श्रावण सोमवारी अशोकधाम मंदिरात चेंगराचेंगरी; 7 भाविकांचा मृत्यू, 12 गंभीर जखमी.
लखीसराय (बिहार) : श्रावण सोमवारनिमित्त बिहारमधील लखीसराय येथील प्रसिद्ध अशोकधाम मंदिरात दर्शन व जलाभिषेकासाठी आलेल्या भाविकांच्या गर्दीत सोमवारी सकाळी भीषण दुर्घटना घडली. अचानक वीजेची तार तुटून गर्दीवर पडल्याने भाविकांमध्ये घबराट पसरली आणि त्यानंतर झालेल्या चेंगराचेंगरीत 7 भाविकांचा दुर्दैवी मृत्यू, तर 12 हून अधिक भाविक गंभीर जखमी झाल्याची माहिती समोर आली आहे.
ही दुर्घटना सोमवारी सकाळी साडेसहा वाजण्याच्या सुमारास घडली. श्रावण सोमवार असल्याने मंदिर परिसरात जलाभिषेकासाठी सुमारे 50 हजार भाविकांची गर्दी झाली होती. भाविक रांगेत उभे असतानाच अचानक वीजेची तार तुटून पडल्याने काही वेळातच परिसरात भीतीचे वातावरण निर्माण झाले.
घाबरलेल्या भाविकांनी सुरक्षित ठिकाणी जाण्यासाठी धाव घेतल्याने चेंगराचेंगरी झाली. गर्दीच्या प्रचंड दबावामुळे एका बाजूचे बॅरिकेडिंग तुटले आणि अनेक भाविक एकमेकांवर कोसळले. या दुर्घटनेत अनेक महिला आणि इतर भाविक गर्दीखाली दबले गेले.
दरम्यान, सकाळी साडेसहा ते पावणेसातच्या सुमारास एकाच वेळी दोन गाड्या आल्याने मंदिर परिसरातील गर्दीत आणखी वाढ झाल्याचे जिल्हाधिकारी शैलेंद्र कुमार यांनी सांगितले. प्रशासनाने गर्दीचा अंदाज घेऊन आवश्यक व्यवस्था केली होती; मात्र गर्दीचा प्रचंड दबाव वाढल्याने परिस्थिती हाताबाहेर गेल्याचे त्यांनी स्पष्ट केले.
घटनेची माहिती मिळताच पोलीस, प्रशासनाचे अधिकारी तसेच वैद्यकीय पथके तातडीने घटनास्थळी दाखल झाली. जखमी भाविकांना तात्काळ लखीसराय सदर रुग्णालयात दाखल करण्यात आले असून काही जखमींची प्रकृती चिंताजनक असल्याचे सांगण्यात येत आहे.
सध्या मंदिर परिसरात मदत व बचावकार्य सुरू असून प्रशासनाकडून परिस्थिती नियंत्रणात आणण्यासाठी युद्धपातळीवर प्रयत्न सुरू आहेत. दुर्घटनेमुळे भाविकांमध्ये हळहळ व्यक्त होत आहे.
ಶ್ರಾವಣ ಸೋಮವಾರ ಅಶೋಕಧಾಮ ದೇವಸ್ಥಾನದಲ್ಲಿ ಕಾಲ್ತುಳಿತ; 7 ಭಕ್ತರು ಸಾವು, 12 ಮಂದಿ ಗಂಭೀರ ಗಾಯ.
