राष्ट्रीय क्रीडा दिन हा भारताच्या दंतकथेतल्या हॉकीपटू मेजर ध्यानचंद यांना सन्मान देण्यासाठी महत्त्वाचा दिवस ; आमदार विठ्ठल हलगेकर.
खानापूर : पदवीपूर्व शिक्षण विभाग आणि केएलई स्वायत्त पदवीपूर्व महाविद्यालय, खानापूर यांच्या संयुक्त विद्यमाने तालुका स्तरीय क्रीडास्पर्धा 29 आणि 30 ऑगस्ट रोजी खानापूर येथे उत्साहात पार पडल्या.

या क्रीडास्पर्धांचे उद्घाटन खानापूर तालुक्याचे लोकप्रिय आमदार श्री. विठ्ठल सोंम्मण्ण हलगेकर यांच्या हस्ते झाले. यावेळी ते बोलताना म्हणाले, 29 ऑगस्टला साजरा होणारा राष्ट्रीय क्रीडा दिन हा भारताच्या दंतकथेतल्या हॉकीपटू मेजर ध्यानचंद यांना सन्मान देण्यासाठी महत्त्वाचा दिवस असल्याचे त्यांनी नमूद केले. ध्यानचंद यांच्या अपूर्व कौशल्याने आणि समर्पणाने देशाला गौरव मिळवून दिला. विद्यार्थ्यांनी शासन पुरवित असलेल्या सुविधा घेऊन क्रीडा उपक्रमात सक्रीय सहभाग घ्यावा, असे आवाहन त्यांनी केले. तसेच, स्थानिक खेळाडूंना राज्यस्तरीय स्पर्धांमध्ये यश मिळविण्यासाठी तज्ज्ञांकडून प्रशिक्षणाची गरज असल्याचेही त्यांनी अधोरेखित केले.
बेळगाव जिल्हा पदवीपूर्व विद्यापीठाचे उपसंचालक श्री. एम. एम. कांबळे यांनी क्रीडांचे शारीरिक व मानसिक आरोग्यासाठी असलेले महत्त्व स्पष्ट केले. क्रीडेमुळे शिस्त, संघभावना व परिश्रमाची जाणीव होत असल्याचे सांगून विद्यार्थ्यांसह शिक्षक व आयोजकांच्या प्रयत्नांचे त्यांनी कौतुक केले. जिंकणे हेच ध्येय नसून सहभाग आणि शिकणे याला अधिक महत्त्व आहे, असेही त्यांनी सांगितले.
कार्यक्रमाला बेळगाव जिल्हा प्राचार्य संघाचे अध्यक्ष श्री. एम. के. बजंत्री, खानापूर तालुका क्रीडा समन्वयक श्री. श्रीधर हिरेमठ, स्थानिक व्यवस्थापन समिती अध्यक्ष श्री. आर. डी. हंजी, एलजीबी सदस्य श्री. बी. व्ही. होंडदकाटी, प्राचार्य श्री. विजय एम. कलमठ, क्रीडा निर्देशक श्री. के. व्ही. पाटील उपस्थित होते.
कार्यक्रमाचे सुत्रसंचालन मिस. विद्या कामोजी यांनी केले. तालुक्यातील विविध महाविद्यालयांतील विद्यार्थी मोठ्या संख्येने उपस्थित होते.
ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಭಾರತದ ದಂತಕಥೆ ಹಾಕಿ ಪಟು ಮೇಜರ್ ಧ್ಯಾನಚಂದ್ ಅವರಿಗೆ ಗೌರವ ಸಲ್ಲಿಸುವ ಮಹತ್ವದ ದಿನ ; ಶಾಸಕ ವಿಠ್ಠಲ್ ಹಲಗೇಕರ
ಖಾನಾಪುರ : ಪೂರ್ವ ಪದವಿ ಶಿಕ್ಷಣ ಇಲಾಖೆ ಹಾಗೂ ಕೆಎಲ್ಇ ಸ್ವಾಯತ್ತ ಪೂರ್ವ ಪದವಿ ಮಹಾವಿದ್ಯಾಲಯ, ಖಾನಾಪುರ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಆಗಸ್ಟ್ 29 ಮತ್ತು 30ರಂದು ಖಾನಾಪುರದಲ್ಲಿ ಉತ್ಸಾಹಭರಿತವಾಗಿ ನೆರವೇರಿತು.
