
“आपलं खानापूर” न्यूज पोर्टल’ची करंबळ ग्रामपंचायतीने घेतलीं दखल.
खानापूर : आज बुधवार दिनांक 3 सप्टेंबर रोजी “आपलं खानापूर” न्यूज पोर्टल मध्ये “रूमेवाडी क्रॉस कचऱ्याच्या व अनेक समस्यांच्या विळख्यात करंबळ ग्रामपंचायतीचे दुर्लक्ष ; नागरिकांचा तीव्र संताप”. या शीर्षकाखाली बातमी प्रसारित करण्यात आली होती. याची दखल करंबळ ग्रामपंचायतचे पीडीओ, सेक्रेटरी यांनी घेतली व तात्काळ संबंधित परिसरातील कचरा काढून परिसर स्वच्छ केला. तसेच उर्वरित समस्या सुद्धा लवकरच मार्गी लावण्यात येणार आहेत. त्यामुळे नागरिकांनी करंबळ ग्रामपंचायतच्या कार्याबद्दल समाधान व्यक्त केले आहे.
आपलं खानापूर न्यूज पोर्टल मध्ये बातमी प्रसारित होताच मलप्रभा नदी पुलाजवळील प्लास्टिक कचरा तसेच कार्लेकर प्लॉट येथील कचरा काढून परिसर स्वच्छ करण्यात आला त्याबद्दल येतील नागरिकांनी समाधान व्यक्त केले आहे. ग्रामपंचायत ने लवकरात लवकर उर्वरित समस्या, चिखलमय रस्ता व रस्त्यावरील पथदीप बसविण्याची मागणी केली आहे.
“ನಮ್ಮ ಖಾನಾಪುರ” ನ್ಯೂಸ್ ಪೋರ್ಟಲ್ ನಲ್ಲಿ ಪ್ರಕಟಿಸಿದ ಸುದ್ದಿಗೆ ಕರಂಬಳ ಗ್ರಾಮ ಪಂಚಾಯಿತಿಯಿಂದ ಸ್ಪಂದನೆ.
ಖಾನಾಪುರ : ಬುಧವಾರ ದಿನಾಂಕ 3 ಸೆಪ್ಟೆಂಬರ್ ರಂದು “ನಮ್ಮ ಖಾನಾಪುರ” ನ್ಯೂಸ್ ಪೋರ್ಟಲ್ನಲ್ಲಿ ಪ್ರಕಟವಾದ
“ರೂಮೇವಾಡಿ ಕ್ರಾಸ ಬಳಿ ಕಸದ ಹಾಗೂ ಅನೇಕ ಸಮಸ್ಯೆಗಳ ಕುರಿತು; ಕರಂಬಳ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ – ನಾಗರಿಕರ ತೀವ್ರ ಆಕ್ರೋಶ”
ಎಂಬ ಶೀರ್ಷಿಕೆಯಡಿ ಸುದ್ದಿಗೆ ಕರಂಬಳ ಗ್ರಾಮ ಪಂಚಾಯಿತಿಯ PDO ಹಾಗೂ ಕಾರ್ಯದರ್ಶಿಗಳು ತಕ್ಷಣವೇ ಗಮನ ಹರಿಸಿ ಸಮಸ್ಯೆ ಬಗೆಹರಿಸಲ ಮುಂದಾಗಿದೆ.
ಸುದ್ದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಸಂಬಂಧ ಪಟ್ಟ ಭಾಗದಲ್ಲಿ ಪ್ಲಾಸ್ಟಿಕ್ ಹಾಗೂ ಇತರೆ ಕಸವನ್ನು ತೆರವುಗೊಳಿಸಿ, ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಜೊತೆಗೆ ಉಳಿದ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ಇದರಿಂದ ನಾಗರಿಕರು ಗ್ರಾಮ ಪಂಚಾಯಿತಿಯ ಕಾರ್ಯ ಚಟುವಟಿಕೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ.
ಮಲಪ್ರಭಾ ನದಿ ಸೇತುವೆ ಬಳಿ ಮತ್ತು ಕಾರ್ಳೇಕರ್ ಪ್ಲಾಟ್ ಪ್ರದೇಶದಲ್ಲಿನ ಕಸದ ರಾಶಿ ಕೂಡ ತೆರವುಗೊಳಿಸಲಾಯಿತು. ಈ ಕಾರ್ಯದ ಬಗ್ಗೆ ಸ್ಥಳೀಯರು ಸಂತೋಷ ವ್ಯಕ್ತಪಡಿಸಿದ್ದಾರೆ.
ಆದರೆ ಇನ್ನೂ ಬಾಕಿ ಉಳಿದಿರುವ ಸಮಸ್ಯೆಗಳಾದ ಗುಂಡಿಗಳಿಂದ ತುಂಬಿದ ರಸ್ತೆ ದುರಸ್ತಿ ಗೊಳಿಸುವುದು ಹಾಗೂ ರಸ್ತೆ ದೀಪಗಳನ್ನು ಅಳವಡಿಸುವುದು ಮುಂತಾದ ಬೇಡಿಕೆಗಳನ್ನು ಕೂಡ ಗ್ರಾಮ ಪಂಚಾಯಿತಿ ತ್ವರಿತವಾಗಿ ಪರಿಹರಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
