दुचाकीच्या अपघातात रामनगरच्या 27 वर्षीय तरुणाचा मृत्यू.
खानापूर : रामनगर येथील तरुणाचा मोटारसायकल अपघातात दुर्दैवी मृत्यू झाल्याची घटना नागरगाळी क्रॉसजवळ घडली आहे. मृताचे नाव दिगंबर पांडुरंग गावडे (वय 27, रा. रामनगर, ता. जोयडा, जि. उत्तर कन्नड) असे आहे.

पोलीसांनी दिलेल्या माहितीनुसार, दि. 22 फेब्रुवारी 2026 रोजी पहाटे 3.30 वाजल्यापासून ते दि. 23 फेब्रुवारी 2026 रोजी सकाळी 8.00 वाजण्याच्या दरम्यान हा अपघात घडला. दिगंबर गावडे हे केए-65/के-1896 क्रमांकाची मोटारसायकलवरून रामनगर-आळनावर मार्गावर, रामनगरकडून अळनावरकडे चालवत होते. त्यावेळी नागरगाळी गावाच्या हद्दीतील नागरगाळी क्रॉसजवळ पोहोचल्यावर त्यांची मोटारसायकल अतिवेगात असल्याने वाहनावरील नियंत्रण गमावले. परिणामी मोटारसायकल रस्त्याच्या कडेला असलेल्या सिमेंटच्या खांबावर आदळली. व धडकेनंतर ते रस्त्याच्या बाजूच्या खोलगट भागात (खड्ड्यात) पडले.
या अपघातात त्यांच्या डोक्याला व चेहऱ्याला गंभीर दुखापत झाली, त्यामुळे त्यांचा मृत्यू झाला. या प्रकरणी खानापूर पोलीस ठाण्यात गुन्हाची नोंद करण्यात आली असून पुढील तपास खानापूर पोलीस करीत आहेत.
ದ್ವಿಚಕ್ರ ವಾಹನ ಅಪಘಾತದಲ್ಲಿ ರಾಮನಗರದ 27 ವರ್ಷದ ಯುವಕನ ಸಾವು.
ಖಾನಾಪುರ : ರಾಮನಗರದ ಯುವಕನೊಬ್ಬ ಮೋಟಾರ್ಸೈಕಲ್ ಅಪಘಾತದದ ದುರ್ಘಟನೆಯಲ್ಲಿ ಸಾವನ್ನಪ್ಪಿದ ಘಟನೆ ನಾಗರಗಾಳಿ ಕ್ರಾಸ್ ಸಮೀಪ ಸಂಭವಿಸಿದೆ. ಮೃತನ ಹೆಸರು ದಿಗಂಬರ್ ಪಾಂಡುರಂಗ ಗಾವಡೆ (ವಯಸ್ಸು 27, ಸಾ. ರಾಮನಗರ, ತಾ. ಜೊಯಿಡಾ, ಜಿ. ಉತ್ತರ ಕನ್ನಡ) ಎಂದು ತಿಳಿದುಬಂದಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ದಿ. 22 ಫೆಬ್ರವರಿ 2026ರ ಬೆಳಿಗ್ಗೆ 3.30 ಗಂಟೆಯಿಂದ ದಿ. 23 ಫೆಬ್ರವರಿ 2026ರ ಬೆಳಿಗ್ಗೆ 8.00 ಗಂಟೆಯೊಳಗಿನ ಅವಧಿಯಲ್ಲಿ ಈ ಅಪಘಾತ ಸಂಭವಿಸಿದೆ. ದಿಗಂಬರ್ ಗಾವಡೆ ಅವರು ಕೆಎ-65/ಕೆ-1896 ನೋಂದಣಿ ಸಂಖ್ಯೆಯ ಮೋಟಾರ್ಸೈಕಲ್ನಲ್ಲಿ ರಾಮನಗರ–ಅಳಣ್ಣಾವರ ಮಾರ್ಗದಲ್ಲಿ ರಾಮನಗರದಿಂದ ಅಳಣ್ಣಾವರ ಕಡೆಗೆ ಸಂಚರಿಸುತ್ತಿದ್ದರು.
ಆ ವೇಳೆ ನಾಗರಗಾಳಿ ಗ್ರಾಮದ ವ್ಯಾಪ್ತಿಯ ನಾಗರಗಾಳಿ ಕ್ರಾಸ್ ಸಮೀಪ ತಲುಪಿದಾಗ, ಮೋಟಾರ್ಸೈಕಲ್ ಅತಿವೇಗದಲ್ಲಿದ್ದ ಕಾರಣ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ. ಪರಿಣಾಮವಾಗಿ ಮೋಟಾರ್ಸೈಕಲ್ ರಸ್ತೆ ಬದಿಯಲ್ಲಿದ್ದ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಅವರು ರಸ್ತೆ ಬದಿಯ ಆಳವಾದ ಗುಂಡಿಯಲ್ಲಿ ಬಿದ್ದಿದ್ದಾರೆ.
ಈ ಅಪಘಾತದಲ್ಲಿ ಅವರ ತಲೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗೂ ಮುನ್ನವೇ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆಯನ್ನು ಖಾನಾಪುರ ಪೊಲೀಸರು ಕೈಗೊಂಡಿದ್ದಾರೆ.



