 
 
खानापूर शहर उजळणार! उच्च क्षमतेच्या हायमास्क पथदीपांचे आमदार विठ्ठल हलगेकर यांच्या हस्ते उद्घाटन.
खानापूर : खानापूर शहराच्या विकासात्मक दृष्टीने महत्त्वपूर्ण पाऊल उचलण्यात आले असून, नगरपंचायतीच्या फंडातून उभारण्यात आलेल्या उच्च क्षमतेच्या हायमास्क पथदीपांचे उद्घाटन सोमवारी (दि. सप्टेंबर 2025) खानापूरचे आमदार विठ्ठल हलगेकर व नगरपंचायतीच्या अध्यक्षा मीनाक्षी बैलूरकर यांच्या हस्ते करण्यात आले.
या उपक्रमांतर्गत राजा शिवछत्रपती चौक, बसवेश्वर सर्कल जांबोटी क्रॉस, तसेच टिपू सुलतान चौक पारिषवाड क्रॉस या महत्त्वाच्या चौकांवर हायमास्क पथदीप उभारण्यात आले आहेत. त्यामुळे खानापूर शहराच्या वैभवात भर पडून नागरिकांना उजळलेले आणि सुरक्षित वातावरण मिळणार आहे.
कार्यक्रमाप्रसंगी आमदार विठ्ठल हलगेकर म्हणाले की, “या उच्च क्षमतेच्या पथदीपांमुळे शहर उजळून निघणार असून, खानापूरच्या विकासासाठी अनेक योजनांतून अनुदान मंजूर करण्यात आले आहे. मारुती नगरमधील सर्व सीसी रस्ते पूर्ण झाले असून, शहरातील अनेक रस्त्यांसाठी अनुदान मिळाले आहे. लवकरच या रस्त्यांच्या कामालाही प्रारंभ होणार आहे.”
कार्यक्रमाचे प्रास्ताविक व स्वागत नगरसेवक प्रकाश बैलूरकर यांनी केले. या वेळी नगरपंचायतीच्या उपनगराध्यक्षा जया भूतकी, स्थायी समितीचे चेअरमन आप्पया कोडोळी, मुख्याधिकारी संतोष कुरबेट, माजी नगराध्यक्ष व नगरसेवक मझर खानापुरी, नगरसेवक लक्ष्मण मादार, वीनोद पाटील, रफिक वारीमनी, प्रकाश बैलूरकर, नारायण ओगले, तोहीद चांदकन्नवर, नगरसेविका मेघा कुंदरगी, लता पाटील, लक्ष्मी अंकलगी, भाजपाचे जनरल सेक्रेटरी गुंडू तोपिनकट्टी, तसेच अमृत पाटील, रवी काडगी यांच्यासह नगरपंचायतीचे अधिकारी अभियंता तिरुपती राठोड, गंगाधर कांबळे, प्रेमानंद नाईक, राजू जांबोटी, मोहसीन बडेघर उपस्थित होते.
या सोहळ्याला नगरसेवक-नगरसेविका, कर्मचारीवर्ग व नागरिक मोठ्या संख्येने हजर होते.
ಖಾನಾಪುರ ನಗರ ಬೆಳಕಿನಿಂದ ಕಂಗೊಳಿಸುತ್ತಿದೆ! ಶಾಸಕರಾದ ವಿಠ್ಠಲ್ ಹಲಗೇಕರ್ ಅವರ ಹಸ್ತದಿಂದ ಹೈಮಾಸ್ಟ್ ದೀಪಗಳ ಉದ್ಘಾಟನೆ
