
नंदगड पशु चिकित्सालय ईमारत, दोन वर्षापासून उद्घाटनाच्या प्रतीक्षेत.
खानापूर : नंदगड येथे गेल्या दोन वर्षांपूर्वी बांधण्यात आलेली, पशु खात्याची नवीन इमारत, उद्घाटनाच्या प्रतीक्षेत असून, इमारतीचे उद्घाटन न करताच, त्या ठिकाणी चिकित्सालय सुरू ठेवण्यात आले आहे. वास्तविक पाहता इमारत बांधकाम केलेल्या ठेकेदाराकडून, इमारतीचे काम पूर्ण झाल्यानंतर, कायदेशीर बाबी पूर्ण करून, इमारत ताब्यात घेणे गरजेचे आहे. परंतु असे न करताच कायदा धाब्यावर बसवून पशु चिकित्सालय सुरू ठेवण्यात आले आहे. त्यासाठी खानापूर तालुक्याचे आमदार विठ्ठलराव हलगेकर व पशु संगोपन खात्याच्या वरिष्ठ अधिकाऱ्यांनी या विषयाकडे लक्ष देण्याची मागणी नंदगड परिसरातील शेतकरी वर्ग करीत आहेत.
पशु संगोपन खात्याचे सहाय्यक संचालक, डॉ.ए.एस कोडगी..
पशु संगोपन खात्याचे सहाय्यक संचालक डॉक्टर ए एस कोडगी व नंदगड येथील पशु चिकित्सालयाचे डॉ आयाझ अहमद यांना याबाबत विचारले असता ते म्हणाले की, मागील वर्षी विधानसभेची निवडणूक व यावर्षी लोकसभेची निवडणूक झाली. त्यामुळे आचारसंहिता लागू असल्याने, इमारतीचे उद्घाटन करता आले नाही. परंतु थोड्याच दिवसात पशु चिकित्साल्य ईमारतीचे उद्घाटन करणार असल्याचे त्यांनी सांगितले. असे असले तरी खानापूर तालुक्याचे आमदार विठ्ठलराव हलगेकर, यांनी या विषयाकडे लक्ष देणे गरजेचे आहे.
ನಂದಗಡ “ಪಶುವೈದ್ಯಕೀಯ ಆಸ್ಪತ್ರೆ” ಕಟ್ಟಡ, ಎರಡು ವರ್ಷಗಳಿಂದ ಉದ್ಘಾಟನೆಗೆ ಕಾಯುತ್ತಿದೆ.
ಖಾನಾಪುರ: ನಂದಗಡದಲ್ಲಿ ಎರಡು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಪಶು ಇಲಾಖೆ ನೂತನ ಕಟ್ಟಡ ಉದ್ಘಾಟನೆ ಆಗದೆ ಹಾಗೆ ಇದೆ. ವಾಸ್ತವವಾಗಿ, ಕಟ್ಟಡದ ಕೆಲಸವನ್ನು ಪೂರ್ಣಗೊಳಿಸಿದ ನಂತರ ಅದನ್ನು ಗುತ್ತಿಗೆದಾರರಿಂದ ಕಟ್ಟಡವನ್ನು ಸ್ವಾಧೀನಪಡಿಸಿಕೊಳ್ಳಬೇಕು. ಹಾಗೆ ಮಾಡದೆ ಪಶುವೈದ್ಯಕೀಯ ಆಸ್ಪತ್ರೆ ಕಟ್ಟಡದಲ್ಲಿ ಆಸ್ಪತ್ರೆ ಕೇಲಸವನ್ನು ಪ್ರಾರಂಬಿಸ್ಲಾಗಿದೆ ಇದಕ್ಕಾಗಿ ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ ಹಾಗೂ ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ನಂದಗಡ ಭಾಗದ ರೈತರು ಆಗ್ರಹಿಸಿದ್ದಾರೆ.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎ.ಎಸ್.ಕೊಡಗಿ ಸ್ಪಷ್ಟನೆ.
ಈ ಕುರಿತು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಎ.ಎಸ್.ಕೊಡಗಿ ಹಾಗೂ ನಂದಗಡದ ಪಶು ಆಸ್ಪತ್ರೆಯ ಡಾ.ಅಯಾಜ್ ಅಹ್ಮದ್ ಅವರನ್ನು ಕೇಳಿದಾಗ ಕಳೆದ ವರ್ಷ ವಿಧಾನಸಭೆ ಚುನಾವಣೆ ಹಾಗೂ ಈ ವರ್ಷ ಲೋಕಸಭೆ ಚುನಾವಣೆ ನಡೆದಿತ್ತು. ಹಾಗಾಗಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕಟ್ಟಡ ಉದ್ಘಾಟನೆ ಸಾಧ್ಯವಾಗಿಲ್ಲ. ಆದರೆ ಕೆಲವೇ ದಿನಗಳಲ್ಲಿ ಪಶು ಆಸ್ಪತ್ರೆ ಕಟ್ಟಡ ಉದ್ಘಾಟನೆ ಮಾಡುವುದಾಗಿ ತಿಳಿಸಿದರು. ಇಗಲಾದರೂ ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ ಈ ಬಗ್ಗೆ ಗಮನಹರಿಸಬೇಕಿದೆ ಎಂದು ಜನರ ಅಭಿಪ್ರಾಯ ವ್ಯಕ್ತಪಡಿಸಿದರು.
