
श्री क्षेत्र मंजुनाथ धर्मस्थळाकडून माचीगड येथील सुब्रमण्यम मंदिर सामुदायिक सभागृहासाठी 2 लाख रुपये मंजूर.
खानापूर ; खानापूर तालुक्यातील माचीगड गावातील श्री सुब्रमण्यम मंदिर विश्वस्त कमिटीला, श्री क्षेत्र मंजुनाथ धर्मस्थळाकडून सामुदायिक सभागृह बांधण्यासाठी 2 लाख रुपये मंजूर करण्यात आले आहेत. अनुदानाचे मंजुरी पत्र माजी आमदार व बेळगाव जिल्हा मध्यवर्ती सहकारी बँकेचे संचालक श्री अरविंद पाटील यांच्याहस्ते, मंदीर समिती सदस्यांकडे सुपूर्द करण्यात आले.
या अनुषंगाने बोलताना माजी आमदार व डीसीसी बँकेचे संचालक अरविंद पाटील, हे श्री क्षेत्र धर्मस्थळ ग्रामीण विकास प्रकल्पाबद्दल बोलताना म्हणाले की, मंजुनाथ धर्मस्थळाकडून महिलांना स्वावलंबी जीवन जगण्यास मदत झाली आहे. धर्मस्थळ संस्था, महिला या असहाय्य नसून, सक्षम आहेत. हे दाखवण्यासाठी कठोर परिश्रम घेत आहे. महिला सर्व क्षेत्रात धर्मस्थळाच्या सहाय्याने प्रगती करत आहेत. या प्रकल्पामुळे महिलांना बँक ऑफ महाराष्ट्र मार्फत कर्ज सुविधा मिळत आहे. आणि त्या आर्थिकदृष्ट्या विकसित होत आहेत. या संस्थेच्या सहकार्याने लोकांचे जीवन सुकर झाले आहे, डॉ. डी. वीरेंद्र हेगडे सर्वत्र अनेक कार्यक्रम आयोजित करत आहेत. जे कौतुकास्पद आहे. धर्मस्थळाचे धर्माधिकारी डॉ. डी वीरेंद्र हेगडे यांनी समाजासाठी फार मोठं योगदान दिलं आहे. वीरेंद्र हेगडे यांनी तलावांमधील गाळ साफ करणे, बेघरांसाठी घरे बांधणे, विद्यार्थ्यांसाठी शिष्यवृत्ती, मंदिरांच्या नूतनीकरणासाठी मदत, सामुदायिक सभागृहांचे बांधकाम, कल्याणकारी सभागृहे आणि स्मशानभूमींचा विकास आणि शाळांमध्ये अतिथी शिक्षकांची नियुक्ती यासाठी मदत केली आहे. लोकांना मद्यपान सोडण्यास, मदत करण्यासाठी, मद्यपान प्रतिबंध शिबिरे, विविध उपकरणांचे वाटप, निराधारांना मासिक भत्ता, अधिक कार्य केले आहे. धर्मस्थळ धर्माधिकारी डॉ. वीरेंद्र हेगडे यांनी ग्रामीण भागातील लोकांच्या कल्याणासाठी अनेकांना फायदा होणारे विविध कार्यक्रम राबवून कठोर परिश्रम घेत आहेत. धर्मस्थळ ग्रामीण विकास प्रकल्पाद्वारे, डॉ वीरेंद्र हेगडे यांनी राबविलेले पूण्याचे कार्य संपूर्ण देशासाठी एक उदाहरण आहे. असे अरविंद पाटील म्हणाले.

कार्यक्रमादरम्यान, खानापुरा तालुक्यातील श्री क्षेत्र धर्मस्थळाचे ग्रामीण विकास प्रकल्प अधिकारी गणपती डी. नायक यांनी प्रकल्पाच्या विविध विषयावर आणि विविध सुविधांवर मार्गदर्शन केले.
या कार्यक्रमाला श्री सुब्रमण्य मंदिर समितीचे अध्यक्ष पी एल डी बँकेचे संचालक श्री बाबूराव नागाप्पा पाटील, नारायण पाटील, तम्मन्ना कोलकार, मंदिर विश्वस्त समितीचे सदस्य, गावातील विविध मान्यवर आणि ग्रामपंचायत सदस्य उपस्थित होते.
कार्यक्रमात सर्वांचे स्वागत सेवा प्रतिनिधी, कावेरी यांनी केले तर आभार प्रदर्शन विभाग पर्यवेक्षक महांतेश यांनी केले.
