ख्यातनाम पर्यावरण शास्त्रज्ञ प्रा. माधव गाडगीळ यांच्या निधनाबद्दल विश्वेश्वर हेगडे-कागेरी यांचा शोकसंदेश.
उत्तर कन्नड : भारतातील ज्येष्ठ व ख्यातनाम पर्यावरण शास्त्रज्ञ तसेच पश्चिम घाट संवर्धन चळवळीचा बुलंद आवाज असलेले प्रा. माधव गाडगीळ यांच्या निधनाने देशाच्या पर्यावरण चळवळीतील एक महत्त्वाचा अध्याय संपला असल्याची भावना उत्तर कन्नडचे खासदार विश्वेश्वर हेगडे कागेरी यांनी व्यक्त केली आहे.
प्रा. गाडगीळ यांनी पश्चिम घाटांच्या संरक्षणासाठी सादर केलेला ऐतिहासिक अहवाल तसेच पर्यावरणाकडे वैज्ञानिक दृष्टिकोनातून पाहण्याची त्यांनी घालून दिलेली दिशा सदैव स्मरणात राहील, असे कागेरी यांनी आपल्या शोकसंदेशात नमूद केले. बंगळुरू येथील भारतीय विज्ञान संस्था (IISc) मध्ये पर्यावरण विज्ञान केंद्राची स्थापना करून त्यांनी संशोधनाला नवी दिशा दिली. तसेच ‘चॅम्पियन्स ऑफ द अर्थ’सारख्या जागतिक सन्मानाने भारताचा गौरव वाढवला, असेही त्यांनी सांगितले.
“प्रकृतीसोबत समरस होऊन जगणे” हा प्रा. गाडगीळ यांचा विचार आजच्या आणि पुढील पिढीसाठी दिशादर्शक ठरेल, असे मत व्यक्त करत खासदार कागेरी यांनी ईश्वर त्यांच्या आत्म्यास चिरशांती देवो तसेच त्यांच्या कुटुंबीयांना हे दुःख सहन करण्याची शक्ती मिळो, अशी प्रार्थना केली.
ಖ್ಯಾತ ಪರಿಸರ ವಿಜ್ಞಾನಿ ಪ್ರೊ. ಮಾಧವ್ ಗಾಡ್ಗಿಲ್ ಅವರ ನಿಧನಕ್ಕೆ ವಿಶ್ವೇಶ್ವರ ಹೆಗಡೆ–ಕಾಗೇರಿ ಅವರಿಂದ ಶೋಕಸಂದೇಶ
ಉತ್ತರ ಕನ್ನಡ : ಭಾರತದಲ್ಲಿನ ಹಿರಿಯ ಹಾಗೂ ಖ್ಯಾತ ಪರಿಸರ ವಿಜ್ಞಾನಿ, ಜೊತೆಗೆ ಪಶ್ಚಿಮ ಘಟ್ಟಗಳ ಸಂರಕ್ಷಣಾ ಚಳವಳಿಗೆ ಬಲವಾದ ಧ್ವನಿಯಾಗಿದ್ದ ಪ್ರೊ. ಮಾಧವ್ ಗಾಡ್ಗಿಲ್ ಅವರ ನಿಧನದಿಂದ ದೇಶದ ಪರಿಸರ ಚಳವಳಿಯ ಒಂದು ಮಹತ್ವದ ಅಧ್ಯಾಯ ಅಂತ್ಯಗೊಂಡಂತಾಗಿದೆ ಎಂದು ಉತ್ತರ ಕನ್ನಡದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಶೋಕಸಂದೇಶದಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರೊ. ಗಾಡ್ಗಿಲ್ ಅವರು ಸಲ್ಲಿಸಿದ ಐತಿಹಾಸಿಕ ವರದಿ ಹಾಗೂ ಪರಿಸರವನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ದಿಕ್ಕನ್ನು ಅವರು ನೀಡಿರುವುದು ಸದಾಕಾಲ ಸ್ಮರಣೀಯವಾಗಿರುತ್ತದೆ ಎಂದು ಕಾಗೇರಿ ಅವರು ಹೇಳಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc) ಯಲ್ಲಿ ಪರಿಸರ ವಿಜ್ಞಾನ ಕೇಂದ್ರವನ್ನು ಸ್ಥಾಪಿಸುವ ಮೂಲಕ ಸಂಶೋಧನೆಗೆ ಹೊಸ ದಿಕ್ಕು ನೀಡಿದ ಮಹತ್ವದ ಕೊಡುಗೆಯನ್ನು ಅವರು ನೀಡಿದ್ದಾರೆ ಎಂದು ಅವರು ಸ್ಮರಿಸಿದ್ದಾರೆ.
ಇದೇ ಸಂದರ್ಭದಲ್ಲಿ ‘ಚಾಂಪಿಯನ್ಸ್ ಆಫ್ ದಿ ಎರ್ಥ್’ ಎಂಬಂತಹ ಜಾಗತಿಕ ಗೌರವವನ್ನು ಪಡೆದು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆ ತಂದಿದ್ದಾರೆ ಎಂದು ಕಾಗೇರಿ ಅವರು ಉಲ್ಲೇಖಿಸಿದ್ದಾರೆ.
“ಪ್ರಕೃತಿಯೊಂದಿಗೆ ಸಮರಸವಾಗಿ ಬದುಕುವುದು” ಎಂಬ ಪ್ರೊ. ಗಾಡ್ಗಿಲ್ ಅವರ ಚಿಂತನೆ ಇಂದಿನ ಹಾಗೂ ಮುಂದಿನ ಪೀಳಿಗೆಗಳಿಗೆ ದಿಕ್ಕು ತೋರಿಸುವಂತದ್ದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಂಸದ ಕಾಗೇರಿ, ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.


