
कर्तव्यदक्ष निवृत्त एनएसजी ब्लॅक कॅट कमांडो सुरेश सनदी यांचा सन्मान! श्री महालक्ष्मी कमांडो आर्मी कोचिंग अकॅडमीला यश!
बेळगाव: जिद्द, चिकाटी आणि कठोर परिश्रम करण्याची तयारी असेल, तर कोणतीही व्यक्ती जगात कुठेही यशस्वी होऊ शकते. अशी अनेक उदाहरणे आपल्याला समाजात पाहायला मिळतात आणि अशी माणसे इतरांसाठी नेहमीच प्रेरणास्थान ठरतात. प्रतिकूल परिस्थितीवर आपल्या कर्तृत्वाने मात करून इतरांसमोर आदर्श निर्माण करणारी अशीच एक व्यक्ती म्हणजे निवृत्ती पश्चात अल्पशा दरात आर्मी ट्रेनिंग देणारे श्री महालक्ष्मी कमांडो आर्मी कोचिंग अकॅडमीचे प्रमुख व निवृत्त एनएसजी ब्लॅक कॅट कमांडो सुरेश सनदी हे होत.

भारतीय सेनेचे पूर्व सैनिक, एनएसजी ब्लॅक कॅट कमांडो, सुरेश सनदी यांनी निवृत्तीनंतरही समाजकार्यात स्वतःला झोकून दिले आहे. निवृत्तीनंतर त्यांनी पीरणवाडी येथे श्री महालक्ष्मी कमांडो आर्मी कोचिंग अकॅडमीची स्थापना केली असून, सैन्यात भरती होऊ इच्छिणाऱ्या युवकांना अगदी अल्पशा दरामध्ये ते प्रशिक्षण देत आहेत. यामध्ये विद्यार्थ्यांना वस्तीगृह, जेवण व ट्रॅक सूट सह अल्प दरात प्रशिक्षण दिले जात आहे. विशेष म्हणजे, ज्या युवकांना आई-वडील नाहीत अशा युवकांना व गरीब घरातील युवकांना त्यांच्या राहण्याचा व जेवणासह मोफत प्रशिक्षण देण्यास त्यांनी सुरुवात केली आहे. त्यामुळे त्यांच्याकडे कर्नाटक, गोवा, महाराष्ट्र, राजस्थान, केरळ, तामिळनाडू येथील विद्यार्थी प्रशिक्षण घेत आहेत.

याशिवाय, परीक्षेमध्ये 90% पेक्षा जास्त गुण मिळवलेल्या विद्यार्थ्यांना ते आपल्या अकॅडमीत बोलावून त्यांचा मान सन्मान करून प्रोत्साहन देत असतात. तसेच, मंदिरे व सार्वजनिक संस्थांना देणगी स्वरूपात आर्थिक मदतही ते करत असतात. भारत देशाची एकता, अखंडता आणि एकात्मता यासाठीही ते कार्यरत आहेत.

