बेळगाव अमननगरमध्ये दुर्दैवी घटना : थंडीपासून बचावासाठी पेटवलेल्या शेगडीमुळे गुदमरून तीन तरुणांचा मृत्यू; एक अत्यवस्थ.
बेळगाव (प्रतिनिधी) : बेळगाव शहरातील अमननगर परिसरात मंगळवारी सायंकाळी घडलेल्या हृदयद्रावक घटनेत तीन तरुणांचा कार्बन मोनोऑक्साइड वायूच्या श्वासामुळे मृत्यू झाला आहे. खोलीत थंडीपासून बचाव करण्यासाठी कोळशाची शेगडी पेटवून झोपल्याने खोलीतील हवा विषारी बनली आणि झोपेतच तिघांचा श्वास गुदमरला. या दुर्दैवी घटनेने परिसरात शोककळा पसरली आहे.
प्रारंभिक तपासानुसार, मृत तरुणांची ओळख रीहान मते (वय २२), सरफराज हरपणहळ्ळी (वय २२) आणि मोईन नालबंद (वय २३) अशी पटली आहे. तसेच या घटनेत गंभीर जखमी झालेल्या शहानवाज (वय १९) याच्यावर जिल्हा रुग्णालयात उपचार सुरू असून त्याची प्रकृती चिंताजनक असल्याचे सांगण्यात येत आहे. हे चारही मित्र एकाच खोलीत राहत होते.
बेळगावमध्ये गेल्या काही दिवसांपासून थंडीचा कडाका वाढला आहे. थंडीपासून बचाव करण्यासाठी या मित्रांनी झोपण्यापूर्वी खोलीत कोळशाची शेगडी पेटवून घेतली आणि दरवाजे–खिडक्या पूर्णपणे बंद केल्या. कोळसा जळाल्यानंतर निर्माण होणाऱ्या कार्बन मोनोऑक्साइड या रंगहीन, गंधहीन आणि अत्यंत घातक वायूमुळे खोलीतील ऑक्सिजनचे प्रमाण झपाट्याने कमी झाले. झोपेत असल्याने वायूचा परिणाम लक्षात न आल्याने तिघांचा श्वास गुदमरून मृत्यू झाला.
घटनेची माहिती मिळताच पोलीस आयुक्त भूषण बोरसे यांनी माळमारुती पोलीस स्थानकाच्या पथकासह घटनास्थळी भेट दिली. त्यांनी सांगितले की,
“थंडीपासून बचाव करण्यासाठी बंद खोलीत कोळशाची शेगडी पेटवून झोपल्याने कार्बन मोनोऑक्साइड वायूचा परिणाम होऊन तिघांचा मृत्यू झाला असावा. एकजण उपचाराधीन आहे. घटनेचा पुढील तपास सुरू आहे.”
या वेळी घटनास्थळी भेट दिलेल्या आमदार असिफ सेठ यांनीही या दुर्घटनेबाबत शोक व्यक्त केला. त्यांनी सांगितले की,
“चारही तरुण एका कौटुंबिक कार्यक्रमावरून परतल्यानंतर शेगडी पेटवून झोपले. धुराचे प्रमाण वाढल्याने तिघांचा मृत्यू झाला असून एकाची प्रकृती गंभीर आहे. ही अत्यंत वेदनादायी घटना आहे.”
माळमारुती पोलीसांनी मृतदेहांचा पंचनामा करून अधिक तपास सुरू केला आहे.
या दुर्घटनेनंतर अमननगर परिसरात हळहळ व्यक्त होत असून थंडीच्या दिवसांत निष्काळजीपणामुळे जीवघेणा धोका निर्माण होऊ शकतो, याबाबत नागरिकांनी अधिक सतर्क राहण्याची गरज असल्याची भावना व्यक्त करण्यात येत आहे. थंडीत शेकोटी किंवा शेगडीचा वापर करताना खोली हवेशीर ठेवणे किती महत्त्वाचे आहे — हे या घटनेने पुन्हा एकदा अधोरेखित झाले आहे.