ಶ್ರೀ ಕ್ಷೇತ್ರ ಮಂಜುನಾಥ ಧರ್ಮಸ್ಥಳದಿಂದ ಮಾಚಿಗಡ್ನಲ್ಲಿರುವ ಸುಬ್ರಮಣಿಯಂ ದೇವಸ್ಥಾನ ಸಮುದಾಯ ಭವನಕ್ಕೆ 2 ಲಕ್ಷ ರೂ.ಗಳ ಅನುಮೋದನೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಾಚಿಗಡ ಗ್ರಾಮದ ಶ್ರೀ ಸುಬ್ರಮಣ್ಯ ದೇವಸ್ಥಾನ ಟ್ರಸ್ಟ್ ಕಮಿಟಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕಾಗಿ ರೂಪಾಯಿ 2 ಲಕ್ಷ ಮಂಜುರಾತಿ ಆಗಿದ್ದು ಸಹಾಯಧನದ ಮಂಜೂರಾತಿ ಪತ್ರವನ್ನು ಖಾನಾಪುರ ತಾಲೂಕಿನ ಮಾಜಿ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ನ ನಿರ್ದೇಶಕರು ಆಗಿರುವ ಶ್ರೀಯುತ ಅರವಿಂದ ಪಾಟೀಲ್ ಸಮಿತಿಯ ಸದಸ್ಯರಿಗೆ ಹಸ್ತಾಂತರಿಸಿದರು*
ನಂತರ ಅವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಮಹಿಳೆಯರಿಗೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ ಮಹಿಳೆ ಅಭಯ ಅಲ್ಲ ಸಬಲೇ ಎಂದು ನಿರೂಪಿಸುವಲ್ಲಿ ಧರ್ಮಸ್ಥಳ ಸಂಸ್ಥೆ ಶ್ರಮಿಸುತ್ತಿದೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದಿದ್ದು ಯೋಜನೆಯ ಸಹಕಾರದೊಂದಿಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ ಈ ಸಂಸ್ಥೆಯ ಸಹಕಾರದಿಂದ ಜನರ ಜೀವನಕ್ಕೆ ಅನುಕೂಲವಾಗುವಂತೆ, ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಶ್ಲಾಘನೀಯವಾಗಿದೆ ಅಲ್ಲದೆ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ್ದಾರೆ ಕೆರೆಗಳ ಹೂಳೆತ್ತುವ ಕಾರ್ಯಕ್ರಮ, ನಿರಾಶ್ರಿತರಿಗೆ ಮನೆ ನಿರ್ಮಾಣ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಸಹಾಯಧನ, ಸಮುದಾಯ ಭವನ ಕಟ್ಟಡ, ಕಲ್ಯಾಣ ಮಂಟಪ ಹಾಗೂ ಸ್ಮಶಾನ ಅಭಿವೃದ್ಧಿಗಾಗಿ ಮತ್ತು ಜ್ಞಾನದೀಪ ಕಾರ್ಯಕ್ರಮದಡಿಯಲ್ಲಿ ಶಾಲೆಗಳಿಗೆ ಅತಿಥಿ ಶಿಕ್ಷಕರ ನಿಯೋಜನೆ, ಕುಡಿತ ಬಿಡಿಸುವುದಕ್ಕಾಗಿ ಮದ್ಯವರ್ಜನ ಶಿಬಿರ, ವಿಶೇಷ ಚೇತನರಿಗೆ ವಿವಿಧ ಸಲಕರಣೆಗಳ ವಿತರಣೆ, ನಿರ್ಗತಿಗರಿಗೆ ಮಾಸಾಸನ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮೂಲಕ ಅನೇಕ ಜನ ಉಪಯೋಗಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಾ ಗ್ರಾಮೀಣ ಜನರ ಏಳಿಗೆಗಾಗಿ ಶ್ರಮಿಸುವ ಕಾರ್ಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಡೆಯವರು ಮಾಡುತ್ತಿದ್ದಾರೆ ಪೂಜ್ಯರ ಕೆಲಸ ಇಡೀ ದೇಶಕ್ಕೆ ಮಾದರಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖಾನಾಪುರ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಗಣಪತಿ ಡಿ ನಾಯ್ಕ ರವರು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತಂತೆ ಹಾಗೂ ವಿವಿಧ ಸೌಲಭ್ಯಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸುಬ್ರಮಣ್ಯ ದೇವಸ್ಥಾನ ಕಮಿಟಿ ಅಧ್ಯಕ್ಷರು ಶ್ರೀ ಬಾಬು ನಾಗಪ್ಪ ಪಾಟೀಲ್, ಪಿ ಎಲ್ ಡಿ ಬ್ಯಾಂಕ್ ನ ನಿರ್ದೇಶಕರಾದ ನಾರಾಯಣ ಪಾಟೀಲ್, ತಮ್ಮಣ್ಣ ಕೋಲ್ಕಾರ್ ಹಾಗೂ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರು ಊರಿನ ವಿವಿಧ ಗಣ್ಯರು ಗ್ರಾಮ ಪಂಚಾಯತ್ ಸದಸ್ಯರುಗಳು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಸ್ವಾಗತ ಕಾರ್ಯಕ್ರಮವನ್ನು ಸೇವಾ ಪ್ರತಿನಿಧಿ ಕಾವೇರಿ ಅವರು ಮತ್ತು ವಲಯದ ಮೇಲ್ವಿಚಾರಕರಾದ ಮಹಾಂತೇಶ್ ನಿರೂಪಿಸಿ ವಂದಿಸಿದರು
