हुबळी–पंढरपूर मार्गावर कार्तिकी एकादशीनिमित्त विशेष रेल्वेची सुरुवात. बेळगावसह खानापूर, लोंडा येथील वारकऱ्यांना मोठा लाभ.
बेळगाव : कार्तिकी एकादशीनिमित्त पंढरपूरला जाणाऱ्या वारकऱ्यांसाठी नैऋत्य रेल्वेने विशेष आनंदाची बातमी दिली आहे. हुबळी–पंढरपूर या मार्गावर दि. 29 ऑक्टोबर ते 3 नोव्हेंबर या कालावधीत विशेष रेल्वे फेऱ्यांची घोषणा करण्यात आली आहे. त्यामुळे बेळगावसह खानापूर, लोंडा आणि परिसरातील भाविकांना मोठा दिलासा मिळाला आहे.
या रेल्वेला स्लीपरसह जनरल डबे जोडण्यात आले असून वारकऱ्यांचा प्रवास अधिक सुखकर आणि सोयीस्कर होणार आहे.
रेल्वेचा वेळापत्रक पुढीलप्रमाणे :
दि. 29, 30, 31 ऑक्टोबर तसेच 1, 2, 3 नोव्हेंबर रोजी पहाटे 5.10 वा. हुबळी येथून रेल्वे सुटणार असून सायंकाळी 4.00 वा. पंढरपूर येथे पोहोचेल. त्याच दिवशी सायंकाळी 6.00 वा. पंढरपूरहून परतीचा प्रवास सुरू होईल आणि रेल्वे दुसऱ्या दिवशी पहाटे 4.00 वा. हुबळीला पोहोचेल.
थांबे :
धारवाड, अळणावर, लोंढा, खानापूर, देसूर, बेळगाव, पाच्छापूर, गोकाक रोड, घटप्रभा, चिकोडी रोड, रायबाग, चिंचली, कुडची, उगार खुर्द, शेडबाळ, विजयनगर, मिरज, आरग, धळगाव, जत रोड, वसूड, सांगोला.
वारकऱ्यांच्या मागणीला यश :
बेळगावसह आसपासच्या वारकरी संघटनांनी पंढरपूरसाठी विशेष रेल्वे चालविण्याची मागणी काही दिवसांपूर्वी केली होती. वारकऱ्यांनी खासदार जगदीश शेट्टर यांच्याकडे विनंती केली होती, तर जोयडा येथील वारकऱ्यांनी आमदार आर. व्ही. देशपांडे यांच्या माध्यमातून रेल्वेमंत्र्यांकडे निवेदन सादर केले होते. या सातत्यपूर्ण प्रयत्नांना अखेर यश मिळाले असून वारकऱ्यांमध्ये आनंदाचे वातावरण निर्माण झाले आहे.
ಹುಬ್ಬಳ್ಳಿ–ಪಂಢರಪೂರ ಮಾರ್ಗದಲ್ಲಿ ಕಾರ್ತಿಕಿ ಏಕಾದಶಿ ಪ್ರಯುಕ್ತ ವಿಶೇಷ ರೈಲು ಸೇವೆ ಆರಂಭ.
ಬೆಳಗಾವಿ ಸೇರಿದಂತೆ ಖಾನಾಪುರ, ಲೊಂಡಾ ಭಾಗದ ಭಕ್ತರಿಗೆ ದೊಡ್ಡ ಅನುಕೂಲ.
ಬೆಳಗಾವಿ : ಕಾರ್ತಿಕಿ ಏಕಾದಶಿಯ ಪ್ರಯುಕ್ತ ಪಂಢರಪೂರ ಯಾತ್ರೆಗೆ ತೆರಳುವ ವಾರಕರಿ ಸಂಪ್ರದಾಯದ ಭಕ್ತರಿಗೆ ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆ ಸಂತಸದ ಸುದ್ದಿಯನ್ನು ನೀಡಿದೆ. ಹುಬ್ಬಳ್ಳಿ–ಪಂಢರಪೂರ ಈ ಮಾರ್ಗದಲ್ಲಿ ಅಕ್ಟೋಬರ್ 29 ರಿಂದ ನವೆಂಬರ್ 3 ರ ವರೆಗೆ ವಿಶೇಷ ರೈಲು ಸಂಚಾರದ ಘೋಷಣೆ ಮಾಡಲಾಗಿದೆ. ಇದರ ಫಲವಾಗಿ ಬೆಳಗಾವಿ, ಖಾನಾಪುರ, ಲೊಂಡಾ ಹಾಗೂ ಸುತ್ತಮುತ್ತಲಿನ ಭಕ್ತರಿಗೆ ದೊಡ್ಡ ಅನುಕೂಲ ವಾಗಲಿದೆ.
