 
 
सार्वजनिक गणेशोत्सव मंडळांसाठी सिंगल विंडो प्रणाली. अर्ज सोमवारी दाखल करावेत ; पंडित ओगले, महामंडळ अध्यक्ष.
खानापूर : प्रत्येक वर्षी सार्वजनिक गणेशोत्सव मंडळांना उत्सवासाठी नगरपंचायत, पोलिस स्थानक व हेस्कॉम कार्यालय या ठिकाणी वेगवेगळी परवानगी घ्यावी लागत होती. यामुळे मंडळाच्या पदाधिकाऱ्यांना मोठी धावपळ करावी लागत असे. मात्र, यंदा सार्वजनिक श्री गणेशोत्सव महामंडळाच्या पाठपुराव्याला यश मिळाले असून सर्व परवानग्यांसाठी सिंगल विंडो प्रणाली अमलात आणण्यात आली आहे. सर्व मंडळांनी आपले अर्ज सोमवार, दिनांक 25 ऑगस्ट रोजी सकाळी 10 ते दुपारी 3 वाजेपर्यंत खानापूर पोलीस स्थानकात सादर करावेत, असे आवाहन सार्वजनिक श्री गणेशोत्सव महामंडळाचे अध्यक्ष पंडित ओगले यांनी केले आहे.
यावेळी नगरपंचायत, हेस्कॉम तसेच पोलिस विभागाचे अधिकारी एकाच ठिकाणी उपस्थित राहून परवानगी अर्ज स्वीकारणार आहेत. पोलिस विभागाच्या वतीने एक विशेष फॉर्म तयार करण्यात आला असून, तो सर्व मंडळांनी भरून द्यायचा आहे. अधिक माहितीसाठी मंडळाच्या पदाधिकाऱ्यांनी अध्यक्ष पंडित ओगले यांच्याशी संपर्क साधावा, असेही आवाहन करण्यात आले आहे.
ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಸಿಂಗಲ್ ವಿಂಡೋ ವ್ಯವಸ್ಥೆ : ಅರ್ಜಿ ಸೋಮವಾರ ಸಲ್ಲಿಸಬೇಕು – ಪಂಡಿತ ಒಗಲೆ ಮಹಾಮಂಡಳ ಅಧ್ಯಕ್ಷರಿಂದ ಮಾಹಿತಿ.
ಖಾನಾಪುರ : ಪ್ರತೀ ವರ್ಷ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಉತ್ಸವಕ್ಕಾಗಿ ನಗರ ಪಂಚಾಯಿತಿ, ಪೊಲೀಸ್ ಠಾಣೆ ಮತ್ತು ಹೇಸ್ಕಾಂ ಕಚೇರಿಗೆ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಾಗುತ್ತಿತ್ತು. ಇದರಿಂದ ಮಂಡಳಿ ಅಧಿಕಾರಿಗಳಿಗೆ ಹೆಚ್ಚಿನ ತೊಂದರೆ, ಓಡಾಟವಾಗುತ್ತಿತ್ತು.
ಆದರೆ ಈ ವರ್ಷ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಮುಂದಾಳತ್ವದ ಪ್ರಯತ್ನಕ್ಕೆ ಯಶಸ್ಸು ದೊರೆತಿದ್ದು, ಎಲ್ಲಾ ಅನುಮತಿಗಳನ್ನು ಪಡೆಯಲು “ಸಿಂಗಲ್ ವಿಂಡೋ ವ್ಯವಸ್ಥೆ” ಜಾರಿಗೆ ತರಲಾಗಿದೆ.
ಎಲ್ಲಾ ಮಂಡಳಿಗಳೂ ತಮ್ಮ ಅರ್ಜಿಗಳನ್ನು ಸೋಮವಾರ ಆಗಸ್ಟ್ 25ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಬೇಕೆಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ಪಂಡಿತ ಒಗಲೆ ಅವರು ಕೋರಿದ್ದಾರೆ.
ಈ ವೇಳೆ ನಗರ ಪಂಚಾಯಿತಿ, ಹೇಸ್ಕಾಂ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಹಾಜರಿದ್ದು, ಪರವಾನಗಿ ಅರ್ಜಿಗಳನ್ನು ಸ್ವೀಕರಿಸಲಿದ್ದಾರೆ. ಪೊಲೀಸ್ ಇಲಾಖೆಯ ಪರವಾಗಿ ವಿಶೇಷ ಅರ್ಜಿ ನಮೂನೆ ಸಿದ್ಧಪಡಿಸಲಾಗಿದ್ದು, ಅದನ್ನು ಪ್ರತೀ ಮಂಡಳಿಯೂ ಭರ್ತಿ ಮಾಡಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಅಧಿಕಾರಿಗಳು ಅಧ್ಯಕ್ಷ ಪಂಡಿತ ಒಗಲೆ ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
 
 
 
         
                                 
                             
 
         
         
         
        