ಖಾನಾಪುರ : ಖಾನಾಪುರ ನಗರದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಹೆಜ್ಜೆ ಇಡಲಾಗಿದ್ದು, ನಗರ ಪಂಚಾಯಿತಿಯ ನಿಧಿಯಿಂದ ಸ್ಥಾಪಿಸಲಾದ ಹೆಚ್ಚಿನ ಸಾಮರ್ಥ್ಯದ ಹೈಮಾಸ್ಟ್ ದೀಪಗಳ ಉದ್ಘಾಟನೆಯನ್ನು ಸೋಮವಾರ (ಸೆಪ್ಟೆಂಬರ್ 2025) ಖಾನಾಪುರದ ಶಾಸಕರಾದ ವಿಠ್ಠಲ್ ಹಲಗೇಕರ್ ಹಾಗೂ ನಗರ ಪಂಚಾಯಿತಿಯ ಅಧ್ಯಕ್ಷೆ ಮೀನಾಕ್ಷಿ ಬೈಲೂರಕರ ಅವರ ಹಸ್ತದಿಂದ ನೆರವೇರಿತು.
ಈ ಯೋಜನೆಯಡಿ ರಾಜಾ ಶಿವಛತ್ರಪತಿ ಚೌಕ, ಬಸವೇಶ್ವರ ಸರ್ಕಲ್ ಜಾಂಬೋಟಿ ಕ್ರಾಸ್ ಹಾಗೂ ಟಿಪ್ಪು ಸುಲ್ತಾನ್ ಚೌಕ ಪಾರಿಷವಾಡ ಕ್ರಾಸ್ ಮೊದಲಾದ ಪ್ರಮುಖ ಚೌಕಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ಖಾನಾಪುರ ನಗರದ ಸೊಬಗು ಹೆಚ್ಚಿ, ನಾಗರಿಕರಿಗೆ ಪ್ರಕಾಶಮಾನ ಹಾಗೂ ಸುರಕ್ಷಿತ ವಾತಾವರಣ ಲಭ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಶಾಸಕರಾದ ವಿಠ್ಠಲ್ ಹಲಗೇಕರ್ ಮಾತನಾಡಿ, “ಈ ಹೆಚ್ಚಿನ ಸಾಮರ್ಥ್ಯದ ದೀಪಗಳಿಂದ ನಗರ ಕಂಗೊಳಿಸಲಿದೆ, ಅದೇ ರೀತಿ ಖಾನಾಪುರದ ಅಭಿವೃದ್ಧಿಗೆ ಅನೇಕ ಯೋಜನೆಗಳ ಮೂಲಕ ಅನುದಾನ ಮಂಜೂರಾಗಿದೆ ಹಾಗೂ ಮಾರುತಿ ನಗರದಲ್ಲಿನ ಎಲ್ಲಾ ಸಿಸಿ ರಸ್ತೆಗಳು ಪೂರ್ಣಗೊಂಡಿದ್ದು, ನಗರದ ಹಲವು ರಸ್ತೆಗಳಿಗೆ ಸಹ ಅನುದಾನ ದೊರೆತಿದೆ. ಶೀಘ್ರದಲ್ಲೇ ಆ ರಸ್ತೆಗಳ ಕಾಮಗಾರಿ ಆರಂಭವಾಗಲಿದೆ” ಎಂದರು.
ಕಾರ್ಯಕ್ರಮದ ಪ್ರಸ್ತಾವನೆ ಮತ್ತು ಸ್ವಾಗತವನ್ನು ನಗರಸಭಾ ಸದಸ್ಯರಾದ ಪ್ರಕಾಶ ಬೈಲೂರಕರ ನೆರವೇರಿಸಿದರು. ಈ ವೇಳೆ ನಗರ ಪಂಚಾಯಿತಿ ಉಪಾಧ್ಯಕ್ಷೆ ಜಯಾ ಭೂತಕಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಪ್ಪಯ್ಯ ಕೊಡೋಳಿ, ಮುಖ್ಯಾಧಿಕಾರಿ ಸಂತೋಷ ಕುರ್ಬೇಟ, ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಮಝರ್ ಖಾನಾಪುರಿ, ಸದಸ್ಯರಾದ ಲಕ್ಷ್ಮಣ ಮಾದಾರ, ವಿನೋದ ಪಾಟೀಲ, ರಫಿಕ್ ವಾರಿಮಣಿ, ಪ್ರಕಾಶ ಬೈಲೂರಕರ, ನಾರಾಯಣ ಒಗಲೆ ,ತೋಹೀದ್ ಚಾಂದಕನ್ನವರ, ಸದಸ್ಯೆಯರಾದ ಮೇಘಾ ಕುಂದರ್ಗಿ, ಲತಾ ಪಾಟೀಲ, ಲಕ್ಷ್ಮಿ ಅಂಕಲಗಿ, ಬಿಜೆಪಿ ಜನರಲ್ ಸೆಕ್ರೆಟರಿ ಗುಂಡು ತೋಪಿಣಕಟ್ಟಿ, ಜೊತೆಗೆ ಅಮೃತ ಪಾಟೀಲ, ರವಿ ಕಾಡಗಿ ಹಾಜರಿದ್ದರು.
ಅದೇ ರೀತಿ ನಗರ ಪಂಚಾಯಿತಿಯ ಇಂಜಿನಿಯರ್ಗಳಾದ ತಿರುಪತಿ ರಾಠೋಡ್, ಗಂಗಾಧರ ಕಾಂಬಳೆ, ಪ್ರೇಮಾನಂದ ನಾಯ್ಕ, ರಾಜು ಜಾಂಬೋಟಿ, ಮೊಹಸಿನ್ ಬಡೆಘರ್ ಉಪಸ್ಥಿತರಿದ್ದರು.
ಈ ಸಮಾರಂಭಕ್ಕೆ ನಗರಸಭಾ ಸದಸ್ಯರು, ಸಿಬ್ಬಂದಿವರ್ಗ ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
 
 
 
         
                                 
                             
 
         
         
         
        