ಈ ವಿಶೇಷ ರೈಲಿನಲ್ಲಿ ಸ್ಲೀಪರ್ ಹಾಗೂ ಜನರಲ್ ಬೋಗಿಗಳನ್ನು ಸೇರಿಸಲಾಗಿದೆ, ಇದರಿಂದ ವಾರಕರಿ ಸಂಪ್ರದಾಯದ ಭಕ್ತರಿಗೆ ಪ್ರಯಾಣ ಇನ್ನಷ್ಟು ಆರಾಮದಾಯಕ ಮತ್ತು ಸುಲಭವಾಗಲಿದೆ.
ರೈಲು ವೇಳಾಪಟ್ಟಿ ಹೀಗಿದೆ :
ದಿನಾಂಕ ಅಕ್ಟೋಬರ್ 29, 30, 31 ಹಾಗೂ ನವೆಂಬರ್ 1, 2, 3 ರಂದು ಬೆಳಿಗ್ಗೆ 5.10 ಕ್ಕೆ ಹುಬ್ಬಳ್ಳಿಯಿಂದ ರೈಲು ಹೊರಟು ಸಂಜೆ 4.00 ಕ್ಕೆ ಪಂಢರ್ಪುರ ತಲುಪಲಿದೆ. ಅದೇ ದಿನ ಸಂಜೆ 6.00 ಕ್ಕೆ ಪಂಢರ್ಪುರದಿಂದ ಹಿಂದಿರುಗುವ ಪ್ರಯಾಣ ಪ್ರಾರಂಭವಾಗಿದ್ದು, ರೈಲು ಮರುದಿನ ದಿನ ಬೆಳಿಗ್ಗೆ 4.00 ಕ್ಕೆ ಹುಬ್ಬಳ್ಳಿಗೆ ತಲುಪಲಿದೆ.
ನಿಲುಗಡೆ ಸ್ಥಳ: ಧಾರವಾಡ, ಅಳನಾವರ, ಲೊಂಡಾ, ಖಾನಾಪುರ, ದೇಶೂರ, ಬೆಳಗಾವಿ, ಪಾಚಾಪುರ, ಗೋಕಾಕ್ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರೈಬಾಗ, ಚಿಂಚಲಿ, ಕುಡಚಿ, ಉಗಾರ ಕು, ಶೇಡಬಾಳ, ವಿಜಯನಗರ, ಮಿರಜ್, ಆರಗ, ಧಳಗಾವ್, ಜತ ರೋಡ್, ವಸೂದ್, ಸಾಂಗೋಲಾ.
ವಾರಕರ ಬೇಡಿಕೆಗೆ ಯಶಸ್ಸು :
ಬೆಳಗಾವಿ ಹಾಗೂ ಸುತ್ತಮುತ್ತಲಿನ ವಾರಕರಿ ಸಂಘಟನೆಗಳು ಕೆಲವು ದಿನಗಳ ಹಿಂದೆ ಪಂಢರಪೂರಕ್ಕಾಗಿ ವಿಶೇಷ ರೈಲು ವ್ಯವಸ್ಥೆ ಮಾಡಬೇಕೆಂದು ಮನವಿ ಸಲ್ಲಿಸಿದ್ದವು. ವಾರಕರಿ ಪ್ರತಿನಿಧಿಗಳು ಸಂಸದ ಜಗದೀಶ ಶೆಟ್ಟರ್ ಅವರಲ್ಲಿ ವಿನಂತಿ ಮಾಡಿದ್ದರು, ಹಾಗೆಯೇ ಜೋಯ್ಡಾದ ವಾರಕರಿಗಳು ಶಾಸಕರಾದ ಆರ್. ವಿ. ದೇಶಪಾಂಡೆ ಅವರ ಮುಖಾಂತರ ರೈಲ್ವೆ ಮಂತ್ರಿಗಳಿಗೆ ಮನವಿ ಪತ್ರ ನೀಡಿದ್ದರು. ಈ ನಿರಂತರ ಪ್ರಯತ್ನಗಳಿಗೆ ಈಗ ಫಲ ದೊರೆತಿದ್ದು, ವಾರಕರಿ ಸಂಪ್ರದಾಯದ ಭಕ್ತರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