ಲಖಿಸರಾಯಿ (ಬಿಹಾರ) : ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಬಿಹಾರದ ಲಖಿಸರಾಯಿ ಜಿಲ್ಲೆಯ ಪ್ರಸಿದ್ಧ ಅಶೋಕಧಾಮ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಭೀಕರ ದುರಂತ ಸಂಭವಿಸಿದೆ. ದರ್ಶನ ಹಾಗೂ ಜಲಾಭಿಷೇಕಕ್ಕಾಗಿ ಆಗಮಿಸಿದ್ದ ಭಕ್ತರ ಭಾರೀ ಗುಂಪಿನ ಮೇಲೆ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿ, ಬಳಿಕ ಉಂಟಾದ ಕಾಲ್ತುಳಿತದಲ್ಲಿ 7 ಭಕ್ತರು ಮೃತಪಟ್ಟಿದ್ದು, 12ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ಸೋಮವಾರ ಬೆಳಗ್ಗೆ ಸುಮಾರು 6.30ರ ವೇಳೆಗೆ ಸಂಭವಿಸಿದೆ. ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಜಲಾಭಿಷೇಕಕ್ಕಾಗಿ ದೇವಸ್ಥಾನ ಪರಿಸರದಲ್ಲಿ ಸುಮಾರು 50 ಸಾವಿರ ಭಕ್ತರು ಸೇರಿದ್ದರು. ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಏಕಾಏಕಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಕೆಲವೇ ಕ್ಷಣಗಳಲ್ಲಿ ಭಯದ ವಾತಾವರಣ ನಿರ್ಮಾಣವಾಯಿತು.
ಭಯಭೀತರಾದ ಭಕ್ತರು ಸುರಕ್ಷಿತ ಸ್ಥಳಕ್ಕೆ ತೆರಳಲು ಏಕಾಏಕಿ ಓಡತೊಡಗಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಭಾರೀ ಜನದಟ್ಟಣೆಯ ಒತ್ತಡದಿಂದ ಒಂದು ಬದಿಯ ಬ್ಯಾರಿಕೇಡ್ಗಳು ಮುರಿದು ಬಿದ್ದಿದ್ದು, ಹಲವರು ಪರಸ್ಪರರ ಮೇಲೆ ಬಿದ್ದಿದ್ದಾರೆ. ಘಟನೆಯಲ್ಲಿ ಹಲವು ಮಹಿಳೆಯರು ಸೇರಿದಂತೆ ಅನೇಕ ಭಕ್ತರು ಜನಸಂದಣಿಯಡಿ ಸಿಲುಕಿಕೊಂಡಿದ್ದಾರೆ.
ಈ ನಡುವೆ ಬೆಳಗ್ಗೆ 6.30ರಿಂದ 6.45ರ ವೇಳೆಗೆ ಒಂದೇ ಸಮಯದಲ್ಲಿ ಎರಡು ವಾಹನಗಳು ದೇವಸ್ಥಾನ ಪರಿಸರಕ್ಕೆ ಆಗಮಿಸಿದ್ದರಿಂದ ಜನದಟ್ಟಣೆ ಮತ್ತಷ್ಟು ಹೆಚ್ಚಾಯಿತು ಎಂದು ಜಿಲ್ಲಾಧಿಕಾರಿ ಶೈಲೇಂದ್ರ ಕುಮಾರ್ ತಿಳಿಸಿದ್ದಾರೆ. ಆಡಳಿತವು ಜನದಟ್ಟಣೆಯನ್ನು ಅಂದಾಜಿಸಿ ಅಗತ್ಯ ವ್ಯವಸ್ಥೆ ಮಾಡಿತ್ತು. ಆದರೆ ಭಕ್ತರ ಸಂಖ್ಯೆ ಮತ್ತು ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿತು ಎಂದು ಅವರು ತಿಳಿಸಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು, ಆಡಳಿತಾಧಿಕಾರಿಗಳು ಹಾಗೂ ವೈದ್ಯಕೀಯ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಗೊಂಡ ಭಕ್ತರನ್ನು ತಕ್ಷಣವೇ ಲಖಿಸರಾಯಿ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಸದ್ಯ ದೇವಸ್ಥಾನ ಪರಿಸರದಲ್ಲಿ ರಕ್ಷಣಾ ಹಾಗೂ ಪರಿಹಾರ ಕಾರ್ಯ ಮುಂದುವರಿದಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಆಡಳಿತವು ಸಮರೋಪಾದಿಯಲ್ಲಿ ಕ್ರಮ ಕೈಗೊಂಡಿದೆ. ಭೀಕರ ದುರಂತದಿಂದ ಭಕ್ತರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖ ಮತ್ತು ಆಘಾತ ವ್ಯಕ್ತವಾಗಿದೆ.



