बेळगाव पोलिसाचा निर्घृण प्रकार : पत्नीलाच ठार केलं पापी पोलीसाने..!
संवदत्ती (बेळगाव) : बेळगाव जिल्ह्यातील संवदत्ती शहरात पोलिसाने स्वतःच्या पत्नीची निर्घृणपणे हत्या केल्याची धक्कादायक घटना उघडकीस आली आहे. ही घटना संवदत्ती येथील रामसाईट भागात घडली असून, मृत महिलेचे नाव काशम्मा नेल्लिकट्टी असे आहे. आरोपी पतीचे नाव संतोष कांबळे असून तो पोलीस पथकात (कॉन्स्टेबल) म्हणून कार्यरत आहे.
मिळालेल्या माहितीनुसार, संतोष आणि काशम्मा यांनी सुमारे 13 वर्षांपूर्वी प्रेमविवाह केला होता. काशम्मा बस कंडक्टर म्हणून नोकरी करत होती. मात्र, संतोष याला तिच्यावर संशय होता. त्यामुळे तो सतत तिच्यावर अत्याचार करत असे, तसेच दैहिक छळ करत असे. संतोषच्या त्रासाला कंटाळून काशम्मा काही महिन्यांपूर्वी माहेरी गेली होती आणि नंतर तिने संवदत्ती डेपोमध्ये बदली करून घेतली होती.
यानंतर तिने बैलहोंगल न्यायालयात घटस्फोटासाठी अर्ज दाखल केला होता. न्यायालयाने 5 एप्रिल 2025 रोजी घटस्फोट मंजूर केला होता. घटस्फोटानंतरही संतोष तिला फोनवरून शिवीगाळ आणि धमक्या देत होता.
अखेर 13 ऑक्टोबर रोजी रात्री आठच्या सुमारास, संतोष काशम्माच्या संवदत्ती येथील भाड्याच्या घरात जाऊन तिच्याशी वाद घातला. संतोषने संतापाच्या भरात पत्नीचा गळा चिरून आणि पोटात तीन वार करून हत्या केली. गुन्हा केल्यानंतर आरोपी घटनास्थळावरून फरार झाला.
तीन दिवसांनी घरातून येणाऱ्या दुर्गंधीमुळे शेजाऱ्यांनी पोलिसांना माहिती दिली. पोलिसांनी घटनास्थळी धाव घेऊन प्रकरणाचा तपास सुरू केला आहे.
सध्या संवदत्ती पोलिस ठाण्यात खुनाचा गुन्हा नोंद करण्यात आला असून, फरार आरोपी संतोष कांबळेचा शोध सुरु आहे. या घटनेने संवदत्ती परिसरात मोठी खळबळ उडाली आहे.
ಬೆಳಗಾವಿ ಪೊಲೀಸನಿಂದ ಹೈಯ ಕೃತ್ಯ : ಪತ್ನಿಯನ್ನೇ ಕೊಂದ ಪಾಪಿ..!
ಬೆಳಗಾವಿ :ಪ್ರೀತಿಸಿ ಮದುವೆಯಾಗಿದ್ದಾಕೆಯ ಜೊತೆಗೆ ಜೀವನ ನಡೆಸಬೇಕಿದ್ದ ಪೊಲೀಸಪ್ಪ ಕೊಲೆ ಮಾಡಿದ ಹೀನ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಸೈಟ್ ದಲ್ಲಿ ನಡೆದಿದೆ.
ಕಾಶಮ್ಮ ನೆಲ್ಲಿಕಟ್ಟಿ ಗಂಡನಿಂದ ಕೊಲೆಯಾದ ದುರ್ದೈವಿ. ಪೊಲೀಸ್ ಪೇದೆಯಾಗಿರುವ ಆಕೆಯ ಗಂಡ ಸಂತೋಷ್ ಕಾಂಬಳೆ ಕೊಲೆ ಮಾಡಿದ್ದಾನೆ. ಕಳೆದ 13ವರ್ಷದ ಹಿಂದೆ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.
ಮೃತಪಟ್ಟ ಮಹಿಳೆ ಕಾಶಮ್ಮ ಬಸ್ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೆಂಡತಿ ಮೇಲೆ ಸಂಶಯ ಪಟ್ಟು ಪತಿ ಕಿರುಕುಳ ನೀಡುತ್ತಿದ್ದ. ಪತ್ನಿಗೆ ಟಾರ್ಚರ್ ನೀಡುವುದು ದೈಹಿಕ ಹಲ್ಲೆ ಮಾಡುತ್ತಿದ್ದ ಸಂತೋಷ್ ನ ಕಾಟಕ್ಕೆ ಬೇಸತ್ತು ಗಂಡನ ಸಹವಾಸ ಬಿಟ್ಟು ಕಾಶಮ್ಮ ತವರು ಸೇರಿದ್ದಳು.
ಬಳಿಕ ಸವದತ್ತಿ ಡಿಪೋಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಳು. ಇದಾದ ಬಳಿಕ ವಿವಾಹ ವಿಚ್ಛೇದನಕ್ಕೆ ಬೈಲಹೊಂಗಲ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದರು.
ತವರು ಮನೆಯಲ್ಲೂ ಇರದೇ ಸವದತ್ತಿ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ ಕಾಶಮ್ಮ ಏಪ್ರಿಲ್ 5, 2025ರಂದು ನ್ಯಾಯಾಲಯದಿಂದ ವಿಚ್ಚೇದನ ಕೂಡ ಪಡೆದಿದ್ದ ಕಾಶಮ್ಮ.
ಇದಾದ ಬಳಿಕವೂ ಹೆಂಡತಿಗೆ ಕರೆ ಮಾಡಿ ಬೈಯ್ಯವುದು ನಿಂದಿಸುತ್ತಿದ್ದ ಸಂತೋಷ ಅಕ್ಟೋಬರ್ 13ರಂದು ಸಂಜೆ ಎಂಟು ಗಂಟೆಗೆ ಕಾಶಮ್ಮನ ಬಳಿ ಹೋಗಿ ಗಲಾಟೆ ಮಾಡಿದ್ದಾನೆ. ಪತ್ನಿಯ ಕತ್ತು ಕೊಯ್ದು ಹೊಟ್ಟೆಗೆ ಇರಿದು ಮೂರು ಬಾರಿ ಕೊಚ್ಚಿ ಕೊಲೆ ಮಾಡಿ ಬಳಿಕ ಅಲ್ಲಿಂದ ಎಸ್ಕೆಪ್ ಆಗಿದ್ದ.
ಮೂರು ದಿನದ ಬಳಿಕ ದುರ್ವಾಸನೆ ಬಂದು ಪೊಲೀಸರಿಗೆ ಸ್ಥಳೀಯರಿಂದ ಮಾಹಿತಿ ನೀಡಿದ್ದಾರೆ. ಕೊಲೆ ಕೇಸ್ ದಾಖಲಿಸಿಕೊಂಡು ಸವದತ್ತಿ ಪೊಲೀಸರ ತನಿಖೆ ನಡೆಸಿದ್ದಾರೆ. ಪರಾರಿಯಾದ ಆರೋಪಿ ಸಂತೋಷ ಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ.

