
बेळगावच्या दोन कमांडोचा मृत्यू. नदी क्रॉसिंग प्रशिक्षणासाठी गेले असता घडली घटना.
बेळगाव : बेळगाव येथील कमांडो सेंटरच्या दोन कमांडोचा बोट उलटल्याने मृत्यू झाला. काल सकाळी बेळगाव येथील कमांडो प्रशिक्षण विभागाच्या जवानांना नदी क्रॉसिंग प्रशिक्षणासाठी तिलारी धरणाच्या बॅकवॉटरच्या परिसरात आणण्यात आले होते. त्यावेळी नदीत बोट उलटल्याने सदर दोन कमांडोंचा नदीत बुडून त्यांचा मृत्यू झाला.
नदी क्रॉसिंग प्रशिक्षण सुरु असतानाच बोट उलटली त्यामुळे बेळगाव येथील जेएल विंग कमांडो ट्रेनिंग सेंटरमधील 28 वर्षीय विजयकुमार दिनवाल राजस्थान, आणि 26 वर्षीय दिवाकर रॉय पश्चिम बंगाल, यांचा मृत्यू झाला. बोटीतून नदी पार करणाऱ्या सहा जवानांपैकी दोन जणांचा मृत्यू झाला आहे. तर चार जण सुखरूप आहेत. सदर घटनेची नोंद चंदगड पोलिस ठाण्यात झाली आहे.
ಬೆಳಗಾವಿಯಲ್ಲಿ ನದಿ ದಾಟುವ ತರಬೇತಿ ಪಡೆಯುತ್ತಿದ್ದ ಇಬ್ಬರು ಕಮಾಂಡೋಗಳ ನೀರಿನಲ್ಲಿ ಮುಳುಗಿ ಸಾವು.
ಬೆಳಗಾವಿ: ಬೋಟ್ ಮುಳುಗಿ ಬೆಳಗಾವಿಯ ಕಮಾಂಡೋ ಕೇಂದ್ರದ ಇಬ್ಬರು ಕಮಾಂಡೋಗಳು ಸಾವನ್ನಪ್ಪಿದ್ದಾರೆ. ನಿನ್ನೆ ಬೆಳಿಗ್ಗೆ ಬೆಳಗಾವಿಯ ಕಮಾಂಡೋ ತರಬೇತಿ ವಿಭಾಗದ ಸಿಬ್ಬಂದಿಯನ್ನು ನದಿ ದಾಟುವ ತರಬೇತಿಗಾಗಿ ತಿಲಾರಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಕ್ಕೆ ಕರೆತರಲಾಯಿತು. ಆ ವೇಳೆ ನದಿಯಲ್ಲಿ ದೋಣಿ ಮಗುಚಿ ಬಿದ್ದು ಇಬ್ಬರು ಕಮಾಂಡೋಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೆಳಗಾವಿಯ ಜೆಎಲ್ ವಿಂಗ್ ಕಮಾಂಡೋ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದ ರಾಜಸ್ಥಾನದ ವಿಜಯಕುಮಾರ್ ದಿನವಾಲ್ (28) ಮತ್ತು ಪಶ್ಚಿಮ ಬಂಗಾಳದ ದಿವಾಕರ್ ರಾಯ್ (26) ನದಿ ದಾಟುವ ತರಬೇತಿಯಲ್ಲಿದ್ದಾಗ ದೋಣಿ ಮಗುಚಿ ಮೃತಪಟ್ಟಿದ್ದಾರೆ. ದೋಣಿ ಮೂಲಕ ನದಿ ದಾಟಿದ ಆರು ಯೋಧರ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಸುರಕ್ಷಿತವಾಗಿದ್ದಾರೆ. ಈ ಘಟನೆ ಚಂದಗಢ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
