खानापूर नगरपंचायतीकडून पारंपरिक पूजाविधीला फाटा! नगरसेवक व अधिकारी झोपी गेले आहेत का! नागरिकांतून संताप!
खानापूर ; (दिनकर मरगाळे)
खानापूर शहरातून वाहणाऱ्या श्री मलप्रभा नदीची पूजा आणि ओटी अर्पण करण्याचा पारंपरिक विधी मागील तीन वर्षांपासून नगरपंचायतीने थांबविल्याने शहरातील नागरिक व महिलांमध्ये संतापाची लाट उसळली आहे.
प्रत्येक वर्षी पावसाळ्याच्या सुरुवातीला, मलप्रभा नदीला पहिले पुराचे पाणी आल्यावर खानापूर नगरपंचायतीच्या वतीने नगराध्यक्ष व तालुक्याचे आमदार यांच्या हस्ते नदीची पूजा, ओटी अर्पण आणि पाणीपुरवठा यंत्रसामुग्रीची विधिवत पूजा केली जात असे. हा विधी खानापूरच्या नगरपरंपरेचा एक अविभाज्य भाग मानला जातो.
परंतु, आमदार विठ्ठल हलगेकर यांच्या कार्यकाळापासून मागील दोन वर्षे आणि यंदाही तिसरे वर्ष, हा पूजाविधी नगरपंचायतीकडून पार पडलेला नाही. पावसाळा संपत आला असला तरी यावर्षीदेखील नगराध्यक्ष, नगरसेवक आणि अधिकारी याकडे दुर्लक्ष करत असल्याने नागरिकांकडून तीव्र नाराजी व्यक्त होत आहे.
उन्हाळ्यात पाणीटंचाई, पावसाळ्यात पारंपरिक विधी.
उन्हाळ्यात मलप्रभा नदी पूर्णपणे कोरडी पडते. त्याचा परिणाम शहराच्या नळपाणी पुरवठ्यावर होतो. परंतु, पावसाळा सुरू होताच नदीला पहिले पाणी आल्यावर नगराध्यक्ष व आमदारांच्या उपस्थितीत नदीची पूजा केली जात असे. या कार्यक्रमात पाणीपुरवठा यंत्रसामुग्री, जॉकवेलजवळील पाण्याच्या मोटारींचीही पूजा केली जाई. ही परंपरा आजवर कधीही खंडीत झालेली नव्हती. मात्र, गेल्या तीन वर्षांत
नगरपंचायतीने या विधीला पूर्णतः फाटा मारला आहे.
नागरिकांचा संताप
गेल्या चार दिवसांपासून तालुक्यात मुसळधार पाऊस पडत असल्याने मलप्रभा नदी तुडुंब भरून वाहू लागली आहे. याच पार्श्वभूमीवर नागरिक म्हणतात, “नगराध्यक्ष, नगरसेवक व अधिकारी झोपी गेले आहेत का? आम्ही तुम्हाला यासाठीच निवडून दिले आहे का?” असा संतप्त सवाल महिलांसह नागरिकांनी केला आहे.
नागरिकांची मागणी
खानापूर नगरपंचायतीने या परंपरेला कमी लेखणे म्हणजे शहराच्या श्रद्धा व परंपरेवर घाला असल्याचे नागरिकांचे मत आहे. त्यामुळे तात्काळ हा पारंपरिक पूजाविधी सुरू करून नागरिकांचा भावनिक व सांस्कृतिक सन्मान राखावा, अशी मागणी शहरातून जोर धरू लागली आहे.
👉 नगरपंचायतीच्या सध्याच्या कारभारावर प्रश्नचिन्ह उपस्थित करत नागरिकांकडून तीव्र प्रतिक्रिया उमटत असून, पारंपरिक पूजाविधी तातडीने सुरू करण्याची मागणी वेगाने वाढू लागली आहे.