ಈ ಕ್ರೀಡಾಕೂಟದ ಉದ್ಘಾಟನೆಯನ್ನು ಖಾನಾಪುರ ತಾಲೂಕಿನ ಜನಪ್ರಿಯ ಶಾಸಕ ಶ್ರೀ. ವಿಠ್ಠಲ್ ಸೋಮ್ಮಣಾ ಹಲಗೇಕರ ಅವರ ಹಸ್ತದಿಂದ ನೆರವೇರಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ಆಗಸ್ಟ್ 29ರಂದು ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನವು ಭಾರತದ ದಂತಕಥೆ ಹಾಕಿ ಪಟು ಮೇಜರ್ ಧ್ಯಾನಚಂದ್ ಅವರಿಗೆ ಗೌರವ ಸಲ್ಲಿಸುವ ಮಹತ್ವದ ದಿನವಾಗಿದೆಯೆಂದು ಹೇಳಿದರು. ಧ್ಯಾನಚಂದ್ ಅವರ ಅಪೂರ್ವ ಕೌಶಲ್ಯ ಮತ್ತು ಸಮರ್ಪಣೆಯಿಂದ ದೇಶಕ್ಕೆ ಕೀರ್ತಿ ತಂದುಕೊಟ್ಟಿದ್ದಾರೆ ಎಂದು ಉಲ್ಲೇಖಿಸಿದರು.
ವಿದ್ಯಾರ್ಥಿಗಳು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಪಡೆದು ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅವರು ಕೋರಿದರು. ಸ್ಥಳೀಯ ಆಟಗಾರರು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡಲು ತಜ್ಞರಿಂದ ತರಬೇತಿ ಪಡೆಯುವ ಅಗತ್ಯವಿದೆ ಎಂದು ಕೂಡ ಅವರು ಸೂಚಿಸಿದರು.
ಬೆಳಗಾವಿ ಜಿಲ್ಲಾ ಪೂರ್ವ ಪದವಿ ಶಿಕ್ಷಣ ಉಪನಿರ್ದೇಶಕ ಶ್ರೀ. ಎಂ. ಎಂ. ಕಾಂಬಳೆ ಅವರು ಕ್ರೀಡೆಯು ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಮಹತ್ವದ್ದೆಂದು ತಿಳಿಸಿ, ಕ್ರೀಡೆ ಶಿಸ್ತು, ತಂಡಭಾವನೆ ಮತ್ತು ಪರಿಶ್ರಮದ ಅರಿವು ಮೂಡಿಸುತ್ತದೆ ಎಂದರು. ಗೆಲುವೇ ಗುರಿಯಲ್ಲ, ಭಾಗವಹಿಸುವುದು ಮತ್ತು ಕಲಿಯುವುದಕ್ಕೂ ಸಮಾನ ಮಹತ್ವ ಇದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀ. ಎಂ. ಕೆ. ಬಜಂತ್ರಿ, ಖಾನಾಪುರ ತಾಲೂಕು ಕ್ರೀಡಾ ಸಂಯೋಜಕ ಶ್ರೀ. ಶ್ರೀಧರ ಹಿರೇಮಠ, ಸ್ಥಳೀಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀ. ಆರ್. ಡಿ. ಹಂಜಿ, ಎಲ್ಜಿಬಿ ಸದಸ್ಯ ಶ್ರೀ. ಬಿ. ವಿ. ಹೊಂಡದಕಟ್ಟಿ ಪ್ರಾಂಶುಪಾಲ ಶ್ರೀ. ವಿಜಯ ಎಂ. ಕಲಮಠ, ಕ್ರೀಡಾ ನಿರ್ದೇಶಕ ಶ್ರೀ. ಕೆ. ವಿ. ಪಾಟೀಲ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ವಿದ್ಯಾ ಕಾಮೋಜಿ ನಿರ್ವಹಿಸಿದರು. ತಾಲೂಕಿನ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದರು.

