
खानापूर तालुक्यातून विजदरवाढीविरोधात नेगील योगी सेवा संघाचे मुख्यमंत्र्यांना निवेदन
खानापूर (ता. ११ ऑगस्ट) – गॅरंटी योजनेअंतर्गत 200 युनिटपर्यंत मोफत वीज देण्याचे आश्वासन देऊन नंतर किमान शुल्क व विजेचे दर वाढवून ग्रामीण जनतेची फसवणूक केल्याचा आरोप करत, नेगील योगी सेवा संघ, खानापूर यांच्या वतीने मुख्यमंत्री व कर्नाटक सरकार यांना 10 मागण्यांचे निवेदन देण्यात आले. सदर निवेदन मुख्यमंत्र्यांना पाठविण्यासाठी खानापूरचे तहसीलदार दुंडाप्पा कोमार यांना देण्यात आले. यावेळी हेस्कॉम खात्याचे असिस्टंट एक्झिक्युटिव्ह इंजिनिअर जगदीश मोहिते उपस्थित होते.
निवेदनातील प्रमुख मागण्या पुढीलप्रमाणे आहेत –
घरगुती व व्यापारी वीज वापरावरील किमान शुल्क रद्द करावे.
विजेसाठी टप्प्याटप्प्याने महाग दर आकारणी थांबवावी व वाढवलेले दर मागे घ्यावेत.
इंधन समायोजन शुल्क म्हणून आकारले जाणारे प्रति युनिट 36 पैसे रद्द करावेत.
किमान शुल्क रद्द न केल्यास, त्यानुसार किमान युनिट मोफत वीज द्यावी.
वीज विभाग व ग्राहक यांच्यात हक्क संरक्षणासाठी परस्पर करार करावा.
वीजपुरवठा सरकारने जाहीर केलेल्या वेळेपेक्षा कमी दिल्यास, त्याचे नुकसान वीज विभागाने भरावे.
टीसी व वीजजोडणीसंबंधी भ्रष्टाचार थांबवून निश्चित कालमर्यादा लागू करावी.
शेतकऱ्यांसाठी स्वखर्च वीजजोडणी योजना रद्द करावी.
कृषी दर आयोगाचा अहवाल लागू होईपर्यंत ग्रामीण व कृषी क्षेत्राला वीज तपासणीपासून सूट द्यावी.
बोअरवेल समस्यांसाठी दुष्काळग्रस्त भागांमध्ये सर्वसमावेशक सिंचन योजना राबवावी.
या मागण्या तातडीने मान्य न केल्यास ग्रामीण भागात स्मार्ट मीटर बसविण्यास विरोध करण्यात येईल तसेच सध्याचे मीटर परत देण्यात येतील, असा इशारा निवेदनात देण्यात आला आहे.
हे निवेदन बैलहोंगल तालुका अध्यक्ष सोमलिंग मळिकेरी यांच्या स्वाक्षरीने देण्यात आले. यावेळी राज्याध्यक्ष रवी पाटील, जिल्हा अध्यक्ष शंकर बोळ्ळनावर, खानापूर तालुका अध्यक्ष मनोहर सुळेभावीकर, राजू कोकीतकर, भैरूनाथ पाटील, मारुती कुलमुटकर, नारायण कोलेकर, मोहन नाईक तसेच तालुक्यातील शेतकरी मोठ्या संख्येने उपस्थित होते.
ಖಾನಾಪುರ ತಾಲ್ಲೂಕಿ ಪರವಾಗಿ ವಿದ್ಯುತ್ ದರ ಹೆಚ್ಚಳದ ವಿರುದ್ಧ ನೆಗೀಲ್ ಯೋಗಿ ಸೇವಾ ಸಂಘದ ವತಿಯಿಂದ ತಹಸೀಲ್ದಾರ್ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ.
ಖಾನಾಪುರ (ತಾ. 11 ಆಗಸ್ಟ್) – ಗ್ಯಾರಂಟಿ ಯೋಜನೆಯಡಿ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿ ನಂತರ ಕನಿಷ್ಠ ಶುಲ್ಕ ಹಾಗೂ ವಿದ್ಯುತ್ ದರ ಹೆಚ್ಚಿಸುವ ಮೂಲಕ ಗ್ರಾಮೀಣ ಜನತೆಯನ್ನು ಮೋಸಗೊಳಿಸಿರುವುದಾಗಿ ಆರೋಪಿಸಿ, ನೆಗೀಲ್ ಯೋಗಿ ಸೇವಾ ಸಂಘ, ಖಾನಾಪುರ ಇವರ ವತಿಯಿಂದ ಖಾನಾಪುರ ತಹಸೀಲ್ದಾರ್ ದುಂಡಪ್ಪ ಕೋಮಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಕಳುಹಿಸುವಂತೆ 10 ಬೇಡಿಕೆ ಉಳ್ಳ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ್ ಮೋಹಿತೆ ಉಪಸ್ಥಿತರಿದ್ದರು.