ಖಾನಾಪುರ ಪಟ್ಟಣ ಪಂಚಾಯತದಿಂದ ಪರಂಪರೆಯ ಪೂಜಾ ವಿಧಿಗೆ ಪೂರ್ಣವಿರಾಮವೆ! ಪಟ್ಟಣಸಭಾ ಸದಸ್ಯರು ಹಾಗೂ ಅಧಿಕಾರಿಗಳು ನಿದ್ರಾಾವಸ್ತಿಯಲ್ಲಿಯೇ? ನಾಗರಿಕರಲ್ಲಿ ಆಕ್ರೋಶ!
ಖಾನಾಪುರ ; (ದಿನಕರ ಮರಗಾಳೆ)
ಖಾನಾಪುರ ಪಟ್ಟಣದೊಳಗೆ ಹರಿಯುವ ಶ್ರೀ ಮಲ್ಲಪ್ರಭಾ ನದಿಯ ಪೂಜೆ ಹಾಗೂ “ ಬಾಗಿನ ಅರ್ಪಿಸುವ ಪರಂಪರೆಯ ವಿಧಿ ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತದಿಂದ ನಿಲ್ಲಿಸಲಾಗಿದೆ. ಇದರಿಂದ ಪಟ್ಟಣದ ನಾಗರಿಕರು ಹಾಗೂ ಮಹಿಳೆಯರಲ್ಲಿ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪ್ರತಿ ವರ್ಷ ಮಳೆ ಪ್ರಾರಂಭದಲ್ಲಿ ಮಲ್ಲಪ್ರಭಾ ನದಿಗೆ ಮೊದಲ ಬಾರಿ ನೀರು ಹರಿದು ಬಂದಾಗ ಪಟ್ಟಣ ಪಂಚಾಯತಿಯ ವತಿಯಿಂದ ನಗರಾಧ್ಯಕ್ಷರು ಹಾಗೂ ತಾಲ್ಲೂಕಿನ ಶಾಸಕರ ಹಸ್ತದಿಂದ ನದಿಪೂಜೆ, ಬಾಗಿನ ಅರ್ಪಣೆ ಹಾಗೂ ನೀರು ಸರಬರಾಜು ಯಂತ್ರೋಪಕರಣಗಳ ಪೂಜೆ ನಡೆಯುತ್ತಿತ್ತು. ಈ ಕಾರ್ಯಕ್ರಮವನ್ನು ಖಾನಾಪುರದ ಪಟ್ಟಣ ಪಂಚಾಯಿತಿಯ ಪರಂಪರೆಯ ಅವಿಭಾಜ್ಯ ಅಂಗವಾಗಿ ಪರಿಗಣಿಸಲಾಗುತ್ತಿತ್ತು.
ಆದರೆ, ಶಾಸಕರಾದ ವಿಠ್ಠಲ ಹಲಗೆಕರ ಅವರ ಅಧಿಕಾರಾವಧಿಯಿಂದ ಕಳೆದ ಎರಡು ವರ್ಷಗಳು ಹಾಗೂ ಈ ವರ್ಷವೂ ಕೂಡ ಈ ಪೂಜಾ ವಿಧಿಗಳನ್ನು ಕೈ ಬಿಡಲಾಗಿದೆ. ಮಳೆಯ ಕಾಲ ಮುಗಿಯುವ ಹಂತದಲ್ಲಿದ್ದರೂ ಈ ಬಾರಿಯೂ ಸಹ ಪಟ್ಟಣಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದರಿಂದ ನಾಗರಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
☔ ಬೇಸಿಗೆಯಲ್ಲಿ ನೀರಿನ ತೊಂದರೆ – ಮಳೆಯ ಕಾಲದಲ್ಲಿ ಪರಂಪರೆಯ ಪೂಜೆ!
