जांबोटी-वडगावच्या नेटवर्क समस्येचा प्रश्न ऐरणीवर; ग्रामस्थांचे बीएसएनएलकडे निवेदन; आठ दिवसात सर्वेक्षण करण्याचे आश्वासन.
खानापूर : प्रतिनिधी
आधुनिक डिजिटल युगात इंटरनेट कनेक्टिव्हिटी अत्यावश्यक बनली असताना जांबोटी-वडगाव परिसरात कोणत्याही मोबाईल नेटवर्क कंपनीची समाधानकारक सेवा उपलब्ध नसल्याने ग्रामस्थांना मोठ्या अडचणींचा सामना करावा लागत आहे. या गंभीर समस्येकडे बीएसएनएल प्रशासनाचे लक्ष वेधण्यासाठी वडगाव ग्रामस्थांच्या वतीने बीएसएनएलचे डेप्युटी जनरल मॅनेजर श्री. देवेंद्र व असिस्टंट जनरल मॅनेजर श्री. वेठे यांना ग्रामस्थांकडून निवेदन देण्यात आले.

आज जन्म-मृत्यू नोंदणीपासून विविध शासकीय योजनांचा लाभ घेण्यापर्यंत, ग्रामपंचायतीतील मालमत्ता नोंदणी, ऑनलाइन अर्ज, रोजगारविषयक कामे, बँकिंग व्यवहार तसेच इतर अनेक दैनंदिन कामांसाठी इंटरनेट आवश्यक झाले आहे. त्याचबरोबर कर्मचारी Work From Home, शालेय विद्यार्थ्यांचे ऑनलाइन शिक्षण, शिक्षकांचे शैक्षणिक कामकाज आणि विविध शासकीय ऑनलाइन प्रणालींच्या वापरासाठीही स्थिर इंटरनेट सेवा गरजेची आहे.

मात्र, जांबोटी-वडगाव परिसरात नेटवर्कची सुविधा अत्यंत कमकुवत असल्याने नागरिकांना ऑनलाइन कामांसाठी गावापासून तब्बल एक किलोमीटरपर्यंत जावे लागत असल्याची परिस्थिती आहे. विशेषतः विद्यार्थी व शिक्षकांना ऑनलाइन शैक्षणिक कामांसाठी नेटवर्क मिळविण्याकरिता गावाबाहेर जावे लागत असल्याने त्यांच्या शैक्षणिक कामकाजावर परिणाम होत आहे.
मोबाईल टॉवर उभारण्याची मागणी…
जांबोटी-वडगाव परिसरातील ही समस्या दूर करण्यासाठी येथे भारत संचार निगम लिमिटेडचा (BSNL) मोबाईल टॉवर उभारून गावाला सक्षम डिजिटल कनेक्टिव्हिटी उपलब्ध करून द्यावी, अशी मागणी यापूर्वी खानापूरचे आमदार विठ्ठलराव सो. हलगेकर यांच्याकडे करण्यात आली होती.
आमदार हलगेकर यांच्या मार्गदर्शनाखाली वडगाव ग्रामस्थांच्या वतीने बीएसएनएल अधिकाऱ्यांना निवेदन देण्यात आले. यावेळी निवेदनासोबत आमदार विठ्ठलराव हलगेकर यांचे शिफारसपत्रही जोडण्यात आले.
आठ दिवसांत नेटवर्क सर्वेक्षण….
ग्रामस्थांच्या समस्येची दखल घेत बीएसएनएलचे डीजीएम श्री. देवेंद्र यांनी येत्या आठ दिवसांच्या आत जांबोटी-वडगाव परिसरात प्रत्यक्ष नेटवर्क सर्वेक्षण करण्यात येईल, असे आश्वासन दिले. सर्वेक्षणातून उपलब्ध होणाऱ्या अहवालाच्या आधारे योग्य ती कार्यवाही करून परिसरातील नेटवर्क समस्या सोडविण्याचा प्रयत्न केला जाईल, असे त्यांनी सांगितले.
यावेळी जांबोटी ग्रामपंचायतीचे माजी उपाध्यक्ष सुनील देसाई, वडगाव शाळा सुधारणा समितीचे अध्यक्ष सागर नारायण दळवी, जांबोटी पी.के.पी.एस.चे चेअरमन जयवंत नारायण देसाई यांच्यासह ग्रामस्थ उपस्थित होते.
जांबोटी-वडगाव परिसरातील नागरिक, विद्यार्थी, शिक्षक आणि कर्मचाऱ्यांची ऑनलाइन कामांसाठी होणारी गैरसोय दूर करून गावाला सक्षम डिजिटल कनेक्टिव्हिटी मिळावी, ही ग्रामस्थांची प्रमुख मागणी आहे. त्यामुळे बीएसएनएलच्या प्रस्तावित सर्वेक्षणानंतर प्रत्यक्षात कोणती कार्यवाही होते, याकडे ग्रामस्थांचे लक्ष लागले आहे.