ಬೆಳಗಾವಿ ಅಮನನಗರದಲ್ಲಿ ದುರ್ಘಟನಾತ್ಮಕ ಘಟನೆ : ಚಳಿಯಿಂದ ತಪ್ಪಿಸಿಕೊಳ್ಳಲು ಹಚ್ಚಿದ ಇದಲಿ ಉರಿಸಿದ ಪರಿಣಾಮ ಉಸಿರುಗಿಟ್ಟಿಸಿ ಮೂವರು ಯುವಕರ ಮರಣ; ಒಬ್ಬರ ಸ್ಥಿತಿ ಗಂಭೀರ
ಬೆಳಗಾವಿ (ವರದಿಗಾರ್) : ಬೆಳಗಾವಿ ನಗರದ ಅಮನನಗರ ಪ್ರದೇಶದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಹೃದಯವಿದ್ರಾವಕ ಘಟನೆಯಲ್ಲಿ ಮೂವರು ಯುವಕರು ಕಾರ್ಬನ್ ಮೊನಾಕ್ಸೈಡ್ ಅನಿಲದ ಪರಿಣಾಮದಿಂದ ಉಸಿರುಗಟ್ಟಿಸಿ ಮೃತರಾಗಿದ್ದಾರೆ. ಚಳಿಯಿಂದ ರಕ್ಷಿಸಿಕೊಳ್ಳಲು ಕೋಣೆಯೊಳಗೆ ಕೆಂಡದ ಶೆಗಡಿ ಹಚ್ಚಿ ನಿದ್ರೆಗೆ ಜಾರಿದ ಪರಿಣಾಮ ಕೊಠಡಿಯ ಗಾಳಿ ವಿಷಕಾರಿ ಆಗಿದ್ದು, ನಿದ್ರೆಯಲ್ಲೇ ಮೂವರ ಪ್ರಾಣ ಹೋಗಿದೆ. ಈ ದುರ್ಘಟನೆಯಿಂದ ಭಾಗದಲ್ಲಿ ಶೋಕಕವಿದ ವಾತಾವರಣ ನಿರ್ಮಾಣವಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಮೃತರಾದ ಯುವಕರ ಗುರುತನ್ನು ರಿಹಾನ್ ಮತೇ (ವಯಸ್ಸು 22), ಸರಫರಾಜ್ ಹರಪಣಹಳ್ಳೀ (ವಯಸ್ಸು 22) ಮತ್ತು ಮೊಯಿನ್ ನಾಲಬಂದ್ (ವಯಸ್ಸು 23) ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಶಾಹನವಾಜ್ (ವಯಸ್ಸು 19) ಎಂಬ ಯುವಕನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದು, ಅವನ ಆರೋಗ್ಯ ಸ್ಥಿತಿ ಚಿಂತಾಜನಕ ಸ್ಥಿತಿಯಲ್ಲಿ ಇದೆ ಎಂದು ತಿಳಿದಿದ್ದೆ. ಈ ನಾಲ್ವರೂ ಒಂದು ಕೊಠಡಿಯಲ್ಲಿ ವಾಸವಾಗಿದ್ದರು.