ಬೇಸಿಗೆಯಲ್ಲಿ ಮಲ್ಲಪ್ರಭಾ ನದಿ ಸಂಪೂರ್ಣವಾಗಿ ಒಣಗಿಹೋಗುತ್ತದೆ. ಇದರ ಪರಿಣಾಮವಾಗಿ ಪಟ್ಟಣದ ಕುಡಿಯುವ ನೀರಿನ ಪೂರೈಕೆ ಅಸ್ತವ್ಯಸ್ತವಾಗುತ್ತದೆ. ಆದರೆ, ಮಳೆ ಗಾಲ ಆರಂಭವಾದೊಡನೆ ನದಿಗೆ ಮೊದಲ ನೀರು ಹರಿದಾಗ ನಗರ ಅಧ್ಯಕ್ಷರು ಮತ್ತು ಶಾಸಕರ ಸಮ್ಮುಖದಲ್ಲಿ ಪೂಜಾ ವಿಧಿ ನಡೆಯುತ್ತಿತ್ತು. ಈ ವೇಳೆ ನೀರು ಪೂರೈಕೆ ಉಪಕರಣಗಳು, ಜಾಕ್ವೆಲ್ ಹತ್ತಿರದ ನೀರಿನ ಮೋಟಾರ್ಗಳಿಗೂ ಪೂಜೆ ಮಾಡಲಾಗುತ್ತಿತ್ತು. ಈ ಸಂಪ್ರದಾಯ ಇದುವರೆಗೂ ಎಂದಿಗೂ ಅಡ್ಡಿಯಾಗಿರಲಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತಿ ಈ ವಿಧಿಗೆ ಸಂಪೂರ್ಣವಾಗಿ ಮರೆತಂತಾಗಿದೆ .
😡 ನಾಗರಿಕರ ಆಕ್ರೋಶ
ಕಳೆದ ನಾಲ್ಕು ದಿನಗಳಿಂದ ತಾಲ್ಲೂಕಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಲ್ಲಪ್ರಭಾ ನದಿ ತುಂಬಿ ಹರಿಯುತ್ತಿದೆ. ಇದೇ ಹಿನ್ನೆಲೆ ನಾಗರಿಕರು, “ನಗರಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ನಿದ್ರಿಸಿದ್ದಾರೆಯೇ? ನಿಮ್ಮನ್ನು ನಾವು ಇದಕ್ಕಾಗಿ ಆಯ್ಕೆ ಮಾಡಿದ್ದೇವೇ?” ಎಂದು ಮಹಿಳೆಯರೊಂದಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
🙏 ನಾಗರಿಕರ ಬೇಡಿಕೆ
ಖಾನಾಪುರ ಪಟ್ಟಣ ಪಂಚಾಯತದಿಂದ ಈ ಪರಂಪರೆಯನ್ನು ಕಡಿಮೆ ಮಾಡುವುದು ಅಂದರೆ ಪಟ್ಟಣದ ನಂಬಿಕೆ ಹಾಗೂ ಪರಂಪರೆಯ ಮೇಲೆ ಹೊಡೆತ ನೀಡಿದಂತಾಗಿದೆ ಎಂದು ನಾಗರಿಕರ ಅಭಿಪ್ರಾಯ. ಆದ್ದರಿಂದ ತಕ್ಷಣವೇ ಈ ಪರಂಪರೆಯ ಪೂಜಾ ವಿಧಿಯನ್ನು ಆರಂಭಿಸಿ ನಾಗರಿಕರ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಗೌರವವನ್ನು ಕಾಪಾಡಬೇಕೆಂಬ ಬೇಡಿಕೆ ಪಟ್ಟಣದಿಂದ ಗಟ್ಟಿಯಾಗಿ ಕೇಳಿ ಬರುತ್ತಿದೆ.
👉 ಪಟ್ಟಣ ಪಂಚಾಯತಿಯ ಪ್ರಸ್ತುತ ಕಾರ್ಯವೈಖರಿಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿದ್ದು, ಪರಂಪರೆಯ ಪೂಜಾ ವಿಧಿಯನ್ನು ತಕ್ಷಣ ಪ್ರಾರಂಭಿಸಬೇಕೆಂಬ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ.



