 
 
कर्नाटक परिवहन कर्मचाऱ्यांचा संप; बससेवा ठप्प – प्रवासी, विद्यार्थी वर्गाची मोठी पंचाईत
बेळगाव (ता. 5 ऑगस्ट): कर्नाटक राज्य परिवहन महामंडळाच्या कर्मचाऱ्यांनी विविध मागण्यांसाठी आज मंगळवारपासून अनिश्चित काळाचा संप पुकारला आहे. या संपामुळे राज्यातील बससेवा पूर्णतः ठप्प झाली असून, सामान्य प्रवासी, विद्यार्थी व कामगार वर्गाचे प्रचंड हाल सुरू आहेत.
आज सकाळपासूनच बेळगाव बस स्थानकातून एकही बस बाहेर पडलेली नाही. परिणामी, महाराष्ट्रात जाणाऱ्या तसेच महाराष्ट्रातून येणाऱ्या प्रवाशांची मोठी अडचण झाली आहे. विशेषतः शिक्षणासाठी आणि नोकरीनिमित्त येणाऱ्या विद्यार्थ्यांना व कामगार वर्गाला खासगी वाहतुकीचा पर्याय शोधावा लागत आहे. अनेकांना टेम्पो किंवा रिक्षांच्या मदतीने प्रवास करावा लागत आहे.
बेळगाव विभागातून दररोज सुमारे 700 बस तर चिकोडी विभागातून 668 बस रस्त्यावर धावत असतात. मात्र, चार हजाराहून अधिक कर्मचारी संपावर गेल्यामुळे संपूर्ण वाहतूक व्यवस्था कोलमडली आहे.
परिवहन विभागाने बसचालक व वाहकांना कामावर हजर राहण्याचे आवाहन केले असले तरी त्याला अत्यल्प प्रतिसाद मिळाला आहे. बस स्थानकावर ठिय्या मांडून बसलेले प्रवासी तासनतास वाट पाहत आहेत.
या पार्श्वभूमीवर, बेळगाव बस स्थानक परिसरात तसेच शहरात कोणतीही अनुचित घटना घडू नये म्हणून पोलीस बंदोबस्त वाढवण्यात आला आहे.
कर्नाटक-महाराष्ट्र दरम्यानची बससेवा ठप्प झाल्यामुळे दोन्ही राज्यांतील प्रवाशांना खासगी वाहनांवर अवलंबून राहावे लागत आहे. नागरिक व विद्यार्थी वर्गांनी यामुळे तीव्र नाराजी व्यक्त केली आहे.
ಕರ್ನಾಟಕ ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ಆರಂಭ; ಬಸ್ ಸಂಚಾರ ಸಂಪೂರ್ಣ ಅಸ್ತವ್ಯಸ್ತ – ಪ್ರಯಾಣಿಕರು, ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ
ಬೆಳಗಾವಿ (ಆ. ೫): ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ಸಾರಿಗೆ ನೌಕರರು ಇಂದು ಮಂಗಳವಾರದಿಂದ ಅನಿರ್ದಿಷ್ಟಾವಧಿಯ ಮುಷ್ಕರ ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ಬಹುತೇಕ ಬಸ್ ಸಂಚಾರ ಸಂಪೂರ್ಣವಾಗಿ ಹಸ್ತವ್ಯಸ್ತಗೊಂಡಿದ್ದು, ಸಾಮಾನ್ಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗ ತೀವ್ರ ತೊಂದರೆಗೆ ಒಳಗಾಗಿದ್ದಾರೆ.
ಬೆಳಗಾವಿ ಬಸ್ ನಿಲ್ದಾಣದಿಂದ ಇಂದು ಬೆಳಿಗ್ಗೆಯಿಂದ ಯಾವುದೇ ಬಸ್ ಹೊರಟಿಲ್ಲ. ಮಹಾರಾಷ್ಟ್ರಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಪ್ರಯಾಣಿಕರಿಗೆ ಈ ಕಾರಣದಿಂದ ಬಹಳ ಅಡಚಣೆ ಉಂಟಾಗಿದೆ. ವಿಶೇಷವಾಗಿ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಸಂಚರಿಸುವ ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಖಾಸಗಿ ಸಾರಿಗೆಯ ಆಯ್ಕೆ ಹುಡುಕುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹಲವರು ಟೆಂಪೋ ಅಥವಾ ಆಟೋಗಳಿಂದ ಪ್ರಯಾಣಿಸಲು ಮುಂದಾಗಿದ್ದಾರೆ.
ಬೆಳಗಾವಿ ವಿಭಾಗದಿಂದ ದಿನಾಲೂ ಸುಮಾರು ೭೦೦ ಬಸ್ಸುಗಳು ಹಾಗೂ ಚಿಕ್ಕೋಡಿ ವಿಭಾಗದಿಂದ ೬೬೮ ಬಸ್ಸುಗಳು ಸಂಚರಿಸುತ್ತಿದ್ದವು. ಆದರೆ ನಾಲ್ಕು ಸಾವಿರಕ್ಕೂ ಹೆಚ್ಚು ನೌಕರರು ಮುಷ್ಕರಕ್ಕೆ ಇಳಿದ ಕಾರಣ, ಸಂಪೂರ್ಣ ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಸಾರಿಗೆ ಇಲಾಖೆ ಚಾಲಕರ ಮತ್ತು ನಿರ್ವಾಹಕರಿಗೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದರೂ, ಅದಕ್ಕೆ ಅತಿ ಕಡಿಮೆ ಪ್ರತಿಕ್ರಿಯೆ ಲಭಿಸಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕುಳಿತೇ ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಈ ಹಿನ್ನೆಲೆ ಬೆಳಗಾವಿ ಬಸ್ ನಿಲ್ದಾಣ ಹಾಗೂ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ.
ಕರ್ನಾಟಕ-ಮಹಾರಾಷ್ಟ್ರ ಮಧ್ಯೆ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿರುವ ಕಾರಣ, ಎರಡು ರಾಜ್ಯಗಳ ಪ್ರಯಾಣಿಕರು ಖಾಸಗಿ ವಾಹನಗಳ ಮೇಲೆ ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ದುಸ್ಥಿತಿಗೆ ನಾಗರಿಕರು ಮತ್ತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
 
 
         
                                 
                             
 
         
         
         
        