वट पौर्णिमेनिमित्त कक्केरीसह परिसरातील गावांत वटसावित्री पूजन उत्साहात.
कक्केरी : प्रतिनिधी
खानापूर तालुक्यातील कक्केरी, लिंगणमठ, गोधोळी, भुरणकी, मास्केनहट्टी, बीडी, चुंचवाड आदी गावांमध्ये वट पौर्णिमेनिमित्त वटसावित्री व्रत मोठ्या भक्तिभावाने व उत्साहात साजरे करण्यात आले.
यावेळी सुवासिनींनी वड व पिंपळाच्या फांद्या घरी आणून त्यांची विधीवत पूजा केली. तर अनेक महिलांनी गावातील वड व पिंपळाच्या झाडाभोवती पाच प्रदक्षिणा घालत दोरा गुंडाळला. झाडांना हळद-कुंकू लावून फुल व हार अर्पण करण्यात आले. तसेच विद्युत रोषणाई व आंब्याच्या पानांच्या तोरणांनी सजावट करून आरती व पूजन करण्यात आले.
पूजेनंतर केळी, फणस, आंबा, पेरू, डाळिंब, जांभूळ, कवळी फळ, काळे मणी, विड्याची पाने, सुपारी आदी पारंपरिक वस्तूंनी सुवासिनींना ओटी भरून शुभेच्छा देण्यात आल्या.
या प्रसंगी भारती मीठारी, सुचित्रा मीठारी, शीला मीठारी, ज्योती कुडुतुरकर, शालन कुडुतुरकर, पूजा कुडुतुरकर, लक्ष्मी पानेरी, संध्या पानेरी, वाणी पानेरी, सोनाली पानेरी, रूप पानेरी, अमृता कुडुतुरकर, स्नेहा मुरगोड यांच्यासह अनेक महिला उपस्थित होत्या.
ಕಾರ ಹುಣ್ಣಿಮೆಯಂದು ಕಕ್ಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ವಿಜೃಂಭಣೆಯಿಂದ ವಟ ಸಾವಿತ್ರಿ ಹಬ್ಬ ಆಚರಣೆ.
ಕಕ್ಕೇರಿ : ಪ್ರತಿನಿಧಿ
ಖಾನಾಪುರ ತಾಲೂಕಿನ ಕಕ್ಕೇರಿ, ಲಿಂಗನಮಠ, ಗೋಧೋಳಿ, ಭೂರಣಕಿ, ಮಾಸ್ಕೇನಟ್ಟಿ, ಬೀಡಿ ಹಾಗೂ ಚುಂಚುವಾಡ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾರ ಹುಣ್ಣಿಮೆಯ ಅಂಗವಾಗಿ ವಡ ಸಾವಿತ್ರಿ ಹಬ್ಬವನ್ನು ಮಹಿಳೆಯರು ಸಂಭ್ರಮ, ಸಡಗರ ಹಾಗೂ ಭಕ್ತಿಭಾವದಿಂದ ಆಚರಿಸಿದರು.
ಸಂಪ್ರದಾಯದಂತೆ ಮುತ್ತೈದೆಯರು ಅರಳಿ ಹಾಗೂ ಆಲದ ಕೊಂಬೆಗಳನ್ನು ಮನೆಗೆ ತಂದು ಪೂಜೆ ಸಲ್ಲಿಸಿದರು. ಕೆಲವರು ಗ್ರಾಮದ ಅರಳಿ ಹಾಗೂ ಆಲದ ಮರಗಳಿಗೆ ಐದು ಸುತ್ತು ದಾರವನ್ನು ಸುತ್ತಿ, ಅರಿಶಿನ-ಕುಂಕುಮ ಹಚ್ಚಿ, ಹೂಮಾಲೆಗಳನ್ನು ಅರ್ಪಿಸಿ, ವಿದ್ಯುತ್ ದೀಪಗಳು ಹಾಗೂ ಮಾವಿನ ತೋರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಆರತಿ ಬೆಳಗಿ ಪತಿ ಹಾಗೂ ಕುಟುಂಬದ ಆಯುಷ್ಯ, ಆರೋಗ್ಯ ಮತ್ತು ಸುಖ-ಸಮೃದ್ಧಿಗಾಗಿ ಪ್ರಾರ್ಥಿಸಿದರು.
ಪೂಜೆಯ ಅಂಗವಾಗಿ ಬಾಳೆಹಣ್ಣು, ಹಲಸಿನ ಹಣ್ಣು, ಮಾವಿನ ಹಣ್ಣು, ಪೇರಲ ಹಣ್ಣು, ದಾಳಿಂಬೆ, ನೇರಳೆ ಹಣ್ಣು, ಕವಳಿ ಹಣ್ಣು, ಉತ್ತತ್ತಿ, ಕರಿಮಣಿ, ಎಲೆ-ಅಡಿಕೆ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳನ್ನು ಸಮರ್ಪಿಸಿ ಉಡಿ ತುಂಬುವ ಸಂಪ್ರದಾಯವನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಭಾರತಿ ಮಿಠಾರಿ, ಸುಚಿತ್ರಾ ಮಿಠಾರಿ, ಶೀಲಾ ಮಿಠಾರಿ, ಜ್ಯೋತಿ ಕುಡುತುರಕರ, ಶಾಲನ ಕುಡುತುರಕರ, ಪೂಜಾ ಕುಡುತುರಕರ, ಲಕ್ಷ್ಮಿ ಪಾನೇರಿ, ಸಂಧ್ಯಾ ಪಾನೇರಿ, ವಾಣಿ ಪಾನೇರಿ, ಸೋನಾಲಿ ಪಾನೇರಿ, ರೂಪಾ ಪಾನೇರಿ, ಅಮೃತ ಕುಡುತುರಕರ, ಸ್ನೇಹಾ ಮುರಗೋಡ ಸೇರಿದಂತೆ ಅನೇಕ ಮುತ್ತೈದೆಯರು ಉಪಸ್ಥಿತರಿದ್ದು, ಸಂಪ್ರದಾಯಬದ್ಧವಾಗಿ ವಟ ಸಾವಿತ್ರಿ ವ್ರತವನ್ನು ಆಚರಿಸಿದರು.