ಜಾಂಬೋಟಿ–ವಡಗಾಂವ್ ನೆಟ್ವರ್ಕ್ ಸಮಸ್ಯೆ ಮುನ್ನೆಲೆಗೆ; ಗ್ರಾಮಸ್ಥರಿಂದ ಬಿಎಸ್ಎನ್ಎಲ್ಗೆ ಮನವಿ; ಎಂಟು ದಿನಗಳಲ್ಲಿ ಸರ್ವೇ ನಡೆಸುವ ಭರವಸೆ.
ಖಾನಾಪುರ : ಪ್ರತಿನಿಧಿ
ಆಧುನಿಕ ಡಿಜಿಟಲ್ ಯುಗದಲ್ಲಿ ಇಂಟರ್ನೆಟ್ ಸಂಪರ್ಕ ಅತ್ಯವಶ್ಯಕವಾಗಿರುವ ಸಂದರ್ಭದಲ್ಲಿ ಜಾಂಬೋಟಿ–ವಡಗಾಂವ್ ಪ್ರದೇಶದಲ್ಲಿ ಯಾವುದೇ ಮೊಬೈಲ್ ನೆಟ್ವರ್ಕ್ ಕಂಪನಿಯ ಸಮರ್ಪಕ ಸೇವೆ ಲಭ್ಯವಿಲ್ಲದ ಕಾರಣ ಗ್ರಾಮಸ್ಥರು ತೀವ್ರ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಗಂಭೀರ ಸಮಸ್ಯೆಯತ್ತ ಬಿಎಸ್ಎನ್ಎಲ್ ಆಡಳಿತದ ಗಮನ ಸೆಳೆಯುವ ಉದ್ದೇಶದಿಂದ ವಡಗಾಂವ್ ಗ್ರಾಮಸ್ಥರ ಪರವಾಗಿ ಬಿಎಸ್ಎನ್ಎಲ್ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಶ್ರೀ ದೇವೇಂದ್ರ ಹಾಗೂ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶ್ರೀ ವೇಠೆ ಅವರಿಗೆ ಗ್ರಾಮಸ್ಥರಿಂದ ಮನವಿ ಸಲ್ಲಿಸಲಾಯಿತು.
ಇಂದು ಜನನ–ಮರಣ ನೋಂದಣಿಯಿಂದ ಹಿಡಿದು ವಿವಿಧ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯುವವರೆಗೆ, ಗ್ರಾಮ ಪಂಚಾಯಿತಿಯಲ್ಲಿನ ಆಸ್ತಿ ನೋಂದಣಿ, ಆನ್ಲೈನ್ ಅರ್ಜಿಗಳು, ಉದ್ಯೋಗಕ್ಕೆ ಸಂಬಂಧಿಸಿದ ಕೆಲಸಗಳು, ಬ್ಯಾಂಕಿಂಗ್ ವ್ಯವಹಾರಗಳು ಸೇರಿದಂತೆ ಅನೇಕ ದೈನಂದಿನ ಕೆಲಸಗಳಿಗೆ ಇಂಟರ್ನೆಟ್ ಅನಿವಾರ್ಯವಾಗಿದೆ. ಇದರ ಜೊತೆಗೆ ಉದ್ಯೋಗಿಗಳ ವರ್ಕ್ ಫ್ರಮ್ ಹೋಮ್, ಶಾಲಾ ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣ, ಶಿಕ್ಷಕರ ಶೈಕ್ಷಣಿಕ ಕಾರ್ಯಗಳು ಹಾಗೂ ವಿವಿಧ ಸರ್ಕಾರಿ ಆನ್ಲೈನ್ ವ್ಯವಸ್ಥೆಗಳ ಬಳಕೆಗೆ ಸ್ಥಿರವಾದ ಇಂಟರ್ನೆಟ್ ಸೇವೆ ಅಗತ್ಯವಾಗಿದೆ.
ಆದರೆ ಜಾಂಬೋಟಿ–ವಡಗಾಂವ್ ಪ್ರದೇಶದಲ್ಲಿ ನೆಟ್ವರ್ಕ್ ಸೌಲಭ್ಯ ಅತ್ಯಂತ ದುರ್ಬಲವಾಗಿರುವುದರಿಂದ ನಾಗರಿಕರು ಆನ್ಲೈನ್ ಕೆಲಸಗಳಿಗಾಗಿ ಗ್ರಾಮದಿಂದ ಸುಮಾರು ಒಂದು ಕಿಲೋಮೀಟರ್ ದೂರದವರೆಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆನ್ಲೈನ್ ಶೈಕ್ಷಣಿಕ ಕೆಲಸಗಳಿಗಾಗಿ ನೆಟ್ವರ್ಕ್ ಪಡೆಯಲು ಗ್ರಾಮದಿಂದ ಹೊರಗೆ ತೆರಳಬೇಕಾಗಿರುವುದರಿಂದ ಅವರ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತಿದೆ.
