खानापूर-नंदगड मार्गावर दोन ट्रकची भीषण धडक; एक चालक गंभीर जखमी
खानापूर : काल मंगळवार दिनांक 7 ऑक्टोबर 2025 रोजी रात्री सुमारे 11 वाजता, खानापूर-नंदगड मुख्य रस्त्यावर नांवगा क्रॉसजवळ दोन लारी (ट्रक) यांचा भीषण अपघात झाला. या अपघातात एका लारीचा चालक अडकून पडला होता.
घटनेची माहिती मिळताच नंदगड 108 रुग्णवाहिका पथकाने तात्काळ घटनास्थळी धाव घेतली आणि अथक प्रयत्न करून चालकाला बाहेर काढून प्राथमिक उपचार दिले. त्यानंतर त्याला पुढील उपचारासाठी खानापूर सरकारी रुग्णालयात दाखल करण्यात आले.
तेथून अधिक उपचारासाठी बेळगाव जिल्हा रुग्णालयात हलविण्यात आले आहे. अपघाताचे नेमके कारण अद्याप समजू शकले नसून, पोलिसांकडून पुढील तपास सुरू आहे.
ಖಾನಾಪೂರ-ನಂದಗಡ ಮಾರ್ಗದಲ್ಲಿ ಎರಡು ಲಾರಿಗಳ ಮದ್ಯ ಭೀಕರ ಅಪಘಾತ; ಒಬ್ಬ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.
ಖಾನಾಪೂರ : ಮಂಗಳವಾರ, ದಿನಾಂಕ 7 ಅಕ್ಟೋಬರ್ 2025ರಂದು ರಾತ್ರಿ ಸುಮಾರು 11 ಗಂಟೆ ಸುಮಾರಿಗೆ, ಖಾನಾಪೂರ–ನಂದಗಡ ಮುಖ್ಯರಸ್ತೆಯಲ್ಲಿ ನಾವಗಾ ಕ್ರಾಸ್ ಬಳಿ ಎರಡು ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಒಂದು ಲಾರಿಯ ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದಾನೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ನಂದಗಡ 108 ಆಂಬುಲೆನ್ಸ್ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಶ್ರಮಪಟ್ಟು ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಗಾಯಾಳುವನ್ನು ಖಾನಾಪೂರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಯಿತು. ಅಲ್ಲಿಂದ ಮುಂದಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