ಬೆಳಗಾವಿಯಲ್ಲಿ ಕಳೆದ ಕೆಲವು ದಿನಗಳಿಂದ ಚಳಿಯ ತೀವ್ರತೆ ಹೆಚ್ಚಾಗಿದೆ. ಚಳಿಯಿಂದ ರಕ್ಷಣೆ ಮಾಡಿಕೊಳ್ಳಲು ಯುವಕರು ಮಲಗುವ ಮುನ್ನ ಕೊಠಡಿಯಲ್ಲಿ ಕೆಂಡದ ಶೆಗಡಿ ಹಚ್ಚಿಕೊಂಡು ಬಾಗಿಲು–ಕಿಟಕಿಗಳನ್ನು ಸಂಪೂರ್ಣ ಮುಚ್ಚಿಕೊಂಡಿದ್ದರು. ಕೆಂಡ ಸುಡುವಾಗ ಉಂಟಾಗುವ ಕಾರ್ಬನ್ ಮೊನಾಕ್ಸೈಡ್ ಎಂಬ ಅತ್ಯಂತ ಘಾತಕ ಅನಿಲದಿಂದ ಕೊಠಡಿಯಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆ ಯಾಗಿದು ನಿದ್ರೆಯಲ್ಲಿದ್ದರಿಂದ ಈ ಅನಿಲದ ಪರಿಣಾಮ ತಿಳಿಯದೇ ಮೂವರು ಉಸಿರುಗಟ್ಟಿಸಿ ಮೃತಪಟ್ಟಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಪೊಲೀಸ್ ಆಯುಕ್ತ ಭೂಷಣ ಬೋರ್ಸೆ ಅವರು ಮಾಳಮಾರುತಿ ಪೊಲೀಸ್ ಠಾಣಾ ಸಿಬ್ಬಂದಿಗಳೊಂದಿಗೆ ಘಟನೆ ಸ್ಥಳಕ್ಕೆ ಭೇಟಿ ನೀಡಿದರು ಪರಿಶೀಲನೆ ನಡೆಸಿ ಮಾತನಾಡುತ್ತಾ ಹೇಳಿದರು :
“ಚಳಿಯಿಂದ ರಕ್ಷಿಸಿಕೊಳ್ಳಲು ಮುಚ್ಚಿದ ಕೋಣೆಯಲ್ಲಿ ಕೆಂಡದ ಶೆಗಡಿ ಹಚ್ಚಿಕೊಂಡು ಮಲಗಿದ ಪರಿಣಾಮ ಕಾರ್ಬನ್ ಮೊನಾಕ್ಸೈಡ್ ಅನಿಲದ ಪರಿಣಾಮದಿಂದ ಮೂವರ ಮರಣ ಸಂಭವಿಸಿರುವುದಾಗಿ ಶಂಕಿಸಲಾಗಿದೆ. ಒಬ್ಬನು ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.”
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಸಿಫ್ ಸೇಠ್ ಅವರು ದುರ್ಘಟನೆಯನ್ನು ಖೇದ ವ್ಯಕ್ತಪಡಿಸುತ್ತಾ :
“ನಾಲ್ವರು ಯುವಕರು ಒಂದು ಕುಟುಂಬ ಸಮಾರಂಭದಿಂದ ಹಿಂದಿರುಗಿ ಶೆಗಡಿ ಹಚ್ಚಿಕೊಂಡು ಮಲಗಿದ್ದರು. ಧೂಮದ ಪ್ರಮಾಣ ಹೆಚ್ಚಾದ ಪರಿಣಾಮ ಮೂವರ ಮರಣವಾಗಿದ್ದು, ಒಬ್ಬನ ಆರೋಗ್ಯ ಗಂಭೀರವಾಗಿದೆ. ಇದು ಅತ್ಯಂತ ನೋವುಂಟುಮಾಡುವ ಘಟನೆ.” ಎಂದರು.
ಮಾಳಮಾರುತಿ ಪೊಲೀಸರು ಮೃತದೇಹಗಳ ಪಂಜನಾಮ ಮಾಡಿ ಮುಂದಿನ ತನಿಖೆ ಆರಂಭಿಸಿದ್ದಾರೆ.
ಈ ಭೀಕರ ಘಟನೆ ನಂತರ ಅಮನನಗರ ಪ್ರದೇಶದಲ್ಲಿ ದುಃಖದ ಛಾಯೆ ನೆಲೆಸಿದೆ. ಚಳಿಗಾಲದಲ್ಲಿ ನಿಷ್ಕಾಳಜೀತನವು ಸಾವಿಗೆ ಕಾರಣವಾಗಬಹುದು ಎಂಬ ಅರಿವು ಮತ್ತೊಮ್ಮೆ ವ್ಯಕ್ತವಾಗಿದೆ. ಶೆಗಡಿ ಅಥವಾ ಶೇಕೋಟಿ ಬಳಸುವಾಗ ಕೊಠಡಿ ಗಾಳಿ ಚಲನವಲನವಾಗಿರುವುದು ಎಷ್ಟು ಮುಖ್ಯ ಎಂಬುದನ್ನು ಈ ದುರಂತವು ಮತ್ತೆ ಸಾಬೀತುಪಡಿಸಿದೆ.


