆಶೆ ಇದೆ ಎಂದು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ನೆಟ್ವರ್ಕ್ ಕೊರತೆಯಿಂದಾಗಿ ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣ ಪಡೆಯುವಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ರೈತರಿಗೆ ಹವಾಮಾನ ಮುನ್ಸೂಚನೆ, ಸರ್ಕಾರದ ಯೋಜನೆಗಳು ಹಾಗೂ ತಾಂತ್ರಿಕ ಮಾರ್ಗದರ್ಶನದ ಮಾಹಿತಿ ಸರಿಯಾದ ಸಮಯಕ್ಕೆ ಸಿಗದ ಕಾರಣ ದೊಡ್ಡ ನಷ್ಟವನ್ನು ಎದುರಿಸಬೇಕಾಗಿದೆ.
ನೆಟ್ವರ್ಕ್ ಅಭಾವದಿಂದ ತುರ್ತು ಸೇವೆಗಳಲ್ಲಿಯೂ ಅಡಚಣೆ ಉಂಟಾಗುತ್ತಿತ್ತು. ಆಂಬುಲೆನ್ಸ್ನ್ನು ಕರೆಯುವುದು, ಆಸ್ಪತ್ರೆಯೊಂದಿಗೆ ಸಂಪರ್ಕ ಸಾಧಿಸುವುದು ಅಥವಾ ಇತರ ತುರ್ತು ಸೇವೆಗಳ ಪ್ರಯೋಜನ ಪಡೆಯುವುದು ಕಷ್ಟವಾಗುತ್ತಿತ್ತು. ಅನೇಕ ಬಾರಿ ಈ ವಿಳಂಬದಿಂದ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದ ಸಂದರ್ಭಗಳೂ ಉಂಟಾಗಿವೆ ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಮದ ಹಿರಿಯರ ಮಾರ್ಗದರ್ಶನದಲ್ಲಿ ಹಾಗೂ ಯುವಕರ ಸಕ್ರಿಯ ಸಹಭಾಗಿತ್ವದೊಂದಿಗೆ ಈ ಅರ್ಜಿ ಸಲ್ಲಿಸಲಾಗಿದ್ದು. ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಟವರ್ ಸ್ಥಾಪನೆಯ ನಿರ್ಧಾರ ಐತಿಹಾಸಿಕವಾಗಲಿದೆ ಎಂಬ ವಿಶ್ವಾಸವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
ಶಿಕ್ಷಣ, ಕೃಷಿ, ಆರೋಗ್ಯ ಮತ್ತು ಸಂಪರ್ಕ – ಈ ಎಲ್ಲಾ ಕ್ಷೇತ್ರಗಳಿಗೆ ಇದರಿಂದ ಮಹತ್ತರವಾದ ಲಾಭವಾಗಲಿದೆ. ಆದ್ದರಿಂದ ಆಡಳಿತವು ತುರ್ತಾಗಿ ಈ ಅರ್ಜಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಬೇಕೆಂಬ ನಿರೀಕ್ಷೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.