ಮೊಬೈಲ್ ಟವರ್ ನಿರ್ಮಿಸುವಂತೆ ಆಗ್ರಹ…
ಜಾಂಬೋಟಿ–ವಡಗಾಂವ್ ಪ್ರದೇಶದ ಈ ಸಮಸ್ಯೆಯನ್ನು ನಿವಾರಿಸಲು ಇಲ್ಲಿ ಭಾರತ್ ಸಂಚಾರ ನಿಗಮ್ ಲಿಮಿಟೆಡ್ (BSNL) ಮೊಬೈಲ್ ಟವರ್ ನಿರ್ಮಿಸಿ ಗ್ರಾಮಕ್ಕೆ ಸಮರ್ಪಕ ಡಿಜಿಟಲ್ ಕನೆಕ್ಟಿವಿಟಿ ಒದಗಿಸಬೇಕು, ಎಂಬ ಬೇಡಿಕೆಯನ್ನು ಈ ಹಿಂದೆ ಖಾನಾಪುರದ ಶಾಸಕ ವಿಠ್ಠಲರಾವ್ ಸೋ. ಹಳೇಗೇಕರ್ ಅವರಲ್ಲಿ ಮಾಡಲಾಗಿತ್ತು.
ಶಾಸಕ ಹಲಗೇಕರ್ ಅವರ ಮಾರ್ಗದರ್ಶನದಲ್ಲಿ ವಡಗಾಂವ್ ಗ್ರಾಮಸ್ಥರ ಪರವಾಗಿ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮನವಿಯೊಂದಿಗೆ ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಶಿಫಾರಸು ಪತ್ರವನ್ನೂ ಸಲ್ಲಿಸಲಾಯಿತು.
ಎಂಟು ದಿನಗಳಲ್ಲಿ ನೆಟ್ವರ್ಕ್ ಸರ್ವೇ…
ಗ್ರಾಮಸ್ಥರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಬಿಎಸ್ಎನ್ಎಲ್ ಡಿಜಿಎಂ ಶ್ರೀ ದೇವೇಂದ್ರ ಅವರು ಮುಂದಿನ ಎಂಟು ದಿನಗಳೊಳಗೆ ಜಾಂಬೋಟಿ–ವಡಗಾಂವ್ ಪ್ರದೇಶದಲ್ಲಿ ಸ್ಥಳಕ್ಕೆ ಭೇಟಿ ನೀಡಿ ನೆಟ್ವರ್ಕ್ ಸರ್ವೇ ನಡೆಸಲಾಗುವುದು, ಎಂದು ಭರವಸೆ ನೀಡಿದರು.
ಸರ್ವೇಯಿಂದ ಲಭ್ಯವಾಗುವ ವರದಿಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಂಡು ಪ್ರದೇಶದಲ್ಲಿನ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಾಂಬೋಟಿ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಸುನೀಲ್ ದೇಸಾಯಿ, ವಡಗಾಂವ್ ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಸಾಗರ ನಾರಾಯಣ ದಳವಿ, ಜಾಂಬೋಟಿ ಪಿ.ಕೆ.ಪಿ.ಎಸ್. ಅಧ್ಯಕ್ಷ ಜಯವಂತ ನಾರಾಯಣ ದೇಸಾಯಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾಂಬೋಟಿ–ವಡಗಾಂವ್ ಪ್ರದೇಶದ ನಾಗರಿಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉದ್ಯೋಗಿಗಳಿಗೆ ಆನ್ಲೈನ್ ಕೆಲಸಗಳಿಗಾಗಿ ಎದುರಾಗುತ್ತಿರುವ ತೊಂದರೆ ನಿವಾರಣೆಯಾಗಬೇಕು ಹಾಗೂ ಗ್ರಾಮಕ್ಕೆ ಸಮರ್ಪಕ ಡಿಜಿಟಲ್ ಕನೆಕ್ಟಿವಿಟಿ ದೊರೆಯಬೇಕು, ಎಂಬುದು ಗ್ರಾಮಸ್ಥರ ಪ್ರಮುಖ ಬೇಡಿಕೆಯಾಗಿದೆ. ಹೀಗಾಗಿ ಬಿಎಸ್ಎನ್ಎಲ್ ವತಿಯಿಂದ ಪ್ರಸ್ತಾಪಿಸಿರುವ ನೆಟ್ವರ್ಕ್ ಸರ್ವೇ ನಂತರ ಯಾವ ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರತ್ತ ಗ್ರಾಮಸ್ಥರ ಗಮನ ನೆಟ್ಟಿದೆ.