ಮನವಿಯ ಪ್ರಮುಖ ಬೇಡಿಕೆಗಳು:
ಗೃಹ ಹಾಗೂ ವ್ಯಾಪಾರಿಕ ವಿದ್ಯುತ್ ಬಳಕೆಯ ಕನಿಷ್ಠ ಶುಲ್ಕ ರದ್ದುಪಡಿಸಬೇಕು.
ವಿದ್ಯುತ್ಗೆ ಹಂತ ಹಂತವಾಗಿ ಹೆಚ್ಚುವರಿ ದರ ವಿಧಿಸುವುದು ನಿಲ್ಲಿಸಿ, ಹೆಚ್ಚಿಸಿದ ದರವನ್ನು ಹಿಂತೆಗೆದುಕೊಳ್ಳಬೇಕು.
ಇಂಧನ ಸರಿಹೊಂದಿಸುವ ಶುಲ್ಕವಾಗಿ ಪ್ರತಿ ಯೂನಿಟ್ಗೆ ವಿಧಿಸುತ್ತಿರುವ 36 ಪೈಸೆ ರದ್ದುಪಡಿಸಬೇಕು.
ಕನಿಷ್ಠ ಶುಲ್ಕವನ್ನು ರದ್ದುಪಡಿಸದಿದ್ದರೆ, ಅದರ ಪ್ರಕಾರ ಕನಿಷ್ಠ ಯೂನಿಟ್ ಉಚಿತ ವಿದ್ಯುತ್ ನೀಡಬೇಕು.
ವಿದ್ಯುತ್ ಇಲಾಖೆ ಹಾಗೂ ಗ್ರಾಹಕರ ನಡುವೆ ಹಕ್ಕು ರಕ್ಷಣೆಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕು.
ಸರ್ಕಾರ ಘೋಷಿಸಿರುವ ಅವಧಿಗಿಂತ ಕಡಿಮೆ ವಿದ್ಯುತ್ ಪೂರೈಕೆ ಮಾಡಿದರೆ, ಅದರ ನಷ್ಟವನ್ನು ವಿದ್ಯುತ್ ಇಲಾಖೆ ಭರಿಸಬೇಕು.
ಟಿಸಿ ಹಾಗೂ ವಿದ್ಯುತ್ ಸಂಪರ್ಕದಲ್ಲಿ ನಡೆಯುವ ಭ್ರಷ್ಟಾಚಾರ ನಿಲ್ಲಿಸಿಬೇಕು.
ರೈತರಿಗೆ ಸ್ವಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಯೋಜನೆಯನ್ನು ರದ್ದುಪಡಿಸಬೇಕು.
ಕೃಷಿ ದರ ಆಯೋಗದ ವರದಿ ಜಾರಿಗೆ ಬರುವವರೆಗೆ ಗ್ರಾಮೀಣ ಹಾಗೂ ಕೃಷಿ ಕ್ಷೇತ್ರಕ್ಕೆ ವಿದ್ಯುತ್ ತಪಾಸಣೆಯಿಂದ ವಿನಾಯಿತಿ ನೀಡಬೇಕು.
ಬೋರ್ವೆಲ್ ಸಮಸ್ಯೆಗಳಿಗೆ ಬರಪೀಡಿತ ಪ್ರದೇಶಗಳಲ್ಲಿ ಸಮಗ್ರ ನೀರಾವರಿ ಯೋಜನೆ ಜಾರಿಗೆ ತರುವಂತೆ ಕ್ರಮ ಕೈಗೊಳ್ಳಬೇಕು.
ಈ ಬೇಡಿಕೆಗಳನ್ನು ತಕ್ಷಣ ಅಂಗೀಕರಿಸದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೆ ವಿರೋಧ ವ್ಯಕ್ತಪಡಿಸಲಾಗುವುದು ಹಾಗೂ ಈಗಿನ ಮೀಟರ್ಗಳನ್ನು ಹಿಂತಿರುಗಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಈ ಮನವಿಗೆ ಬೈಲಹೊಂಗಲ ತಾಲ್ಲೂಕು ಅಧ್ಯಕ್ಷ ಸೋಮಲಿಂಗ ಮಳಿಕೇರಿ ಸಹಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ರವಿ ಪಾಟೀಲ, ಜಿಲ್ಲಾ ಅಧ್ಯಕ್ಷ ಶಂಕರ್ ಬೊಳ್ಳನವರ, ಖಾನಾಪುರ ತಾಲ್ಲೂಕು ಅಧ್ಯಕ್ಷ ಮನೋಹರ ಸುಳೆಭಾವಿಕರ್, ರಾಜು ಕೊಕಿತ್ಕರ್, ಭೈರುನಾಥ ಪಾಟೀಲ, ಮಾರುತಿ ಕುಳಮುಟ್ಕರ್, ನಾರಾಯಣ ಕೋಲೇಕರ್, ಮೋಹನ್ ನಾಯ್ಕ್ ಸೇರಿದಂತೆ ತಾಲ್ಲೂಕಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