त्यांच्या या अतुलनीय कार्याची दखल घेत लेफ्टनंट जनरल, जनरल ऑफिसर कमांडिंग इन चीफ, दक्षिण कमान (General Officer Commanding in Chief, Southern Command) यांनी 19 जुलै 2025 रोजी त्यांना सन्मानित केले. याप्रसंगी त्यांना पारितोषक आणि मेडल देऊन गौरविण्यात आले, जो त्यांच्या समर्पित कार्याचा मोठा सन्मान आहे.
ಕರ್ತವ್ಯ ದಕ್ಷ ನಿವೃತ್ತ ಎನ್ಎಸ್ಜಿ ಬ್ಲಾಕ್ ಕ್ಯಾಟ್ ಕಮಾಂಡೋ ಶ್ರೀ ಸುರೇಶ್ ಸನದಿ ಅವರ ಸನ್ಮಾನ: ಶ್ರೀ ಮಹಾಲಕ್ಷ್ಮಿ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿಯ ಯಶಸ್ಸು!
ಬೆಳಗಾವಿ: ದೃಢ ಸಂಕಲ್ಪ, ಪರಿಶ್ರಮ ಮತ್ತು ಕಠಿಣ ಪರಿಶ್ರಮದಿಂದ ಯಾರಾದರೂ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಯಶಸ್ಸು ಸಾಧಿಸಬಹುದು. ಇಂತಹ ಅನೇಕ ಉದಾಹರಣೆಗಳನ್ನು ನಾವು ಕೇಳಿರುತ್ತೇವೆ ಅಥವಾ ನೋಡಿರುತ್ತೇವೆ ಆ ವ್ಯಕ್ತಿಗಳು ಯಾವಾಗಲೂ ಇತರರಿಗೆ ಸ್ಫೂರ್ತಿದಾಯಕರಾಗಿರುತ್ತಾರೆ.
ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ತಮ್ಮ ಸಾಧನೆಯ ಮೂಲಕ ಇತರರಿಗೆ ಮಾದರಿಯಾದ ಒಬ್ಬ ವ್ಯಕ್ತಿಯೆಂದರೆ ನಿವೃತ್ತಿಯ ನಂತರ ಕಡಿಮೆ ದರದಲ್ಲಿ ಸೇನಾ ತರಬೇತಿ ನೀಡುತ್ತಿರುವ ಶ್ರೀ ಮಹಾಲಕ್ಷ್ಮಿ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿಯ ಮುಖ್ಯಸ್ಥ ಎನ್ಎಸ್ಜಿ ಬ್ಲಾಕ್ ಕ್ಯಾಟ್ ಕಮಾಂಡೋ ನಿವೃತ್ತ ಸುರೇಶ್ ಸನದಿ.
ಭಾರತೀಯ ಸೇನೆಯ ಮಾಜಿ ಸೈನಿಕ, ಎನ್ಎಸ್ಜಿ ಬ್ಲಾಕ್ ಕ್ಯಾಟ್ ಕಮಾಂಡೋ, ಸುರೇಶ್ ಸನದಿ ಅವರು ನಿವೃತ್ತಿಯ ನಂತರವೂ ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನಿವೃತ್ತಿಯ ನಂತರ, ಅವರು ಪೀರಣವಾಡಿ ಗ್ರಾಮದ ಬಳಿ ಶ್ರೀ ಮಹಾಲಕ್ಷ್ಮಿ ಕಮಾಂಡೋ ಆರ್ಮಿ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಸೈನ್ಯಕ್ಕೆ ಸೇರಲು ಬಯಸುವ ಯುವಕರಿಗೆ ಅವರು ಅತ್ಯಂತ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಊಟ ಮತ್ತು ಟ್ರ್ಯಾಕ್ ಸೂಟ್ ಸಹಿತ ಕಡಿಮೆ ದರದಲ್ಲಿ ತರಬೇತಿ ನೀಡುತ್ತಾರೆ. ಹಾಗೆಯೇ. ಮುಖ್ಯವಾಗಿ, ತಂದೆ-ತಾಯಿ ಇಲ್ಲದ ಯುವಕರಿಗೆ ಮತ್ತು ಬಡ ಕುಟುಂಬಗಳ ಯುವಕರಿಗೆ ವಸತಿ ಮತ್ತು ಊಟದ ಜೊತೆಗೆ ಉಚಿತ ತರಬೇತಿ ನೀಡಲು ಅವರು ಪ್ರಾರಂಭಿಸಿದ್ದಾರೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ, ರಾಜಸ್ಥಾನ, ಕೇರಳ, ತಮಿಳುನಾಡು ರಾಜ್ಯಗಳ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇದಲ್ಲದೆ, ಪರೀಕ್ಷೆಗಳಲ್ಲಿ 90% ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ತಮ್ಮ ಅಕಾಡೆಮಿಗೆ ಕರೆಸಿ ಗೌರವಿಸಿ ಪ್ರೋತ್ಸಾಹಿಸುತ್ತಾರೆ. ಹಾಗೆಯೇ, ದೇವಾಲಯಗಳು ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ದೇಣಿಗೆ ರೂಪದಲ್ಲಿ ಆರ್ಥಿಕ ಸಹಾಯವನ್ನೂ ನೀಡುತ್ತಾರೆ. ಭಾರತ ದೇಶದ ಏಕತೆ, ಅಖಂಡತೆ ಮತ್ತು ಸಮಗ್ರತೆಗಾಗಿ ಸಹ ಅವರು ಶ್ರಮಿಸುತ್ತಿದ್ದಾರೆ.
ಅವರ ಈ ಅನನ್ಯ ಸೇವೆಯನ್ನು ಪರಿಗಣಿಸಿ, ದಕ್ಷಿಣ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಲೆಫ್ಟಿನೆಂಟ್ ಜನರಲ್ ಅವರು ಜುಲೈ 19, 2025 ರಂದು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅವರಿಗೆ ಪ್ರಶಸ್ತಿ ಮತ್ತು ಮೆಡಲ್ ನೀಡಿ ಗೌರವಿಸಲಾಯಿತು, ಇದು ಅವರ ಸಮರ್ಪಿತ ಕಾರ್ಯಕ್ಕೆ ದೊರೆತ ದೊಡ್ಡ ಗೌರವವಾಗಿದೆ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
