भीमगड अभयारण्यालगतच्या जामगावात युवकांकडून वीजवाहक तारेवरील झाडे हटवून खांब दुरुस्ती..
खानापूर, [28 जुलै]: खानापूर तालुक्यातील भीमगड अभयारण्याच्या कुशीत वसलेल्या आणि अति दुर्गम भागातील जामगाव येथील युवकांनी एक स्तुत्य उपक्रम राबवला आहे. दोन दिवस झालेल्या मुसळधार पाऊस व वादळ वाऱ्यामुळे जामगाव ते शिरोलीपर्यंतच्या विद्युत तारांवर पडलेली अनेक झाडे बाजूला करून, विद्युत खांबांची दुरुस्ती या युवकांनी केली. यामुळे परिसरातील वीजपुरवठा सुरळीत होण्यास मदत झाली आहे.
ग्रामपंचायत सदस्य दीपक गवाळकर यांच्या नेतृत्वाखाली गावातील युवावर्गाने व ग्रामस्थांनी या श्रमदानात उत्स्फूर्तपणे सहभाग घेतला होता. दुर्गम भाग असल्याने अनेकदा तांत्रिक अडचणींमुळे वीजपुरवठ्यात व्यत्यय येतो. अशा परिस्थितीत प्रशासनाच्या मदतीची वाट न पाहता, गावातील युवकांनी एकत्र येत स्वतःहून ही जबाबदारी उचलल्याने त्यांचे सर्वत्र कौतुक होत आहे.

ಭೀಮಗಢ ಅರಣ್ಯದ ಬಳಿ ಇರುವ ಜಾಮಗಾಂವಿನಲ್ಲಿ ಯುವಕರಿಂದ ಶ್ರಮದಾನ ಮಾಡುವ ಮೂಲಕ ವಿದ್ಯುತ್ ತಂತಿಗಳ ಮೇಲೆ ಬಿದ್ದ ಮರಗಳನ್ನು ತೆರವು ಕಾರ್ಯ ಹಾಗೂ, ಕಂಬ ದುರಸ್ತಿ
ಖಾನಾಪುರ, ಜುಲೈ 28: ಖಾನಾಪುರ ತಾಲೂಕಿನ ಅತ್ಯಂತ ದಟ್ಟ ಅರಣ್ಯ ಪ್ರದೇಶವಾದ ಭೀಮಗಢ ಅರಣ್ಯ ಪಕ್ಕದಲ್ಲಿ ಇರುವ ಜಾಮಗಾಂವ್ ಗ್ರಾಮದ ಯುವಕರು ಒಂದು ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಜಾಮಗಾವ್ ದಿಂದ ಶಿರೋಲಿ ಮಾರ್ಗದ ವಿದ್ಯುತ್ ತಂತಿಗಳ ಮೇಲೆ ಬಿದ್ದ ಮರಗಳನ್ನು ತೆರವು ಗೊಳಿಸಿ , ವಿದ್ಯುತ್ ಕಂಬಗಳನ್ನು ದುರಸ್ತಿ ಮಾಡುವ ಶ್ರಮದಾನವನ್ನು ಈ ಯುವಕರು ಕೈಗೊಂಡಿದ್ದಾರೆ. ಇದರ ಪರಿಣಾಮವಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಸುಗಮವಾಗಿದೆ.
ಈ ಕಾರ್ಯವು ಗ್ರಾಮಪಂಚಾಯತ್ ಸದಸ್ಯ ದೀಪಕ ಗವಾಳಕರ ಅವರ ನೇತೃತ್ವದಲ್ಲಿ ನಡೆದು. ಗ್ರಾಮದ ಯುವಕರು ಮತ್ತು ಗ್ರಾಮಸ್ಥರು ಉತ್ಸಾಹದಿಂದ ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಈ ಪ್ರದೇಶವು ದುರ್ಗಮವಾಗಿರುವುದರಿಂದ ಹೆಚ್ಚಾಗಿ ತಾಂತ್ರಿಕ ಸಮಸ್ಯೆಗಳ ಕಾರಣದಿಂದ ವಿದ್ಯುತ್ ಪೂರೈಕೆ ಅಡಚಣೆಗೆ ಒಳಗಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಆಡಳಿತದ ನಿರೀಕ್ಷೆಯಿಲ್ಲದೆ ಗ್ರಾಮ ಯುವಕರು ಸ್ವಯಂಪ್ರೇರಿತವಾಗಿ ಈ ಕೆಲಸದಲ್ಲಿ ತೊಡಗಿದ್ದು, ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರವಾಗುತ್ತಿದ್ದಾರೆ.

