स्वामी विवेकानंद यांच्या बेळगाव भेटीच्या स्मरणार्थ विशेष कार्यक्रम.
बेळगाव : स्वामी विवेकानंद यांनी भारत भ्रमणाच्या दरम्यान दिनांक 16 ऑक्टोबर 1892 रोजी बेळगावला भेट दिली होती. तीन दिवस स्वामींचे वास्तव्य रिसालदार गल्ली येथील भाते यांच्या निवासस्थानी होते. या ऐतिहासिक घटनेच्या स्मरणार्थ रामकृष्ण मिशन आश्रमतर्फे स्वामी विवेकानंद स्मारक, रिसालदार गल्ली येथे विशेष कार्यक्रमाचे आयोजन करण्यात आले आहे.
गुरुवार, दि. 16 ऑक्टोबर रोजी सायंकाळी 5.30 ते 8.30 या वेळेत राष्ट्रीय कीर्तीचे कलाकार दामोदर रामदासी यांच्या “मर्यादा पुरुषोत्तम राम” या हिंदी एकपात्री कार्यक्रमाचे आयोजन करण्यात आले आहे. तसेच, दुपारी 1 ते 3 या वेळेत महाप्रसादाचे आयोजन करण्यात आले असून, जनतेने या कार्यक्रमांचा लाभ घ्यावा, असे आवाहन रामकृष्ण मिशन आश्रमतर्फे करण्यात आले आहे.
रिसालदार गल्ली येथील भाते यांच्या ऐतिहासिक निवासस्थानीच स्वामी विवेकानंद स्मारक उभारण्यात आले आहे. येथे स्वामी विवेकानंदांनी वास्तव केलेल्या पवित्र वास्तूमध्ये त्यांच्या वापरातील काठी, आरसा, पलंग यांचे जतन करण्यात आले आहे. तसेच स्वामी विवेकानंदांच्या जीवनाचा परिचय करून देणारे चित्रप्रदर्शन स्मारकात उभारण्यात आले आहे.
नागरिकांनी स्वामी विवेकानंद स्मारकाला भेट देऊन स्वामींच्या पवित्र वास्तूस वंदन करावे व त्यांचे आशीर्वाद प्राप्त करावेत, असे आवाहन आयोजकांनी केले आहे.
ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ
ಬೆಳಗಾವಿ : ಸ್ವಾಮಿ ವಿವೇಕಾನಂದರು ಭಾರತಭ್ರಮಣದ ಸಂದರ್ಭದಲ್ಲಿಃ 1892ರ ಅಕ್ಟೋಬರ್ 16ರಂದು ಬೆಳಗಾವಿಗೆ ಆಗಮಿಸಿದ್ದರು. ಅವರು ಮೂರು ದಿನಗಳ ಕಾಲ ರಿಸಾಲ್ದಾರ ಗಲ್ಲಿಯ ಭಾಟೆ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ಈ ಐತಿಹಾಸಿಕ ಘಟನೆಯ ಸ್ಮರಣಾರ್ಥವಾಗಿ ರಾಮಕೃಷ್ಣ ಮಿಷನ್ ಆಶ್ರಮದ ವತಿಯಿಂದ ಸ್ವಾಮಿ ವಿವೇಕಾನಂದ ಸ್ಮಾರಕ, ರಿಸಾಲ್ದಾರ ಗಲ್ಲಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಗುರುವಾರ, ಅಕ್ಟೋಬರ್ 16ರಂದು ಸಂಜೆ 5.30ರಿಂದ ರಾತ್ರಿ 8.30ರವರೆಗೆ ರಾಷ್ಟ್ರಪ್ರಸಿದ್ಧ ಕಲಾವಿದ ದಾಮೋದರ ರಾಮದಾಸಿ ಅವರ “ಮರ್ಯಾದಾ ಪುರುಷೋತ್ತಮ ರಾಮ” ಎಂಬ ಹಿಂದಿ ಏಕಪಾತ್ರಿಯ ನಾಟಕ ಪ್ರದರ್ಶನ ನಡೆಯಲಿದೆ. ಹಾಗೆಯೇ, ಮಧ್ಯಾಹ್ನ 1ರಿಂದ 3ರವರೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಲಾಭ ಪಡೆಯುವಂತೆ ರಾಮಕೃಷ್ಣ ಮಿಷನ್ ಆಶ್ರಮದ ವತಿಯಿಂದ ವಿನಂತಿ ಮಾಡಲಾಗಿದೆ.
ರಿಸಾಲ್ದಾರ ಗಲ್ಲಿಯ ಭಾಟೆ ಅವರ ಐತಿಹಾಸಿಕ ನಿವಾಸದಲ್ಲಿಯೇ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸಲಾಯಿತು. ಇಲ್ಲಿ ಸ್ವಾಮಿ ವಿವೇಕಾನಂದರು ವಾಸ್ತವ್ಯ ಹೂಡಿದ ಪವಿತ್ರ ಸ್ಥಳದಲ್ಲಿ ಅವರ ಬಳಕೆಯ ಕೋಲು, ಕನ್ನಡಿ, ಹಾಸಿಗೆ ಇತ್ಯಾದಿ ವಸ್ತುಗಳ ಸಂರಕ್ಷಣೆ ಮಾಡಲಾಗಿದೆ. ಜೊತೆಗೆ ಸ್ವಾಮಿ ವಿವೇಕಾನಂದರ ಜೀವನಚರಿತ್ರೆ ಪರಿಚಯಿಸುವ ಚಿತ್ರಪ್ರದರ್ಶನವೂ ಸ್ಮಾರಕದಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಾಗರಿಕರು ಸ್ವಾಮಿ ವಿವೇಕಾನಂದ ಸ್ಮಾರಕಕ್ಕೆ ಭೇಟಿ ನೀಡಿ, ಸ್ವಾಮಿ ವಿವೇಕಾನಂದರ ಪವಿತ್ರ ವಾಸಸ್ಥಳಕ್ಕೆ ವಂದನೆ ಸಲ್ಲಿಸಿ ಅವರ ಆಶೀರ್ವಾದ ಪಡೆಯುವಂತೆ ಆಯೋಜಕರು ಕೋರಿದ್ದಾರೆ.

